VHP request to stop DJ : ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಡಿಜೆಗೆ ಬ್ರೇಕ್​ ಹಾಕುವಂತೆ ವಿಹೆಚ್​ಪಿ ಮನವಿ

ಮಂಗಳೂರು : VHP request to stop DJ : ಹಿಂದೂ ಧರ್ಮದವರಿಗೆ ಶ್ರಾವಣ ಮಾಸ ಆರಂಭವಾಯ್ತು ಅಂದರೆ ಸಾಕು ಸಾಲು ಸಾಲು ಹಬ್ಬಗಳೇ ಶುರುವಾಗುತ್ತದೆ. ಗಣೇಶ ಚತುರ್ಥಿ, ದೀಪಾವಳಿ, ದಸರಾ ಹಬ್ಬಗಳು ಸೇರಿದಂತೆ ಸಾಕಷ್ಟು ಹಬ್ಬಗಳು ಶುರುವಾಗಲಿದ್ದು ಅನೇಕ ಕಡೆಗಳಲ್ಲಿ ಮೆರವಣಿಗೆಗಳನ್ನು ಆಯೋಜಿಸಲಾಗುತ್ತದೆ.ಅದ್ಧೂರಿಯಿಂದ ನಡೆಯುವ ಮೆರವಣಿಗೆ ಕಾರ್ಯಕ್ರಮದಲ್ಲಿ ಡಿಜೆ ಹಾಡುಗಳನ್ನು ಹಾಕಲಾಗುತ್ತದೆ.


ಡಿಜೆಯ ಹೆಸರಿನಲ್ಲಿ ದೇವರ ಮೂರ್ತಿಯ ಎದುರು ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ವಿಚಿತ್ರ ಕರ್ಕಶ ಹಾಡುಗಳನ್ನು ನುಡಿಸಲಾಗುತ್ತಿದೆ. ಇದು ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ನೋವುಂಟು ಮಾಡುತ್ತಿದೆ. ಹೀಗಾಗಿ ಹಿಂದೂ ಧಾರ್ಮಿಕ ಕಾರ್ಯಕ್ರಮಗಳಲ್ಲಿ ದೇವರ ಹಾಡುಗಳ ಬದಲಾಗಿ ಡಿಜೆಗಳು ಹಾಗೂ ವಿಚಿತ್ರವಾದ ಕರ್ಕಶ ಹಾಡುಗಳನ್ನು ಹಾಕದಂತೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ವಿಶ್ವ ಹಿಂದೂ ಪರಿಷತ್​​ ಕಾರ್ಯಕರ್ತರು ಜಿಲ್ಲಾ ಪೊಲೀಸ್​ ಆಯುಕ್ತರಲ್ಲಿ ಮನವಿ ಮಾಡಿದ್ದಾರೆ.


ಈ ವಿಚಾರವಾಗಿ ಮಾತನಾಡಿದ ವಿಶ್ವ ಹಿಂದೂ ಪರಿಷತ್​​ ಜಿಲ್ಲಾಧ್ಯಕ್ಷರಾದ ಗೋಪಾಲ್​ ಕುತ್ತಾರೆ, ಕೃಷ್ಣ ಜನ್ಮಾಷ್ಟಮಿ, ಗಣೇಶೋತ್ಸವ ಹಾಗೂ ದಸರಾ ಹಬ್ಬದ ಪ್ರಯುಕ್ತ ಮೆರವಣಿಗೆಗಳನ್ನು ಮಾಡಲಾಗುತ್ತದೆ. ಮೆರವಣಿಗೆಯ ನೆಪದಲ್ಲಿ ಡಿಜೆಯಂತಹ ಹಾಡುಗಳನ್ನು ನುಡಿಸಲಾಗುತ್ತಿದ್ದು ಇದು ಹಿಂದೂ ಧಾರ್ಮಿಕ ಭಾವನೆಗಳಿಗೆ ಮಾಡಿದ ಅವಮಾನವಾಗಿದೆ. ಹೀಗಾಗಿ ಇಂತಹ ಕರ್ಕಶ ಹಾಡುಗಳು ಹಾಗೂ ಡಿಜೆಗಳಿಗೆ ಅನುಮತಿ ನೀಡದಂತೆ ಪೊಲೀಸ್​ ಆಯುಕ್ತರಲ್ಲಿ ಮನವಿ ಮಾಡಿದ್ದೇವೆಂದು ಮಾಹಿತಿ ನೀಡಿದರು.

ಇದನ್ನು ಓದಿ : Praveen Nettaru’s murder case : ಪ್ರವೀಣ್​ ನೆಟ್ಟಾರು ಕೊಲೆ ಪ್ರಕರಣದ ಅಸಲಿ ಕಾರಣ ಬಿಚ್ಚಿಟ್ಟ ಹಂತಕರು

ಇದನ್ನೂ ಓದಿ : Johnson & Johnson : ವಿಶ್ವಾದ್ಯಂತ ಜಾನ್ಸನ್​ & ಜಾನ್ಸನ್​​ ಬೇಬಿ ಪೌಡರ್ ಮಾರಾಟ ಸ್ಥಗಿತಗೊಳಿಸಿದ ಕಂಪನಿ

VHP request to stop DJ in Hindu religious events

Comments are closed.