Former minister UT Khader :‘ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಬಲವಂತದಿಂದ ಜನರನ್ನು ಎಳೆದು ತರಲಾಗ್ತಿದೆ’ : ಯು.ಟಿ ಖಾದರ್​ ಆರೋಪ

ಮಂಗಳೂರು : Former minister UT Khader : ಸೆಪ್ಟೆಂಬರ್​ 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ಕಡಲ ನಗರಿಯಲ್ಲಿ ತಯಾರಿ ಅತ್ಯಂತ ಭರದಿಂದ ಸಾಗುತ್ತಿದೆ. ಹಿಂದೂ ಕಾರ್ಯಕರ್ತ ಹಾಗೂ ಬಿಜೆಪಿ ಕಾರ್ಯಕಾರಿಣಿ ಸದಸ್ಯ ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಬಳಿಕ ಕರಾವಳಿ ಭಾಗದಲ್ಲಿ ಬಿಜೆಪಿ ಮೇಲಿನ ಅಭಿಪ್ರಾಯ ಬದಲಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ಮಂಗಳೂರಿಗೆ ಆಗಮಿಸ್ತಾ ಇದ್ದಾರೆ ಎಂದೂ ಹೇಳಲಾಗ್ತಿದೆ. ಈ ಎಲ್ಲದರ ನಡುವೆ ಇದೀಗ ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್​ ಪ್ರಧಾನಿ ಮೋದಿ ಮಂಗಳೂರು ಆಗಮನ ಕುರಿತಂತೆ ಹೊಸ ಬಾಂಬ್​ ಸಿಡಿಸಿದ್ದಾರೆ.


ಪ್ರಧಾನಿ ಮೋದಿ ಆಗಮಿಸುತ್ತಿರುವ ಬೃಹತ್​ ಸಮವಾಶಕ್ಕೆ ಜನರನ್ನು ಬಲವಂತವಾಗಿ ಕರೆತರಲಾಗುತ್ತಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ಯು.ಟಿ ಖಾದರ್​ ಆರೋಪಿಸಿದ್ದಾರೆ. ಕಾರ್ಯಕ್ರಮ ನಡೆಯುವ ಮೈದಾನ ಸಾಕಾಗುತ್ತಾ ಇಲ್ವಾ ಎನ್ನುವ ಪ್ರಶ್ನೆ ಎದುರಾಗಿದೆ. ಮೈದಾನಕ್ಕಿಂತ ದೊಡ್ಡ ಜಾಗಬೇಕು ಅಂತಾ ಕಾಣುತ್ತೆ. ಉಡುಪಿ – ದಕ್ಷಿಣ ಕನ್ನಡ ಪಿಡಿಓಗಳಿಗೆ ನೋಟಿಸ್​ ಕಳುಹಿಸಿ ಪ್ರತಿ ಗ್ರಾಮದಿಂದ 250 ಜನರನ್ನು ಕಾರ್ಯಕ್ರಮಕ್ಕೆ ತರುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ ಎಂದು ಆರೋಪಿಸಿದರು.


ಕಂದಾಯ ಇಲಾಖೆಯಿಂದ ವಿವಿ ಸೇರಿದಂತೆ ಎಲ್ಲಾ ಅಧಿಕಾರಿಗಳಿಗೂ ಕಾರ್ಯಕ್ರಮದಲ್ಲಿ ಹಾಜರು ಇರುವಂತೆ ಸೂಚನೆ ನೀಡಲಾಗಿದೆ. ಗ್ರಾಮ ಪಂಚಾಯತ್​ ಕಾರ್ಯದರ್ಶಿ, ಲೈನ್​ ಮ್ಯಾನ್​ ಅಷ್ಟೇ ಏಕೆ ನೀರು ಬಿಡುವವನಿಗೂ ನೋಟಿಸ್​ ಹೋಗಿದೆ. ಶಾಲೆ – ಕಾಲೇಜುಗಳಿಗೆ ರಜೆ ನೀಡಿ ಎಲ್ಲಾ ಮಕ್ಕಳು ಕಾರ್ಯಕ್ರಮದಲ್ಲಿ ಹಾಜರಿರಬೇಕು ಎಂದು ಸೂಚನೆ ನೀಡಲಾಗಿದೆ. ಬ್ಯಾಂಕ್​ಗಳಿಗೂ ನೋಟಿಸ್​ ಹೋಗಿದ್ದು ಬ್ಯಾಂಕ್​ನಿಂದ ಸವಲತ್ತು ಪಡೆದವರನ್ನೂ ಕರೆತರಬೇಕು ಅಂತಾ ಸೂಚನೆ ನೀಡಲಾಗಿದೆ ಎಂದು ಹೇಳಿದರು.


ಜಿಲ್ಲಾಧಿಕಾರಿಗಳೇ ಸೂಚನೆ ನೀಡಿದ ಮೇಲೆ ಕೆಳ ಹಂತದ ಅಧಿಕಾರಿಗಳು ಜನರನ್ನು ಕಾರ್ಯಕ್ರಮಕ್ಕೆ ಒಗ್ಗೂಡಿಸಲೇಬೇಕಾಗುತ್ತದೆ. ಇಲ್ಲವಾದಲ್ಲಿ ಅಧಿಕಾರಿಗಳು ಅವರ ಮನೆಯವರನ್ನಾದರೂ ಕರೆತರಬೇಕು. ಹೀಗಾಗಿ ಒಂದು ವಾರದಿಂದ ಉಡುಪಿ, ದಕ್ಷಿಣ ಕನ್ನಡದ ಎಲ್ಲಾ ಅಧಿಕಾರಿಗಳು ಬ್ಯುಸಿ ಆಗಿದ್ದಾರೆ. ಸಿಕ್ಕ ಸಿಕ್ಕ ಮೀನುಗಾರರಿಗೆಲ್ಲ ಕಿಸಾನ್​ ಕಾರ್ಡ್ ನೀಡಿ ಕಾರ್ಯಕ್ರಮಕ್ಕೆ ಬನ್ನಿ ಎಂದು ಕರೆಯಲಾಗ್ತಿದೆ. ಇಷ್ಟೆಲ್ಲ ಸೂಚನೆ ಸಿಕ್ಕ ಮೇಲೆ ಜನ ಸಾಗರವೇ ಕಾರ್ಯಕ್ರಮಕ್ಕೆ ಹರಿದು ಬರಲಿದೆ ಎಂದು ಯು.ಟಿ ಖಾದರ್​ ವ್ಯಂಗ್ಯವಾಡಿದರು.

ಇದನ್ನು ಓದಿ : Pramod Muthalik​​ :ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ತಡೆಯೊಡ್ಡಿದ್ದರೆ ಗಣೇಶನ ಶಾಪ ತಟ್ಟುತ್ತೆ : ಪ್ರಮೋದ್​ ಮುತಾಲಿಕ್​​

ಇದನ್ನೂ ಓದಿ : Laxman Savadi car accident: ಮಾಜಿ‌ ಡಿ.ಸಿ.ಎಂ ಲಕ್ಷ್ಮಣ ಸವದಿ‌ ಕಾರು ಅಪಘಾತ: ಕೂದಲೆಳೆ ಅಂತರದಲ್ಲಿ ಪಾರಾದ ಸವದಿ

Former minister UT Khader sneered at PM Modi’s program in Mangalore

Comments are closed.