SARS-COV-2 : ವಿದೇಶಿ ಪ್ರಯಾಣಿಕರಿಗೆ ಹೊಸ ರೂಲ್ಸ್‌ : ಆರೋಗ್ಯ ಇಲಾಖೆ

ಬೆಂಗಳೂರು : ರಾಜ್ಯದಲ್ಲಿ ಕೊರೊನಾ ರೂಪಾಂತರಿ ಸೋಂಕು ಪತ್ತೆಯಾದ ಬೆನ್ನಲ್ಲೇ ರಾಜ್ಯ ಆರೋಗ್ಯ ಇಲಾಖೆ ವಿದೇಶಿ ಪ್ರಯಾಣಿಕರಿಗೆ ಹೊಸ ರೂಲ್ಸ್‌ ಜಾರಿ ಮಾಡಿದೆ. ಪ್ರಮುಖ ವಾಗಿ ವಿದೇಶದಿಂದ ಬರುವವರು ನೆಗೆಟಿವ್‌ ವರದಿ ತಂದಿದ್ದರೂ ಕೊರೊನಾ ಟೆಸ್ಟ್‌ ಕಡ್ಡಾಯವಾಗಿದೆ ಎಂದಿದೆ.

ಇದೀಗ ಕೊರೊನಾ ವೈರಸ್‌ ಸೋಂಕಿನ ರೂಪಾಂತರಿ ತಳಿ (SARS-cov-2) ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲೀಗ ಕರ್ನಾಟಕದಲ್ಲಿ ಕಟ್ಟುನಿಟ್ಟಿನ ಕ್ರಮವನ್ನು ಕೈಗೊಂಡಿದೆ. ಪ್ರಮುಖ ವಾಗಿ ಬಾಂಗ್ಲಾದೇಶ, ಚೀನಾ, ನ್ಯೂಜಿಲ್ಯಾಂಡ್‌, ಜಿಂಬಾಬ್ವೆ, ಯು.ಕೆ ಸೇರಿದಂತೆ ಹಲವು ದೇಶಗಳಿಂದ ಭಾರತಕ್ಕೆ ಆಗಮಿಸುವ ಪ್ರಯಾಣಿಕರು ಕಡ್ಡಾಯವಾಗಿ ವಿಮಾನ ನಿಲ್ದಾಣದಲ್ಲಿ ಆರ್‌ಟಿಪಿಸಿಆರ್‌ ಟೆಸ್ಟ್‌ಗೆ ಒಳಪಡಬೇಕಾಗಿದೆ ಎಂದು ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಹೊರಡಿಸಿದೆ.

ಒಂದೊಮ್ಮೆ ವಿದೇಶದಿಂದ ಹೊರಡುವ ಮೊದಲೇ ಕೊರೊನಾ ಟೆಸ್ಟ್‌ ಮಾಡಿಸಿದ್ದು, ಅದರಲ್ಲಿ ನೆಗೆಟಿವ್‌ ಬಂದಿದ್ದರೂ ಕೂಡ ರಾಜ್ಯದ ಎಲ್ಲಾ ವಿಮಾನ ನಿಲ್ದಾಣಗಳಲ್ಲಿ ಮತ್ತೊಮ್ಮೆ ಆರ್‌ಟಿಪಿಸಿಆರ್‌ ಟೆಸ್ಟ್‌ಗೆ ಒಳಪಡಬೇಕು. ಕೊರೊನಾ ಟೆಸ್ಟ್‌ ವರದಿ ಬರುವವರೆಗೂ ಮನೆಗೆ ತೆರಳುವಂತಿಲ್ಲ. ಒಂದೊಮ್ಮೆ ಕೊರೊನಾ ಪಾಸಿಟಿವ್‌ ಬಂದರೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗುತ್ತದೆ. ಇಲ್ಲವಾದ್ರೆ ಮನೆಗೆ ತೆರಳಬಹುದು ಎಂದು ಹೇಳಿದೆ.

ಕೊರೊನಾ ರೂಪಾಂತರಿ ತಳಿ ಅಪಾಯಕಾರಿಯಾಗಿದ್ದು, ಆರೋಗ್ಯ ಇಲಾಖೆ ಈಗಾಗಲೇ ವಿಮಾನ ನಿಲ್ದಾಣಗಳ ಪ್ರಾಧಿಕಾರಿಗಳಿಗೆ ಸೂಚನೆಯನ್ನು ನೀಡಿದೆ. ಈಗಾಗಲೇ ವಿಮಾ ನ ನಿಲ್ದಾಣಗಳಲ್ಲಿ ಆರ್‌ಟಿಪಿಸಿಆರ್‌ ಟೆಸ್ಟ್‌ ನಡೆಸಲಾಗುತ್ತಿದೆ ಎಂದಿದೆ.

ಇದನ್ನೂ ಓದಿ : ದ.ಕ, ಕೊಡಗು ಜಿಲ್ಲೆಯಲ್ಲಿ ಟಫ್‌ ರೂಲ್ಸ್‌ : ವೀಕೆಂಡ್‌ ಕರ್ಪ್ಯೂ ಮುಂದುವರಿಕೆ

ಇದನ್ನೂ ಓದಿ : ಕೊರೊನಾ ಲಸಿಕೆ ಪಡೆಯದಿದ್ರೆ ಪಡಿತರ ಕಡಿತ : ಚರ್ಚೆ ಹುಟ್ಟು ಹಾಕಿದೆ ತಹಶೀಲ್ದಾರ್‌ ಆದೇಶ

(SARS-COV-2: New Rules for Foreign Travelers: Department of Health )

Comments are closed.