Hindu-Muslim competition : ಪುರಸಭೆಗೂ ವ್ಯಾಪಿಸಿದ ಹಿಂದೂ-ಮುಸ್ಲಿಂ ಜಟಾಪಟಿ : ಕಾಂಗ್ರೆಸ್ ಅಧ್ಯಕ್ಷನ ಕುರಾನ್​ ಪಠಣಕ್ಕೆ ಬಿಜೆಪಿಯಿಂದ ಗೋ ಪೂಜೆ ಟಾಂಗ್​

ಬಾಗಲಕೋಟೆ : Hindu-Muslim competition : ರಾಜ್ಯದಲ್ಲಿ ಸಧ್ಯ ಧರ್ಮಗಳ ನಡುವಿನ ಕಿತ್ತಾಟ ತುಸು ಜೋರಾಗಿಯೇ ನಡೆಯುತ್ತಿದೆ. ಇದೇ ಕಾರಣಕ್ಕೆ ಕೆಲವು ತಿಂಗಳ ಹಿಂದೆಯಷ್ಟೇ ಮಂಗಳೂರು ರಣಾರಂಗವಾಗಿದ್ದೂ ಸಹ ನಿಮಗೆ ನೆನಪಿದ್ದಿರಬಹುದು. ಇತ್ತ ಶಿವಮೊಗ್ಗ ಕೂಡ ಸಾವರ್ಕರ್​ ವಿಚಾರವಾಗಿ ಹಿಂಸಾತ್ಮಕ ಮಾರ್ಗವನ್ನು ಹಿಡಿದಿತ್ತು. ಇದೀಗ ಧರ್ಮದಂಗಲ್​​ನ ಬಿಸಿ ಬಾಗಲಕೋಟೆ ಜಿಲ್ಲೆಗೂ ತಟ್ಟಿರುವಂತೆ ಕಾಣುತ್ತಿದೆ. ಹುನಗುಂದ ಪುರಸಭೆಯಲ್ಲಿ ಇದೀಗ ಕುರಾನ್​ ಪಠಣ ಹಾಗೂ ಗೋ ಮಾತಾ ಪೂಜೆಗಳು ನೆರವೇರಿವೆ.


ಹೌದು..! ಹುನಗುಂದ ಪುರಸಭೆಯು ಸಧ್ಯ ಧರ್ಮ ದಂಗಲ್​ಗೆ ವೇದಿಕೆ ಕಲ್ಪಿಸಿರುವಂತೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆಯಷ್ಟೇ ಪುರಸಭೆಯ ಅಧ್ಯಕ್ಷರ ಕೊಠಡಿಯಲ್ಲಿ ಮುಸ್ಲಿಂ ಧರ್ಮಗುರುಗಳಿಂದ ಕುರಾನ್​ ಪಠಣವನ್ನು ನಡೆಸಲಾಗಿತ್ತು. ಪುರಸಭೆಯಲ್ಲಿ ಕುರಾನ್​ ಪಠಣವನ್ನು ಸಹಿಸದ ಬಿಜೆಪಿ ಕಾರ್ಯಕರ್ತರು ಪುರಸಭೆಯ ಸಾಮಾನ್ಯ ಸಭೆ ಹಾಲ್​ನಲ್ಲಿ ಗೋ ಮಾತಾ ಪೂಜೆಯನ್ನು ನಡೆಸುವ ಮೂಲಕ ಠಕ್ಕರ್​ ನೀಡಿದ್ದಾರೆ.


ಹುನಗುಂದ ಪುರಸಭೆಯಲ್ಲಿ ಜುಲೈ 14ರಂದು ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಕಾಂಗ್ರೆಸ್​ ಪಕ್ಷದ ಫರ್ವೇಜ್​ ಖಾಜಿ ತಮ್ಮ ಕೊಠಡಿಗೆ ಅಂದರೆ ಪುರಸಭೆ ಅಧ್ಯಕ್ಷರ ಕೊಠಡಿಗೆ ಮುಸ್ಲಿಂ ಧರ್ಮಗುರುಗಳನ್ನು ಕರೆಯಿಸಿ ಕುರಾನ್​ ಮಂತ್ರ ಪಠಣವನ್ನು ಮಾಡಿಸಿದ್ದರು. ಕಾಂಗ್ರೆಸ್​​ನ ಈ ನಡೆಯು ಬಿಜೆಪಿಯ ನಾಯಕರನ್ನು ಕೋಪದಿಂದ ಕುದಿಯುವಂತೆ ಮಾಡಿತ್ತು.


ಇದಕ್ಕೆ ಸರಿಯಾದ ತಿರುಗೇಟು ನೀಡಬೇಕು ಎಂದು ಕಾಯುತ್ತಿದ್ದ ಬಿಜೆಪಿ ನಾಯಕರು ಬುಧವಾರದಂದು ನಡೆದ ಪುರಸಭೆಯ ಸಾಮಾನ್ಯ ಸಭೆಯ ಲಾಭವನ್ನು ಪಡೆದುಕೊಂಡಿದ್ದಾರೆ. ಸಭೆ ಆರಂಭಕ್ಕೂ ಮುನ್ನ ಗೋ ಮಾತೆಯನ್ನು ಕರೆಯಿಸಿ ಸಾಮಾನ್ಯ ಸಭೆಯ ಕೊಠಡಿಯಲ್ಲಿ ಬಿಜೆಪಿ ಸದಸ್ಯರು ಪೂಜೆ ಮಾಡಿಸಿದ್ದಾರೆ. ಈ ಮೂಲಕ ಪುರಸಭೆಯ ಕಾಂಗ್ರೆಸ್​ ಅಧ್ಯಕ್ಷ ಫರ್ವೇಝ್​​​ ಖಾಜಿಗೆ ಟಾಂಗ್​ ನೀಡಿದ್ದಾರೆ .


ಕಾಂಗ್ರೆಸ್​ನ ಮಾಜಿ ಶಾಸಕ ವಿಜಯನಾಂದ ಕಾಶಪ್ಪನವರ್​ ಹಾಗೂ ಬಿಜೆಪಿ ಶಾಸಕ ದೊಡ್ಡನಗೌಡ ಪಾಟೀಲ್​ ಬೆಂಬಲಿಗರ ನಡುವೆ ಸಣ್ಣ ಸಣ್ಣ ವಿಚಾರಕ್ಕೂ ಗಲಾಟೆ ಉಂಟಾಗುತ್ತಿದೆ. ಹೀಗಾಗಿ ಹುನಗುಂದ ಕ್ಷೇತ್ರ ಜಿದ್ದಾ ಜಿದ್ದಿನ ಕಣವಾಗಿ ಮಾರ್ಪಟ್ಟಿದೆ. ಈ ಗಲಾಟೆಯು ಇದೀಗ ಪುರಸಭೆಗೂ ವ್ಯಾಪಿಸಿದಂತಾಗಿದೆ.

ಇದನ್ನು ಓದಿ : Heavy Rainfall alert: ಮುಂದಿನ 3 ದಿನ ಭಾರಿ ಮಳೆ ಎಚ್ಚರಿಕೆ: ಶಾಲೆಗಳಿಗೆ ರಜೆ

ಇದನ್ನೂ ಓದಿ : Twist in Ramachari serial:ರಾಮಾಚಾರಿ ಮನೆಯಲ್ಲಿ ಪತ್ತೆಯಾಯ್ತು ಡ್ರಗ್ಸ್​ : ವರ್ಕೌಟ್​ ಆಗುತ್ತಾ ಚಾರು-ಮಾನ್ಯತಾ ಪ್ಲಾನ್​

Hindu-Muslim competition in the municipality: cow worship instead of Quran recitation

Comments are closed.