Hijab book launched : ಮುಸ್ಲಿಂ ವಿದ್ಯಾರ್ಥಿನಿಯರಿಂದ ‘ಹಿಜಾಬ್​’ ಪುಸ್ತಕ ಬಿಡುಗಡೆ : ಆರ್​ಎಸ್​ಎಸ್​, ಹಿಂದುತ್ವದ ವಿರುದ್ಧ ಸಿಎಫ್​​ಐ ಕಿಡಿ

ಮಂಗಳೂರು : Hijab book launched :ವಿವಾದಿತ ಹಿಜಾಬ್​​ ಪ್ರಕರಣದ ಮೂಲಕ ಸುದ್ದಿಯಾಗಿದ್ದ ವಿದ್ಯಾರ್ಥಿನಿಯರ ಮೂಲಕ ಮಂಗಳೂರಿನಲ್ಲಿ ಸಿಎಫ್​ಐ ಗರ್ಲ್ಸ್​ ಕಾನ್ಫರೆನ್ಸ್​ ನಡೆಸಲಾಯ್ತು. ಈ ಸಮಾವೇಶದಲ್ಲಿ ವಿದ್ಯಾರ್ಥಿನಿಯರು ಹಿಜಾಬ್​ ಎಂಬ ಪುಸ್ತಕವನ್ನು ಬಿಡುಗಡೆ ಗೊಳಿಸಿದ್ದಾರೆ. ಹಿಜಾಬ್​ ಹೋರಾಟದಲ್ಲಿ ಭಾಗಿಯಾಗಿದ್ದ ವಿದ್ಯಾರ್ಥಿನಿಯರ ಮೂಲಕವೇ ಈ ಪುಸ್ತಕವನ್ನು ಬಿಡುಗಡೆಗೊಳಿಸಲಾಗಿದೆ. ಈ ಪುಸ್ತಕದಲ್ಲಿ ಹಿಜಾಬ್​ ವಿವಾದದ ಕುರಿತು ಬರೆಯಲಾಗಿದೆ.

ಮಂಗಳೂರಿನ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಸಿಎಫ್ಐ ರಾಷ್ಟ್ರಾಧ್ಯಕ್ಷ ಎಂ.ಎಸ್.ಸಾಜೀದ್​ ಹಿಜಾಬ್​ ಹೋರಾಟದಲ್ಲಿ ನೀವು ಒಬ್ಬಂಟಿಯಲ್ಲ. ತಮ್ಮ ಹಕ್ಕುಗಳಿಗಾಗಿ ಕರ್ನಾಟಕದ ಯುವತಿಯರು ಹೋರಾಟಕ್ಕೆ ಇಳಿದಿದ್ದಾರೆ. ಆರ್​ಎಸ್​ಎಸ್​ ಹಾಗೂ ಹಿಂದುತ್ವ ಎಂಬ ಫ್ಯಾಶಿನಿಸಂ ವಿರುದ್ಧ ಈ ಹೋರಾಟವನ್ನು ನಡೆಸುತ್ತಿದ್ದೇವೆ ಎಂದು ಹೇಳಿದರು.

ಮುಸ್ಲಿಂ ವಿದ್ಯಾರ್ಥಿನಿಯರು ಒಂದು ಕೈಯಲ್ಲಿ ಓದು ಮತ್ತೊಂದು ಕೈಯಲ್ಲಿ ಹೋರಾಟವನ್ನು ಮಾಡಲಿದ್ದಾರೆ. ಆರ್​ಎಸ್​ಎಸ್​ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟಿದೆ. ಹಿಂದುತ್ವ ಹಾಗೂ ಹಿಂದೂ ಧರ್ಮ ಇವರೆಡರ ನಡುವಿನ ಐಡಿಯೋಲಜಿ ಬೇರೆಯೇ ಇದೆ. ಹಿಂದುತ್ವ ಎನ್ನುವುದು ಒಂದು ರಾಜಕೀಯ ಐಡಿಯೋಲಾಜಿ. ಈ ಹಿಂದುತ್ವದ ಐಡಿಯೋಲಾಜಿ ಅಡಿಯಲ್ಲಿ ಭಾರತವನ್ನು ನಿರ್ಮಿಸಲು ಆರ್​ಎಸ್​ಎಸ್​ ಪ್ರಯತ್ನಿಸುತ್ತಿದೆ. ದೇಶದಲ್ಲಿ ಬಿಜೆಪಿ ಚುನಾಯಿತ ಸರ್ಕಾರ ಇದ್ದರೂ ಸಹ ಅದರ ಹಿಂದೆ ಇರುವುದು ಇದೇ ಆರ್​ಎಸ್​ಎಸ್ ಎಂದು ಗುಡುಗಿದರು.

ನಮ್ಮ ಸಂವಿಧಾನದಂತೆ ಈ ದೇಶ ನಡೆಯುತ್ತಿಲ್ಲ . ಆರ್​ಎಸ್​ಎಸ್​ನ ಸಂವಿಧಾನದಂತೆ ಈ ದೇಶ ನಡೆಯುತ್ತಿದೆ. ದಕ್ಷಿಣ ಭಾರತದ ಕಾಲೇಜುಗಳಲ್ಲಿ ಸಿಎಫ್ ಐ ಮೇಲೆ ಕಣ್ಣಿಡಲು ಮೋಹನ್ ಭಾಗವತ್ ಹೇಳಿದ್ದಾರೆ .ನೀವು ದಕ್ಷಿಣ ಭಾರತವಲ್ಲ ಸಂಪೂರ್ಣ ದೇಶದ ಮೇಲೆ ಕಣ್ಣಿಡಿ. ಕರ್ನಾಟಕದ ಪಠ್ಯ ಪುಸ್ತಕಗಳಲ್ಲಿ ಅನೇಕ ಪಾಠಗಳನ್ನು ಕಿತ್ತು ಆರ್​ಎಸ್​ ಈ ದೇಶದ ಇತಿಹಾಸವನ್ನು ಬದಲಿಸಲು ಹೊರಟಿದೆ ಎಂದು ಕಿಡಿಕಾರಿದರು.

ಇದನ್ನು ಓದಿ : BCCI Ignored Sanju Samson : ನತದೃಷ್ಟ ಸಂಜು ಸ್ಯಾಮ್ಸನ್ ! ಮುಂಬೈಕರ್ ಭವಿಷ್ಯಕ್ಕಾಗಿ ಕೇರಳ ಆಟಗಾರನಿಗೆ ಇದೆಂಥಾ ಅನ್ಯಾಯ ?

ಇದನ್ನೂ ಓದಿ : Pakistan Captain Babar Backs Kohli : “ಧೈರ್ಯವಾಗಿರು ಗೆಳೆಯ” ಪಾಕ್ ನಾಯಕನಿಂದ ವಿರಾಟ್ ಕೊಹ್ಲಿ ಪರ ಬ್ಯಾಟಿಂಗ್ !

ಇದನ್ನೂ ಓದಿ : Hijab book launched : ಮುಸ್ಲಿಂ ವಿದ್ಯಾರ್ಥಿನಿಯರಿಂದ ‘ಹಿಜಾಬ್​’ ಪುಸ್ತಕ ಬಿಡುಗಡೆ : ಆರ್​ಎಸ್​ಎಸ್​, ಹಿಂದುತ್ವದ ವಿರುದ್ಧ ಸಿಎಫ್​​ಐ ಕಿಡಿ

Hijab book launched by Muslim students in Mangalore

Comments are closed.