Pramod Muthalik :ನನಗೆ ನಿರ್ಬಂಧ ಹೇರುವವರಿಗೆ ಗಣೇಶನ ಶಾಪ ತಟ್ಟುತ್ತೆ : ಪ್ರಮೋದ್ ಮುತಾಲಿಕ್​ ಆಕ್ರೋಶ

ಕಲಬುರಗಿ : Pramod Muthalik : ಕಲಬುರಗಿಯಲ್ಲಿ ಪ್ರಮೋದ್​ ಮುತಾಲಿಕ್​ ಸೇರಿದಂತೆ ನಾಲ್ವರ ಭಾಷಣಕ್ಕೆ ನಿಷೇಧ ಹೇರಿರುವ ವಿಚಾರವಾಗಿ ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್​ ಮುತಾಲಿಕ್​ ಆಕ್ರೋಶ ಹೊರ ಹಾಕಿದ್ದಾರೆ. ಮಂಗಳವಾರ ಕಲಬುರಗಿ ಜಿಲ್ಲೆಯ ಜೇವರ್ಗಿ ಪಟ್ಟಣದಲ್ಲಿ ಅದ್ಧೂರಿಯಾಗಿ ಗಣೇಶ ವಿಸರ್ಜನೆ ಕಾರ್ಯಕ್ರಮ ನೆರವೇರಬೇಕಿತ್ತು. ಇದು ಯಾವ ರೀತಿಯ ಸ್ವಾತಂತ್ರ್ಯ ಎಂದು ಪ್ರಮೋದ್​ ಮುತಾಲಿಕ್ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದ್ದಾರೆ.

ರಾಜ್ಯಾದ್ಯಂತ ಗಣೇಶ ಮೂರ್ತಿಯ ವಿಸರ್ಜನೆಯನ್ನು ಅತ್ಯಂತ ವಿಜೃಂಭಣೆಯಿಂದ ನಡೆಸಲಾಗುತ್ತಿದೆ . ವಿಸರ್ಜನೆ ಸಮಾರಂಭದಲ್ಲಿ ಲಕ್ಷಾಂತರ ಜನ ಸೇರಲು ಹಿಂದೂ ಸಮಾಜ ಜಾಗೃತರಾಗಿದ್ದಾರೆ. ಜೇವರ್ಗಿ ಪಟ್ಟಣದಲ್ಲಿ ಮಂಗಳವಾರದಂದು ಗಣೇಶ ವಿಸರ್ಜನೆ ಅತ್ಯಂತ ದೊಡ್ಡ ಪ್ರಮಾಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಈ ಸಮಾರಂಭದಲ್ಲಿ ನಾನು ಭಾಗಿಯಾಗಬೇಕಿತ್ತು. ಆದರೆ ಕಲಬುರಗಿ ಜಿಲ್ಲಾಧಿಕಾರಿಗಳು ನನಗೆ ನಿರ್ಬಂಧ ಹೇರಿದ್ದಾರೆ. ಇದು ಯಾವ ರೀತಿಯ ಸ್ವಾತಂತ್ರ್ಯ..? ಇದು ಡಾ. ಅಂಬೇಡ್ಕರ್​ ಸಂವಿಧಾನ. ಗಣೇಶ ಹಬ್ಬ ಬರೋದು ವರ್ಷಕ್ಕೆ ಒಂದು ಬಾರಿ. ಆದರೆ ಕಲಬುರಗಿ ಜಿಲ್ಲಾಧಿಕಾರಿ ನಮ್ಮ ಸ್ವಾತಂತ್ರ್ಯವನ್ನು ಹರಣ ಮಾಡುತ್ತಿದ್ದಾರೆ ಇದು ಅಕ್ಷಮ್ಯ ಅಪರಾಧ ಎಂದು ಗುಡುಗಿದ್ದಾರೆ ,

ಇದರ ಹಿಂದೆ ಯಾವ ಶಕ್ತಿ, ಯಾವ ಸಂಘಟನೆ ಇದೆ ಅನ್ನೋದು ಮುಖ್ಯವಲ್ಲ. ಒಬ್ಬ ವ್ಯಕ್ತಿಗೆ ಈ ರೀತಿ ಕಾರ್ಯಕ್ರಮಗಳಲ್ಲಿ ಭಾಗಿಯಾಗದಂತೆ ನಿರ್ಬಂಧ ಹೇರುವುದು ಸರಿಯಲ್ಲ. ಪ್ರಮೋದ್ ಮುತಾಲಿಕ್​ರನ್ನು ಭೇಟಿಯಾಗಬೇಕು ಎಂದು ಇಂದು ಸಾವಿರಾರು ಜನರು ನನ್ನ ದಾರಿ ನೋಡಿದ್ದಾರೆ. ಮುತಾಲಿಕ್ ಬರ್ತಾರೆ ಎಂದು ಕಾದಿದ್ದ ಜನರಿಗೆ ನಿರಾಶೆಯಾಗಿದೆ. ನಿರ್ಬಂಧ ಹೇರಿದ್ದ ಜನರಿಗೆ ನನ್ನ ಧಿಕ್ಕಾರ, ಕುತಂತ್ರದ ಹಿಂದೆ ಇರುವವರಿಗೆ ಆ ಗಣೇಶನೇ ಶಾಪ ನೀಡಲಿ ಎಂದು ಆಕ್ರೋಶ ಹೊರ ಹಾಕಿದ್ದಾರೆ. ಕೋಮು ಸೌಹಾರ್ದವನ್ನು ಕಾಪಾಡುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಡಳಿತ ಪ್ರಮೋದ್​ ಮುತಾಲಿಕ್​, ಚೈತ್ರಾ ಕುಂದಾಪುರ, ಕಾಳಿಸ್ವಾಮಿ ಸೇರಿದಂತೆ ನಾಲ್ವರಿಗೆ ನಿರ್ಬಂಧ ಹೇರಿದೆ.

ಇದನ್ನು ಓದಿ : Comedian Raju Srivastava Passes Away :ಖ್ಯಾತ ಹಾಸ್ಯನಟ ರಾಜು ಶ್ರೀವಾತ್ಸವ್​ ವಿಧಿವಶ

ಇದನ್ನೂ ಓದಿ : Parents sold their own children :ಮಾಡಿದ ಸಾಲ ತೀರಿಸಲು ಹೆತ್ತ ಕಂದಮ್ಮನನ್ನೇ ಮಾರಿದ ಪೋಷಕರು

Ganesha curses those who impose restrictions on me: Pramod Muthalik’s outrage

Comments are closed.