Bank Holiday in September: ಸೆಪ್ಟೆಂಬರ್‌ನಲ್ಲಿ 13 ದಿನಗಳು ಬ್ಯಾಂಕ್ ಮುಚ್ಚುತ್ತದೆ: ಸಂಪೂರ್ಣ ಪಟ್ಟಿ ಇಲ್ಲಿದೆ.


ನವದೆಹಲಿ: ಸಾರ್ವಜನಿಕ ರಜಾದಿನಗಳ ಜೊತೆಗೆ ದೇಶದಲ್ಲಿ ಬ್ಯಾಂಕ್ ರಜಾದಿನಗಳು (Bank Holiday in September) ಇವೆ. ಬ್ಯಾಂಕ್ ರಜೆ ಎಂದರೆ ಬ್ಯಾಂಕುಗಳು ಮುಚ್ಚಿರುವ ದಿನ. ಆರ್‌ಬಿಐ ಮಾರ್ಗಸೂಚಿಗಳ ಪ್ರಕಾರ ದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕ್‌ಗಳು ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರದಂದು ಮುಚ್ಚಲ್ಪಡುತ್ತವೆ.

ಕೆಳಗೆ ತಿಳಿಸಲಾದ ದಿನಗಳಲ್ಲಿ ಸೆಪ್ಟೆಂಬರ್ 2022 ರಲ್ಲಿ ಬ್ಯಾಂಕ್ ಮುಚ್ಚಿರುತ್ತದೆ. ಭಾರತದಾದ್ಯಂತ ಹಬ್ಬಗಳ ಆಚರಣೆ ಮತ್ತು ವಿಶೇಷ ದಿನಗಳ ಆಚರಣೆ ಮತ್ತು ವಾರಾಂತ್ಯದ ಕಾರಣ, ಸೆಪ್ಟೆಂಬರ್‌ನಲ್ಲಿ 30 ದಿನಗಳಲ್ಲಿ 13 ದಿನಗಳವರೆಗೆ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ರಜಾದಿನದ ಕ್ಯಾಲೆಂಡರ್ ಪ್ರಕಾರ, ಸೆಪ್ಟೆಂಬರ್‌ನಲ್ಲಿ ರಜಾದಿನಗಳ ಸಂಖ್ಯೆಯನ್ನು ಎಂಟಕ್ಕೆ ನಿಗದಿಪಡಿಸಲಾಗಿದೆ. ಇದು ಸೆಪ್ಟೆಂಬರ್ 10 ಅನ್ನು ಒಳಗೊಂಡಿದೆ, ಇದನ್ನು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಶ್ರೀ ನಾರಾಯಣ ಗುರು ಜಯಂತಿ ಎಂದು ಗುರುತಿಸಲಾಗುತ್ತದೆ.

ಈ ದಿನ ಎರಡನೇ ಶನಿವಾರವಾಗಿರುವುದರಿಂದ ದೇಶಾದ್ಯಂತ ಬ್ಯಾಂಕುಗಳು ಮುಚ್ಚಿರುವುದು ಗಮನಾರ್ಹ. ಸೆಪ್ಟಂಬರ್‌ 2022ರ ರಜಾದಿನಗಳ ಸಂರ್ಪೂಣ ಪಟ್ಟಿ ಈ ಕೆಳಗಿನಂತೆ ಇದೆ.

ಸೆಪ್ಟೆಂಬರ್ 2022 ರ ಬ್ಯಾಂಕ್ ರಜಾದಿನಗಳ ಪಟ್ಟಿ (Bank Holiday in September) :

ಸೆಪ್ಟೆಂಬರ್ 1: ಗಣೇಶ ಚತುರ್ಥಿಯ ಸಂದರ್ಭದಲ್ಲಿ (2ನೇ ದಿನ) ಪಣಜಿಯಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಸೆಪ್ಟೆಂಬರ್ 4: ತಿಂಗಳ ಮೊದಲ ಭಾನುವಾರ.

ಸೆಪ್ಟೆಂಬರ್ 6: ಕರ್ಮ ಪೂಜೆ ರಾಂಚಿಯಾದ್ಯಂತ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

ಸೆಪ್ಟೆಂಬರ್ 7: ಮೊದಲ ಓಣಂ, ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

ಸೆಪ್ಟೆಂಬರ್ 8: ತಿರುವೋಣಂ ದಿನದಂದು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕುಗಳನ್ನು ಮುಚ್ಚಲಾಗುತ್ತದೆ.

ಸೆಪ್ಟೆಂಬರ್ 9: ಗ್ಯಾಂಗ್‌ಟಾಕ್‌ನಲ್ಲಿ ಈ ದಿನದಂದು ಇಂದ್ರಜಾತ್ರೆ ಪ್ರಯುಕ್ತ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಸೆಪ್ಟೆಂಬರ್ 10: ಆರ್‌ಬಿಐ ಪ್ರಕಾರ ಶ್ರೀ ನಾರಾಯಣ ಗುರು ಜಯಂತಿಯಂದು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿರುವ ಬ್ಯಾಂಕ್‌ಗಳಿಗೆ ರಜೆ, ದೇಶದ ಇತರ ಭಾಗಗಳಲ್ಲಿನ ಬ್ಯಾಂಕ್‌ಗಳು ತಿಂಗಳ ಎರಡನೇ ಶನಿವಾರದ ಕಾರಣ ಕಾರ್ಯನಿರ್ವಹಿಸುವುದಿಲ್ಲ.

ಸೆಪ್ಟೆಂಬರ್ 11: ತಿಂಗಳ ಎರಡನೇ ಭಾನುವಾರ.

ಇದನ್ನೂ ಓದಿ: ಏಷ್ಯಾ ಕಪ್ 2022: ದ್ರಾವಿಡ್‌ಗೆ ಕೋವಿಡ್; ಭಾರತ ತಂಡಕ್ಕೆ ವಿವಿಎಸ್ ಲಕ್ಷ್ಮಣ್ ಕೋಚ್

ಸೆಪ್ಟೆಂಬರ್ 18: ತಿಂಗಳ ಮೂರನೇ ಭಾನುವಾರ.

ಸೆಪ್ಟೆಂಬರ್ 21: ಶ್ರೀ ನಾರಾಯಣ ಗುರು ಸಮಾಧಿ ದಿನದಂದು ಕೊಚ್ಚಿ ಮತ್ತು ತಿರುವನಂತಪುರಂನಲ್ಲಿ ಬ್ಯಾಂಕ್‌ಗಳು ಮುಚ್ಚಲ್ಪಡುತ್ತವೆ.

ಸೆಪ್ಟೆಂಬರ್ 24: ತಿಂಗಳ ನಾಲ್ಕನೇ ಶನಿವಾರ.

ಸೆಪ್ಟೆಂಬರ್ 25: ತಿಂಗಳ ನಾಲ್ಕನೇ ಭಾನುವಾರ.

ಸೆಪ್ಟೆಂಬರ್ 26: ನವರಾತ್ರಿ ಪ್ರಾರಂಭ ಇಂಫಾಲ್ ಮತ್ತು ಜೈಪುರದ ಬ್ಯಾಂಕುಗಳು ಮುಚ್ಚಲ್ಪಡುತ್ತವೆ.

Bank Holiday in September: Bank will close 13 days in September

Comments are closed.