Iron Deficiency : 40 ರ ನಂತರ ಮಹಿಳೆಯರಲ್ಲಿ ಕಾಣಿಸುವ ಹಿಮೋಗ್ಲೋಬಿನ್‌ ಕೊರೆತೆಗೆ ಇದೇ ಕಾರಣ; ಅದನ್ನು ಸರಿಪಡಿಸಿಕೊಳ್ಳಲು ಹೀಗೆ ಮಾಡಿ

ನಮ್ಮ ಶರೀರಕ್ಕೆ ಐರನ್‌ (Iron) ಅಂದರೆ ಕಬ್ಬಿಣಾಂಶ ಅತಿ ಅವಶ್ಯಕ. ಇದು ದೇಹಕ್ಕೆ ಶಕ್ತಿಯನ್ನು ಕೊಡುತ್ತದೆ. ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆಯಾಗುವುದರಿಂದ ಅನೀಮಿಯಾ ಉಂಟಾಗುತ್ತದೆ. ಇದು ನಿಶ್ಯಕ್ತಿ, ಸುಸ್ತು ಮತ್ತು ಅನೇಕ ರೋಗಗಳಿಗೆ ದಾರಿ ಮಾಡಿ ಕೊಡುತ್ತದೆ. ಮಹಿಳೆಯರು ಪ್ರತಿ ತಿಂಗಳು ಋತುಚಕ್ರವನ್ನು ಎದುರಿಸಬೇಕಾಗುತ್ತದೆ. ಮಹಿಳೆಯರಲ್ಲಿ ಹಲವು ಬಾರಿ ಅಧಿಕ ರಕ್ತಸ್ರಾವ ಉಂಟಾಗುತ್ತದೆ. 40 ರ ನಂತರ ಇದರ ಸಂಭವ ಹೆಚ್ಚು. ಇದರಿಂದ ರಕ್ತದ ಕೊರತೆ ಕಾಣಿಸುತ್ತದೆ. 40 ರ ನಂತರ ಮಹಿಳೆಯರಲ್ಲಿ ಹಿಮೋಗ್ಲೋಬಿನ್‌ ಕೊರತೆ (Iron Deficiency) ಕಾಣಿಸಲು ಪ್ರಾರಂಭಿಸುತ್ತದೆ. ಹಾಲುಣಿಸುವ ತಾಯಂದಿರಲ್ಲೂ ಈ ಸಮಸ್ಯೆ ಕಾಣಿಸುತ್ತದೆ. ಹಾಗಾದರೆ ಈ ಸಮಸ್ಯೆಗೆ ಪರಿಹಾರ ಇಲ್ಲಿದೆ.

ಅನೀಮಿಯಾಕ್ಕೆ ಕಾರಣಗಳು :
ಶರೀರದಲ್ಲಿ ಯಾವಾಗ ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್‌ ಪ್ರಮಾಣ ಕಡಿಮೆಯಾದಾಗ ಅನೀಮಿಯಾ ಸಂಭವಿಸುತ್ತದೆ. ಕೆಂಪು ರಕ್ತ ಕಣಗಳಲ್ಲಿ ಹಿಮೋಗ್ಲೋಬಿನ್‌ ಒಂದು ರೀತಿಯ ಪ್ರೋಟೀನ್ ಆಗಿರುತ್ತದೆ. ಇದು ಆಮ್ಲಜನಕವನ್ನು ಟಿಶ್ಯೂಗಳಿಗೆ ತಲುಪಿಸುವ ಕೆಲಸ ಮಾಡುತ್ತದೆ. ಐರನ್‌ನ ಕೊರತೆ, ಗರ್ಭಾವಸ್ಥೆ, ರಕ್ತ ಸ್ರಾವ, ಅನುವಂಶೀಯತೆ, ಹಾರ್ಮೋನಲ್‌ ಇಂಬ್ಯಾಲೆನ್ಸ್‌ ಮತ್ತು ಮೆನೋಪಾಸ್‌ ಇವೇ ಅನೀಮಿಯಾಕ್ಕೆ ಮುಖ್ಯ ಕಾರಣಗಳು.

ಇದನ್ನೂ ಓದಿ : Anjeer Benefits : ಅಂಜೂರ : ಈ ಒಣ ಹಣ್ಣು ನಿಮ್ಮ ದೇಹದ ತೂಕ ಕಾಪಾಡಲು ಬಹಳ ಪ್ರಯೋಜನಕಾರಿ

ಅನೀಮಿಯಾದ ಲಕ್ಷಣಗಳು :

  • ತಲೆ ತಿರುಗುವುದು,
  • ಯಾವಾಗಲೂ ಸುಸ್ತಿನಿಂದ ಕೂಡಿರುವುದು
  • ತ್ವಚೆ ಬಣ್ಣ ಕಳೆದುಕೊಳ್ಳುವುದು
  • ಕೈ ಮತ್ತು ಕಾಲುಗಳು ತಂಪಾಗಿರುವುದು
  • ಕಣ್ಣಿನ ಸುತ್ತಲೂ ಕಪ್ಪು ಕಲೆಗಳು
  • ದೇಹದ ಉಷ್ಣಾಂಶದಲ್ಲಿ ಏರುಪೇರು
  • ಎದೆ ನೋವು
  • ಯಾವಾಗಲೂ ತಲೆನೋವು ಇರುವುದು

ಅನೀಮಿಯಾ ಹೋಗಲಾಡಿಸುವ ಆಹಾರಗಳು :
ಅನೀಮಿಯಾ ಹೋಗಲಾಡಿಸಲು ನಿಮ್ಮ ದಿನನಿತ್ಯದ ಆಹಾರದಲ್ಲಿ ಐರನ್‌ ಹೆಚ್ಚಿರುವ ಪದಾರ್ಥಗಳನ್ನು ಸೇರಿಸಿಕೊಳ್ಳಬೇಕು. ಅದಕ್ಕೆ ಹಸಿರು ತರಕಾರಿಗಳು, ಬೀಟ್‌ರೂಟ್‌, ಪಾಲಕ್‌, ಬ್ರೋಕ್ಲಿ, ಗೋಭಿ, ಗೆಣಸು, ನವಿಲುಕೋಸು, ಡ್ರೈ ಫ್ರುಟ್ಸ್‌, ದಾಳಿಂಬೆ ಮತ್ತು ದ್ರಾಕ್ಷಿ ಇವುಗಳನ್ನು ತಪ್ಪದೇ ಸೇವಿಸಿ. ಅನೀಮಿಯಾ ಸಮಸ್ಯೆ ಹೊಗಲಾಡಿಸಲು ಸಂತುಲಿತ ಆಹಾರದ ಜೊತೆಗೆ ನಿದ್ರೆಯೂ ಅವಶ್ಯಕ.

ಇದನ್ನೂ ಓದಿ : Desi Detox Drinks : ಈ ದೇಸಿ ಪಾನೀಯಗಳ ಬಗ್ಗೆ ಗೊತ್ತಾ; ಇವು ಹಬ್ಬದ ನಂತರ ಕಾಡುವ ಅಜೀರ್ಣ ಸಮಸ್ಯೆ ದೂರ ಮಾಡಬಲ್ಲದು

Iron Deficiency in women, 40 years above women faces this problem

Comments are closed.