Rumors of child thieves : ರಾಜ್ಯದಲ್ಲಿ ಹೆಚ್ಚಾಗಿದೆ ಮಕ್ಕಳ ಕಳ್ಳರಿದ್ದಾರೆಂಬ ವದಂತಿ : ಶಾಲೆಗೆ ಮಕ್ಕಳನ್ನು ಕಳಿಸಲು ಪೋಷಕರಿಂದ ಹಿಂದೇಟು

ಕೊಪ್ಪಳ/ಧಾರವಾಡ : Rumors of child thieves : ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮತ್ತೆ ಮಕ್ಕಳ ಕಳ್ಳರ ವದಂತಿ ಹೆಚ್ಚಾಗಿದೆ‌. ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂದು ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹರಿಬಿಟ್ಡು ಜನರಲ್ಲಿ ಭೀತಿ ಉಂಟು ಮಾಡಲಾಗುತ್ತಿದೆ. ಈ ಸುಳ್ಳು ವದಂತಿಯಿಂದಾಗಿ ಕೊಪ್ಪಳ ಹಾಗೂ ಧಾರವಾಡ ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಪಾಲಕರು ಹಿಂದೇಟು ಹಾಕುತ್ತಿದ್ದಾರೆ.

ಕೊಪ್ಪಳದಲ್ಲಿ ಮಕ್ಕಳ ಕಳ್ಳರ ವದಂತಿ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಕರ್ನಾಟಕ ರಾಜ್ಯದಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎನ್ನುವುದು ಸುಳ್ಳು. ಸಾರ್ವಜನಿಕರು ಆತಂಕಕ್ಕೆ ಒಳಗಾಗದಂತೆ ಸೂಚನೆ ನೀಡಿದೆ. ಯಾರ ಬಗ್ಗೆಯಾದರೂ ಅನುಮಾನ ಬಂದರೆ ಪೊಲೀಸರಿಗೆ ಮಾಹಿತಿ ನೀಡಲು ಸೂಚನೆ ನೀಡಲಾಗಿದೆ. ಯಾವುದೇ ಕಾರಣಕ್ಕೂ ಯಾರ ಮೇಲೆ ಹಲ್ಲೆ ಮಾಡಬಾರದು. ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದರೆ 112 ತುರ್ತು ಸ್ಪಂದನಾ ನಂಬರ್ ಗೆ ಕರೆ ಮಾಡಬೇಕು. ಹತ್ತಿರದ ಪೊಲೀಸ್ ಠಾಣೆಗೆ ಅಥವಾ ಕಂಟ್ರೋಲ್ ರೂಂಗೆ ಕರೆ ಮಾಡಲು ಜಿಲ್ಲಾ ಪೊಲೀಸರು ಮನವಿ ಮಾಡಿದ್ದಾರೆ.

ಭೀತಿಯಲ್ಲಿ ಯಾರ ಮೇಲೂ ಹಲ್ಲೆ ಮಾಡುವಂತಿಲ್ಲ ಎಂದು ಹೇಳಿರುವ ಪೊಲೀಸರು, ಯಾರು ಕಾನೂನು ಕೈಗೆತ್ತಿಕೊಳ್ಳುವಂತಿಲ್ಲ, ಸುಖಾಸುಮ್ಮನೆ ವಂದತಿ ಹಬ್ಬಿಸುವಂತಿಲ್ಲ. ಬಂದ ಸುಳ್ಳು ಸುದ್ದಿಗಳನ್ನು ಹರಡಿಸುವಂತಿಲ್ಲ. ಒಂದು ವೇಳೆ ಇದನ್ನು ಉಲ್ಲಂಘಿಸಿದರೆ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದು ಕೊಪ್ಪಳ ಜಿಲ್ಲಾ ಎಸ್ಪಿ ಅರುಣಾಂಗ್ಶುಗಿರಿ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇನ್ನು ಧಾರವಾಡ ಜಿಲ್ಲೆಯಲ್ಲಿಯು ಮಕ್ಕಳ ಕಳ್ಳರ ವದಂತಿ ಜೋರಾಗಿದೆ. ಹೀಗಾಗಿ ಗ್ರಾಮೀಣ ಭಾಗದಲ್ಲಿ ಪಾಲಕರು ಆತಂಕದಲ್ಲಿದ್ದು ಅನೇಕ ಕಡೆ ತಮ್ಮದೇ ಗ್ರಾಮದಲ್ಲಿರೋ ಶಾಲೆಗೂ ಮಕ್ಕಳನ್ನು ಕಳುಹಿಸಲು ಪಾಲಕರಲ್ಲಿ ಹಿಂದೇಟು ಹಾಕುತ್ತಿದ್ದಾರೆ. ವಾಟ್ಸಾಪ್‌ನಲ್ಲಿ ವೈರಲ್ ಆಗಿರೋ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ಕೆಲ ವಿಡಿಯೋಗಳನ್ನು ನೋಡಿ ಗ್ರಾಮಕ್ಕೆ ಯಾರೇ ಅಪರಿಚಿತರೂ ಬಂದರೂ ಮಕ್ಕಳ ಕಳ್ಳರೆಂದು ಜನ ಭಾವಿಸ್ತಿದ್ದಾರೆ.

ಧಾರವಾಡ ತಾಲೂಕಿನ ಮನಸೂರ ಗ್ರಾಮದಲ್ಲಿ ಅಪರಿಚಿತರ ಸಂಶಯಾಸ್ಪದ ಓಡಾಟದಿಂದ ಗ್ರಾಮಸ್ಥರು ಭಯದಲ್ಲಿದ್ದಾರೆ. ತಮ್ಮೂರಿಗೆ ಮಕ್ಕಳ‌ ಕಳ್ಳರು ಬಂದಿದ್ದಾರೆಂಬ ಭೀತಿಯಲ್ಲಿ ಇಡೀ ಗ್ರಾಮವಿದೆ. ಕೆಲವು ಕಡೆ ಅಪರಿಚಿತರನ್ನು ಹಿಡಿದು ಗ್ರಾಮಸ್ಥರು ಪ್ರಶ್ನಿಸುತ್ತಿದ್ದಾರೆ. ಕೆಲವು ಕಡೆ ಸಂಶಯಾಸ್ಪದ ವ್ಯಕ್ತಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣಗಳು ನಡೆದಿದೆ. ಈ ಹಿನ್ನೆಲೆಯಲ್ಲಿ ಯಾರೇ ಅಪರಿಚಿತರೂ ಬಂದಲ್ಲಿ 112ಗೆ ಕರೆ ಮಾಡುವಂತೆ ಜಿಲ್ಲಾ ಪೊಲೀಸ್ ಇಲಾಖೆ ಪ್ರಕಟಣೆಯ ಮೂಲಕ ಕೋರಿಕೊಂಡಿದೆ. ಯಾರ ಮೇಲೂ ಹಲ್ಲೆ ಮಾಡದಂತೆ ಪೊಲೀಸ್ ಇಲಾಖೆ ಸೂಚಿಸಿದೆ. ಒಟ್ಟಿನಲ್ಲಿ ಸೋಷಿಯಲ್ ಮಿಡಿಯಾದಲ್ಲಿ ಹರಿದಾಡುವ ಸುದ್ದಿಗಳನ್ನು ನಂಬುವ ಮೊದಲು ಪರಾಮರ್ಶೆ ನಡೆಸಬೇಕಾದ ಅನಿವಾರ್ಯತೆ ಈ ಸಂದರ್ಭದಲ್ಲಿ ಇದೆ.

ಇದನ್ನು ಓದಿ : ICC T20 World Cup India matches : ಭಾರತದ ಪಂದ್ಯಗಳು ಯಾವಾಗ, ಎಲ್ಲಿ, ಎದುರಾಳಿಗಳು ಯಾರು..? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

ಇದನ್ನೂ ಓದಿ : Hospital In JCB :ಸರಿಯಾದ ಸಮಯಕ್ಕೆ ಬಾರದ ಆ್ಯಂಬುಲೆನ್ಸ್​ : ಜೆಸಿಬಿಯಲ್ಲಿ ಗಾಯಾಳುವನ್ನು ಸಾಗಿಸಿದ ಗ್ರಾಮಸ್ಥರು, ವಿಡಿಯೋ ವೈರಲ್​

Rumors of child thieves have increased in the state: Parents are reluctant to send their children to school

Comments are closed.