ಕೊಲೆಯ ಸುಳಿವು ನೀಡಿತ್ತು ಒಂದು ಸೆಲ್ಫಿ : ಪತ್ನಿ, ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಕೋಲಾರ : ಅವರಿಬ್ಬರೂ ಪ್ರೀತಿಸಿ ಮದುವೆಯಾಗಿದ್ದರು. ಆದ್ರೆ ಯುವಕ ಮದುವೆಯಾದ ಕೆಲವೇ ವರ್ಷಗಳಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ. ಎಲ್ಲರೂ ಆತ್ಮಹತ್ಯೆ ಅಂತಾನೇ ಭಾವಿಸಿಕೊಂಡಿದ್ದರು. ಆದರೆ ಆ ಒಂದು ಸೆಲ್ಪಿ ಆತ್ಮಹತ್ಯೆ ಪ್ರಕರಣದ ಧಿಕ್ಕನ್ನೇ ಬದಲಾಯಿಸಿತ್ತು. ಪೊಲೀಸರ ತನಿಖೆಯ ಫಲವಾಗಿ ಐದು ವರ್ಷಗಳ ಬಳಿಕ ಪತ್ನಿ ಹಾಗೂ ಆಕೆಯ ಪ್ರಿಯಕರನಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

2016ರಲ್ಲಿ ಕೋಲಾರ ಜಿಲ್ಲೆ ಕೆಜಿಎಫ್ ನಗರ ನಿವಾಸಿಯಾಗಿರುವ ವಾಸಗಿಯವರ ಎರಡನೇ ಮಗ ಸೋಮನಾಥ್ ಎಂಬಾತ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದ. ಆದರೆ ಸೋಮನಾಥ್‌ ಮನೆಯವರಿಗೆ ಅದು ಆತ್ಮಹತ್ಯೆ ಅಲ್ಲಾ ಅಂತಾ ನಿರೂಪಿಸೋದಕ್ಕೆ ಯಾವುದೇ ಕುರುಹುಗಳು ಇರಲಿಲ್ಲ. ಆದ್ರೂ ಪೊಲೀಸರಿಗೆ ನೀಡಿದ್ದ ದೂರಿನಲ್ಲಿ ಅನುಮಾನಾಸ್ಪದ ಸಾವು ಎಂದು ದಾಖಲಿಸಿದ್ದರು.

ಪ್ರಕರಣದ ತನಿಖೆಗೆ ಇಳಿದ ಪೊಲೀಸರು ಎಲ್ಲರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ ಸೋಮನಾಥ ಪತ್ನಿ ಅಶ್ವಿನಿ ಸಂತೋಷ್‌ ಎಂಬಾತನ ಜೊತೆ ತೆಗೆಯಿಸಿಕೊಂಡಿದ್ದ ಸೆಲ್ಪಿ ಪೊಲೀಸರ ಕೈಗೆ ಸಿಕ್ಕಿತ್ತು. ಇದನ್ನೇ ಆಧಾರವಾಗಿಟ್ಟುಕೊಂಡು ತನಿಖೆಗೆ ಇಳಿದ ಪೊಲೀಸರು ಸೋಮನಾಥ್‌ ಪತ್ನಿ ಅಶ್ವಿನಿ ಹಾಗೂ ಆಕೆಯ ಪ್ರಿಯಕರ ಸಂತೋಷ್‌ನನ್ನು ಬಂಧಿಸಿದ್ದರು. ವಿಚಾರಣೆಯ ವೇಳೆಯಲ್ಲಿ ಆರೋಪಿಗಳು ತಪ್ಪೊಪ್ಪಿಕೊಂಡಿದ್ದರು.

ಈ ಹಿನ್ನೆಲೆಯಲ್ಲಿ ಕೆಜಿಎಫ್‌ನ ರಾಬರ್ಟ್ಸನ್ ಪೇಟೆ ಠಾಣೆಯ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಕೆ ಮಾಡಿದ್ದಾರೆ. ಇದೀಗ ಕೊಲೆಗಾರರಾದ ಅಶ್ವಿನಿ ಹಾಗೂ ಅವಳ ಪ್ರಿಯಕರಿಗೆ ಕೋಲಾರದ ಎರಡನೇ ಹೆಚ್ಚುವರಿ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 25 ಸಾವಿರ ದಂಡ ವಿಧಿಸಿದೆ. ಈ ಮೂಲಕ ಮಗನದ್ದು ಆತ್ಮಹತ್ಯೆಯಲ್ಲ ಎಂದು ನ್ಯಾಯಾಲಯದ ಮೆಟ್ಟಿಲೇರಿದ ವೃದ್ದ ತಾಯಿಗೆ ನ್ಯಾಯ ಸಿಕ್ಕಂತಾಗಿದೆ.

ಇದನ್ನೂ ಓದಿ : ಪಾಕಿಸ್ತಾನದ ವಿರುದ್ದ ತಿರುಗಿಬಿದ್ದ ತಾಲಿಬಾನ್‌ : ಕಾಶ್ಮೀರ ವಿಚಾರದಲ್ಲಿ ತಾಲಿಬಾನ್ ಹೇಳಿದ್ದೇನು ?

ಇದನ್ನೂ ಓದಿ : ಮನೆ ಕಳ್ಳತನ ಮಾಡೋಕೆ ವಿಮಾನದಲ್ಲಿ ಬರ್ತಿದ್ದ! ಹೈಟೆಕ್‌ ಕಳ್ಳರು ಅಂದರ್‌ ಆಗಿದ್ದು ಹೇಗೆ ಗೊತ್ತಾ

(A selfie that hinted at the Somanatha murder case, life sentence for wife and lover)

Comments are closed.