Kidnapping & Murder drama : ಸಾಲಗಾರರ ಕಾಟದಿಂದ ತಪ್ಪಿಸಿಕೊಳ್ಳಲು ಕಿಡ್ನಾಪ್​ & ಮರ್ಡರ್​ ಡ್ರಾಮಾ ಮಾಡಿ ಸಿಕ್ಕಿಬಿದ್ದ ಭೂಪ

ಮಂಡ್ಯ : Kidnapping & Murder drama : ಮೈತುಂಬಾ ಮಾಡೋ ಸಾಲ ಹರಿತವಾದ ಶೂಲಕ್ಕಿಂತಲೂ ಹೆಚ್ಚು ಅಪಾಯವಿದೆ ಎಂಬ ಮಾತಿದೆ. ವ್ಯಕ್ತಿಯೊಬ್ಬ ತನ್ನ ಆದಾಯದ ಮಿತಿಗಿಂತ ಹೆಚ್ಚು ಸಾಲ ಮಾಡಿದರೆ ಆತ ಸಂಕಷ್ಟವನ್ನು ಅನುಭವಿಸಬೇಕಾಗುತ್ತದೆ‌. ಇಲ್ಲೊಬ್ಬ ವ್ಯಕ್ತಿ ಮಿತಿಗಿಂತ ಹೆಚ್ಚು ಸಾಲ ಮಾಡಿ ಸಾಲಗಾರರ ಕಾಟ ತಾಳಲಾರದೆ ಕಿಡ್ನಾಪ್ ಮತ್ತು ಮರ್ಡರ್ ಡ್ರಾಮ ಮಾಡಿ ತಗಲಾಕಿಕೊಂಡಿದ್ದಾನೆ.

ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಚೊಟ್ಟನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು ಮನು ಎಂಬಾತನೆ ಈ ರೀತಿ ಹೈಡ್ರಾಮ ಸೃಷ್ಟಿಸಿದ ಅಸಾಮಿ‌. ಮನು ಸಾಕಷ್ಟು ಜನರಿಂದ ಸಾಲ ಪಡೆದಿದ್ದ.‌ ಆದ್ರೆ ತಗೊಂಡ ಸಾಲವನ್ನು ಮರುಪಾವತಿಸದೆ ಇದ್ದುದರಿಂದ ಸಾಲಗಾರರ‌ ಕಾಟ ಹೆಚ್ಚಾಗಿತ್ತು. ಇದಕ್ಕಾಗಿ ಖತರ್ನಾಕ್ ಪ್ಲ್ಯಾನ್ ಒಂದನ್ನು ರೆಡಿ ಮಾಡುತ್ತಾನೆ. ತನ್ನನ್ನು ಅಪಹರಿಸಿ ಕೊಲೆಯಾಗಿರೊ ರೀತಿ ಬಿಂಬಿಸಿಕೊಳ್ಳುವುದಕ್ಕೆ ಸ್ಕೆಚ್ ಹಾಕ್ತಾನೆ.

ಇದರಂತೆ ಮನೆಯಲ್ಲಿ ಕೋಳಿ ರಕ್ತ ಚೆಲ್ಲಿ ತಲೆಯ ವಿಗ್ ಬಿಸಾಡಿ ರಾತ್ರೋರಾತ್ರಿ ಎಸ್ಕೇಪ್ ಆಗುತ್ತಾನೆ. ‌ಮನೆಯಿಂದ ಹೊರಟ ಮನು ಬಳಿಕ ನಾಲೆಯೊಂದರ ಬಳಿ ಚಪ್ಪಲಿ ಬಿಟ್ಟು ಕೊಲೆ ಮಾಡಿದ್ದಾರೆಂದು ಸೀನ್ ಕ್ರಿಯೇಟ್ ಮಾಡುವುದಕ್ಕೆ ಪ್ರಯತ್ನಿಸಿರುತ್ತಾನೆ‌. ಈ ರೀತಿ ಕಿಡ್ನಾಪ್ ಮತ್ತು ಮರ್ಡರ್ ಸೀನ್ ಕ್ರಿಯೇಟ್ ಮಾಡಿ ಗೋವಾ ಟೂರ್ ಗೆ ಹೋಗಿರ್ತಾನೆ. ಗೋವಾದಲ್ಲಿ ಒಂದಷ್ಟು ದಿನಗಳ ಸುತ್ತಾಡಿದ್ದ ಮನು ಬಳಿಕ ವಾಪಸ್ಸಾಗಿ ಬೆಂಗಳೂರಿನ ಪಿ.ಜಿಯೊಂದರಲ್ಲಿ ವಾಸ್ತವ್ಯ ಮಾಡುತ್ತಾನೆ‌.

ಇತ್ತ ಆತಂಕಗೊಂಡಿದ್ದ ಮನು ಮನೆಯವರು ಅರಕೆರೆ ಪೊಲೀಸರಿಗೆ ದೂರನ್ನು ನೀಡಿದ್ದಾರೆ. ದೂರಿನ ಹಿನ್ನೆಲೆಯಲ್ಲಿ ಕೆಲವರನ್ನ ಠಾಣೆಗೆ ಕರೆ ತಂದು ಪೊಲೀಸರು ವಿಚಾರಣೆ ನಡೆಸಿದ್ದರು. ಆದ್ರೆ ವಿಚಾರಣೆ ಸಂದರ್ಭದಲ್ಲಿ ಕೊಲೆ ಮತ್ತು ಕಿಡ್ನಾಪ್ ಆಗಿರುವ ಬಗ್ಗೆ ಯಾವುದೇ ಪೂರಕ ಸಾಕ್ಷ್ಯ ಸಿಕ್ಕಿರಲಿಲ್ಲ. ಹೀಗಾಗಿ ದೂರಿನ ಕುರಿತು ಹೆಚ್ಚಿನ ವಿಚಾರಣೆ ನಡೆಸಿದಾಗ ಮನು‌ ಬೆಂಗಳೂರಿನಲ್ಲೇ ಇರೋದು ಗೊತ್ತಾಗಿದೆ. ಕೊನೆಗೆ ಇಪ್ಪತ್ತು‌ ದಿನಗಳ ಬಳಿಕ ಕುಟುಂಬಸ್ಥರು ಹಾಗೂ ಗ್ರಾಮಸ್ಥರಿಗೆ ಆತಂಕ ಹುಟ್ಟಸಿದ್ದ ಭೂಪನನ್ನ ಬೆಂಗಳೂರಿನಲ್ಲಿ ಮಂಡ್ಯ ಪೊಲೀಸರು ಪತ್ತೆ ಹಚ್ಚಿದ್ದಾರಡ.

ಪೊಲೀಸರ ಹೆಚ್ಚಿನ ವಿಚಾರಣೆ ವೇಳೆ ಸಾಲಗಾರರ ಕಾಟ ತಾಳಲಾರದೆ ಈ ಡ್ರಾಮಾ ಮಾಡಿದ್ದಾಗಿ ಮನು ತಪ್ಪೊಪ್ಪಿಗೆ ಹೇಳಿಕೊಂಡಿದ್ದಾನೆ. ಸದ್ಯ ಪೊಲೀಸರು ಈ ವಿಚಿತ್ರ ಮಿಸ್ಸಿಂಗ್ ಕೇಸ್ ನ್ನು ಟ್ರೇಸ್ ಮಾಡಿದ್ದಾರೆ‌. ಒಟ್ಟಿನಲ್ಲಿ ಸಾಲಗಾರರ ಕಾಟ ಎಂದು ಮುಂದೆ ಇನ್ನಷ್ಟು ಅವಾಂತರ ಸೃಷ್ಟಿಸಬೇಡ ಎಂದು ಪೊಲೀಸರು ಮನು ವಿಗೆ ಬುದ್ದಿ ಮಾತು ಹೇಳಿ ಎಚ್ಚರಿಕೆ ನೀಡಿದ್ದಾರೆ.

ಇದನ್ನು ಓದಿ : New jersey for Team India : ಟಿ-20 ವಿಶ್ವಕಪ್ ಗೆ ಟೀಂ ಇಂಡಿಯಾದ ನ್ಯೂ ಲುಕ್

ಇದನ್ನೂ ಓದಿ : ICC T20 World Cup India matches : ಭಾರತದ ಪಂದ್ಯಗಳು ಯಾವಾಗ, ಎಲ್ಲಿ, ಎದುರಾಳಿಗಳು ಯಾರು..? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

Kidnapping & Murder drama to escape from creditors

Comments are closed.