H. Vishwanath advises the government : ದೇವೇಗೌಡರಿಂದ ಈ ಬಾರಿ ದಸರಾ ಕಾರ್ಯಕ್ರಮ ಉದ್ಘಾಟಿಸಿ : ಸರ್ಕಾರಕ್ಕೆ ಹೆಚ್​​.ವಿಶ್ವನಾಥ್​ ಸಲಹೆ

ಮೈಸೂರು : Dussehra program : ಎಸಿಬಿಯನ್ನು ರದ್ದು ಮಾಡಿದ ಹೈಕೋರ್ಟ್​ನ ತೀರ್ಪನ್ನು ವಿಧಾನ ಪರಿಷತ್​ ಸದಸ್ಯ ಹೆಚ್​.ವಿಶ್ವನಾಥ್​​ ಸ್ವಾಗತಿಸಿದ್ದಾರೆ. ಮೈಸೂರಿನಲ್ಲಿ ಈ ವಿಚಾರವಾಗಿ ಮಾತನಾಡಿದ ಅವರು ರಾಜಕೀಯ ಭ್ರಷ್ಟಾಚಾರ ತೊಲಗಿಸಲು ಲೋಕಾಯುಕ್ತವನ್ನು ತರಲಾಗಿತ್ತು. ಇಂತಹ ಲೋಕಾಯುಕ್ತವನ್ನು 2014ರ ರಾಜ್ಯ ಸರ್ಕಾರ ಶಿಥಿಲಗೊಳಿಸಿತ್ತು. ಈ ತೀರ್ಪಿನಿಂದ ಮೂರು ರಾಜಕೀಯ ಪಕ್ಷಗಳ ನಾಯಕರು ಬೆತ್ತಲಾಗಿದ್ದಾರೆ ಎಂದು ಗುಡುಗಿದರು.

ಸಿಎಂ ಬೊಮ್ಮಾಯಿ ನೀಡಿರುವ ಆದೇಶ ಪ್ರತಿ ಸಿಕ್ಕಿಲ್ಲ ಎಂದು ನೀಡಲಾಗಿರುವ ಪ್ರತಿಕ್ರಿಯೆ ಸರಿಯಿಲ್ಲ. ಹೈಕೋರ್ಟ್​ನ ಈ ಆದೇಶದ ವಿಚಾರವಾಗಿ ಸಿದ್ದರಾಮಯ್ಯ ಹಾಗೂ ಹೆಚ್​.ಡಿ ಕುಮಾರಸ್ವಾಮಿ ಉತ್ತಮವಾದ ಪ್ರತಿಕ್ರಿಯೆ ನೀಡಿಲ್ಲ. ಇಂತಹ ಹೇಳಿಕೆಗಳ ಮೂಲಕ ಮೂರೂ ಪಕ್ಷಗಳ ನಾಯಕರು ಬೆತ್ತಲಾಗಿದ್ದಾರೆ. ಲೋಕಾಯುಕ್ತರಿಂದ ಸಿಎಂ ಆಗಿದ್ದವರೇ ಇಂದು ಜೈಲಿಗೆ ಹೋಗಿದ್ದಾರೆ. ಕೆ.ಎಸ್​ ಈಶ್ವರಪ್ಪ ಮನೆಯಲ್ಲಿ ಹಣ ಎಣಿಸುವ ಮಷಿನ್​ ಸಿಕ್ಕಿತ್ತು. ಅಂದಿನಿಂದಲೇ ಲೋಕಾಯುಕ್ತರನ್ನು ಮುಚ್ಚಿ ಹಾಕುವ ಹುನ್ನಾರ ನಡೆದಿತ್ತು. ಸಿದ್ದರಾಮಯ್ಯ ಅದಕ್ಕೆ ಪೂರಕವಾಗಿ ಲೋಕಾಯುಕ್ತ ಮುಚ್ಚಿ ಹಾಕಿದರು ಎಂದು ಆರೋಪಿಸಿದ್ದಾರೆ.

ರಾಜಕೀಯ ಭ್ರಷ್ಟಾಚಾರ ನಿಗ್ರಹಕ್ಕೆ ಲೋಕಾಯುಕ್ತ ಬೇಕಾಗಿತ್ತು. ರಾಜ್ಯ ಸರ್ಕಾರ ಯಾವುದೇ ಮುಲಾಜಿಲ್ಲದೇ ಲೋಕಾಯುಕ್ತಕ್ಕೆ ಶಕ್ತಿ ನೀಡಬೇಕು. ರಾಜ್ಯ ಹಾಗೂ ದೇಶದ ಕಾನೂನುಗಳು ಇರುವುದು ಜನರ ರಕ್ಷಣೆಗಾಗಿ. ಯಾರೋ ನಾಯಕರ ರಕ್ಷಣೆಗೆ ಲೋಕಾಯುಕ್ತ ಬಲ ಪಡಿಸುವುದನ್ನು ನಿಲ್ಲಿಸಬಾರದು. ಈ ತೀರ್ಮಾನವನ್ನು ಮಾಜಿ ಪ್ರಧಾನಿ ದೇವೇಗೌಡರು ಕೂಡ ಸ್ವಾಗತಿಸಿಲ್ಲ. ಏಕೆಂದರೆ ಅವರ ಪುತ್ರ ಬಾಲಕೃಷ್ಣೇಗೌಡರ ಕೇಸ್​ ಕೂಡ ಲೋಕಾಯುಕ್ತದಲ್ಲಿದೆ. ಭ್ರಷ್ಟಾಚಾರವೆನ್ನುವುದು ಒಂದು ರೀತಿಯಲ್ಲಿ ಎಲ್ಲಾ ಮನೆಯ ದೋಸೆ ತೂತು ಎಂಬಂತಾಗಿದೆ ಎಂದು ಹೇಳಿದರು.

ಇನ್ನು ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್​​ಗೆ ಮಾಡಲು ಬೇರೆ ಕೆಲಸವಿಲ್ಲ. ಹೀಗಾಗಿ ಸಿಎಂ ಬದಲಾವಣೆ ವಿಚಾರ ಎತ್ತುತ್ತಿದ್ದಾರೆ. ಸಿಎಂ ಬದಲಾವಣೆ ಅಂತಾ ಕಾಂಗ್ರೆಸ್ ಗೆ ಹೇಳಿದವರು ಯಾರು ಎಂದು ಪ್ರಶ್ನೆ ಮಾಡಿದರು.

ನಾಡಹಬ್ಬ ದಸರಾ ಉದ್ಘಾಟನಾ ವಿಚಾರವಾಗಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್​​.ಡಿ ದೇವೇಗೌಡ , ದೇವೇಗೌಡರು ಈ ದೇಶದ ಪ್ರಧಾನಿಯಾಗಿದ್ದವರು, ಸಿಎಂ ಹಾಗೂ ಸಚಿವರಾಗಿ ಕೆಲಸ ಮಾಡಿದ್ದಾರೆ .ದೇವೇಗೌಡರು ಸದ್ಯ ರಾಜಕೀಯ ಸಂಧ್ಯಾಕಾಲದಲ್ಲಿದ್ದಾರೆ. ಇಂತಹ ದೇವೇಗೌಡರಿಂದ ದಸರಾ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಎಂದು ಮೈಸೂರಿನಲ್ಲಿ ವಿಧಾನ ಪರಿಷತ್​ ಸದಸ್ಯ ಹೆಚ್​​.ವಿಶ್ವನಾಥ್​ ಹೇಳಿದರು.

ಇದನ್ನು ಓದಿ : Johnson & Johnson : ವಿಶ್ವಾದ್ಯಂತ ಜಾನ್ಸನ್​ & ಜಾನ್ಸನ್​​ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಿದ ಕಂಪನಿ

ಇದನ್ನೂ ಓದಿ : VHP request to stop DJ : ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿಜೆಗೆ ಬ್ರೇಕ್​ ಹಾಕುವಂತೆ ವಿಹೆಚ್​ಪಿ ಮನವಿ

Inaugurate the Dussehra program this time by Deve Gowda: H. Vishwanath advises the government

Comments are closed.