ಶಿವಮೊಗ್ಗದಲ್ಲೂ ತಾರಕ್ಕೇರಿದ ಕೇಸರಿ-ಹಿಜಾಬ್​ ಗಲಾಟೆ : ಕಲ್ಲು ತೂರಾಟ ನಡೆಸಿ ಆಕ್ರೋಶ

ಶಿವಮೊಗ್ಗ : ಕಾಲೇಜುಗಳಲ್ಲಿ ಹಿಜಾಬ್​ ಧರಿಸುವುದಕ್ಕೆ ಅನುಮತಿ ನಿರಾಕರಿಸಿರುವ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಉಡುಪಿ ಜಿಲ್ಲೆಯ ಮುಸ್ಲಿಂ ವಿದ್ಯಾರ್ಥಿನಿಯರು ಹಾಗೂ ಪೋಷಕರು ಹೈಕೋರ್ಟ್​ ಮೊರೆ ಹೋಗಿದ್ದು ಈ ಸಂಬಂಧ ಇನ್ನೇನು ಕೆಲವೇ ಕ್ಷಣಗಳಲ್ಲಿ ಹೈಕೋರ್ಟ್ ಮಹತ್ವದ ವಿಚಾರಣೆಯನ್ನು ನಡೆಸಲಿದೆ. ಈ ನಡುವೆ ಶಿವಮೊಗ್ಗದ ಕಾಲೇಜಿನಲ್ಲಿ ಹಿಜಾಬ್​ ಹಾಗೂ ಕೇಸರಿ ಶಾಲು ವಿವಾದ ರಣಾರಂಗವಾಗಿ ಬದಲಾಗಿದ್ದು ವಿದ್ಯಾರ್ಥಿಗಳು ಕಲ್ಲು ತೂರಾಟ(stone pelting in shivamogga) ನಡೆಸಿ ಆಕ್ರೋಶ ಹೊರಹಾಕಿದ್ದಾರೆ.

ಶಿವಮೊಗ್ಗ ನಗರದ ಬಿಎಚ್​ ರಸ್ತೆಯಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಈ ಘಟನೆ ಸಂಭವಿಸಿದೆ. ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್​ ಧರಿಸುವುದನ್ನು ಪ್ರಶ್ನಿಸಿ ಕೇಸರಿ ಶಾಲು ಧರಿಸಿ ಬಂದ ಹಿಂದೂ ವಿದ್ಯಾರ್ಥಿಗಳು ಜೈ ಶ್ರೀರಾಮ್​ ಎಂದು ಘೋಷಣೆ ಕೂಗಿದ್ದಾರೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಎಸ್ಪಿ ಲಕ್ಷ್ಮೀ ಪ್ರಸಾದ್​ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದ್ದಾರೆ .

ಇತ್ತ ಸರ್ಕಾರಿ ಪದವಿ ಕಾಲೇಜು, ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಸಹ್ಯಾದ್ರಿ ಕಾಲೇಜುಗಳಲ್ಲಿಯೂ ಹಿಜಾಬ್​ – ಕೇಸರಿ ಶಾಲು ವಿವಾದ ತಾರಕಕ್ಕೇರಿದೆ. ಸರ್ಕಾರಿ ಪದವಿ ಕಾಲೇಜಿನಲ್ಲಂತೂ ವಿದ್ಯಾರ್ಥಿಗಳು ಕಲ್ಲು ತೂರಾಟ ಎಸಗಿದ್ದಾರೆ. ಪರಿಸ್ಥಿತಿ ವಿಕೋಪಕ್ಕೇರುತ್ತಿದ್ದಂತೆಯೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಲಾಠಿ ಬೀಸಿದ್ದಾರೆ.ಉಡುಪಿ ಜಿಲ್ಲೆಯಲ್ಲಿ ಆರಂಭವಾದ ಈ ಹಿಜಾಬ್​ – ಕೇಸರಿ ಶಾಲು ವಿವಾದವು ಇದೀಗ ರಾಜ್ಯದ ಬಹುತೇಕ ಕಾಲೇಜುಗಳಲ್ಲಿ ಭುಗಿಲೆದಿದ್ದಿದೆ. ಹೈಕೋರ್ಟ್ ಆದೇಶ ಇನ್ನು ಬಾಕಿ ಇರುವಾಗಲೇ ವಿದ್ಯಾರ್ಥಿಗಳ ನಡುವಿನ ಆಕ್ರೋಶ ಹಿಂಸಾಚಾರ ರೂಪ ಪಡೆದುಕೊಳ್ಳುತ್ತಿದ್ದು ಆತಂಕ ಸೃಷ್ಟಿಸಿದೆ. ವಿದ್ಯಾರ್ಥಿಗಳನ್ನು ಹತೋಟಿಗೆ ತರಲು ಪೊಲೀಸರು ಹಾಗೂ ಉಪನ್ಯಾಸಕರು ಹರಸಾಹಸ ಪಡುವಂತಾಗಿದೆ

karnataka hijab raw stone pelting in shivamogga college

ಇದನ್ನು ಓದಿ : 22 students wearing hijab : ಕುಂದಾಪುರದಲ್ಲಿ ಸರಕಾರದ ಆದೇಶಕ್ಕೆ ದೋಂಟ್‌ ಕೇರ್‌ : ಹಿಜಾಬ್‌ ಧರಿಸಿ ಬಂದ 22 ವಿದ್ಯಾರ್ಥಿನಿಯರು

ಇದನ್ನೂ ಓದಿ :Hijab Explainer: ಹಿಜಾಬ್ ಎಂದರೇನು? ಬುರ್ಖಾ, ನಿಕಾಬ್‌ಗೂ ಹಿಜಾಬ್‌ಗೂ ಇರುವ ವ್ಯತ್ಯಾಸವೇನು?

Comments are closed.