Knife stabbing case: ಶಿವಮೊಗ್ಗ ಚಾಕು ಇರಿತ ಪ್ರಕರಣ : ಮೆಗ್ಗಾನ್​ ಆಸ್ಪತ್ರೆಗೆ ಬಿ.ವೈ ವಿಜಯೇಂದ್ರ ಭೇಟಿ

ಶಿವಮೊಗ್ಗ : Knife stabbing case: ಶಿವಮೊಗ್ಗ ನಗರದ ಗಾಂಧಿ ಬಜಾರ್​​ನಲ್ಲಿ ಚಾಕು ಇರಿತಕ್ಕೊಳಗಾಗಿ ಮೆಗ್ಗಾನ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಪ್ರೇಮ್​ ಸಿಂಗ್​​ನರನ್ನು ಇಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.ಮೆಗ್ಗಾನ್​ ಆಸ್ಪತ್ರೆಗೆ ಭೇಟಿ ನೀಡಿ ಚಾಕು ಇರಿತಕ್ಕೊಳಗಾದ ಪ್ರೇಮ್​ ಸಿಂಗ್​​ ಆರೋಗ್ಯ ವಿಚಾರಿಸಿದರು. ಇದಾದ ಬಳಿಕ ಮಾತನಾಡಿದ ಬಿ.ವೈ ವಿಜಯೇಂದ್ರ, ಪ್ರೇಮ್​ ಸಿಂಗ್​ಗೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಹೇಳಿದ್ದಾರೆ.


ಚಾಕು ಇರಿತಕ್ಕೊಳಗಾದ ಪ್ರೇಮ್​ ಸಿಂಗ್​​ರ ಆರೋಗ್ಯ ವಿಚಾರಿಸಿದ್ದೇನೆ. ದೇವರು ದೊಡ್ಡವನು, ಕೃತ್ಯ ನಡೆದ ತಕ್ಷಣವೇ ಒಂದು ನಿಮಿಷವೂ ತಡಮಾಡದೇ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಆದಷ್ಟು ಬೇಗ ಆಸ್ಪತ್ರೆಗೆ ಸೇರಿಸಿದ ಹಿನ್ನೆಲೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಇನ್ನೂ ಎಂಟು ದಿನಗಳ ಕಾಲ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಯಲಿದೆ.


ಇಲ್ಲಿ ಯಾರು ಏನು ಬೇಕಿದ್ದರೂ ಮಾಡಬಹುದು ಎಂಬ ಮನಸ್ಥಿತಿ ಮೂಡುತ್ತಿದೆ. ನಮ್ಮ ಸರ್ಕಾರ ಈ ಬಗ್ಗೆ ಕಠಿಣ ಕ್ರಮ ಕೈಗೊಳ್ಳಲಿದೆ. ನಾವೆಲ್ಲ ಸಿಎಂ ಬೊಮ್ಮಾಯಿಯನ್ನು ಭೇಟಿಯಾಗಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತೇವೆ. ಪದೇ ಪದೇ ಈ ಪ್ರಕರಣದ ಹಿಂದೆ ಯಾವ ಸಂಘಟನೆಯ ಕೈವಾಡವಿದೆ ಎಂದು ಹೇಳೋದಿಲ್ಲ. ಏಕೆಂದರೆ ಅದು ಎಲ್ಲರಿಗೂ ತಿಳಿಸಿದರುವ ವಿಚಾರ . ಓಪನ್​ ಸೀಕ್ರೆಟ್​ ಎಂದು ಹೇಳಿದರು.


ಇದಕ್ಕೂ ಮುನ್ನ ಶಿವಮೊಗ್ಗ ನಗರದಲ್ಲಿ ಇದೇ ವಿಚಾರವಾಗಿ ಮಾತನಾಡಿದ್ದ ಬಿ.ವೈ ವಿಜಯೇಂದ್ರ, ಈ ಪುಡಾರಿಗಳಿಗೆ ದೇಶದ ಇತಿಹಾಸ ಏನು ಎಂಬುದು ತಿಳಿದಿಲ್ಲ. ಇವರೆಲ್ಲ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾಗಿದ್ದ ಮಹಾನ್​ ವ್ಯಕ್ತಿಗಳ ಬಗ್ಗೆ ಅಪಚಾರ ಎಸಗಿದ್ದಾರೆ. ಮಂಗಳೂರಿನಲ್ಲಿ ನಡೆದ ಘಟನೆಯು ಈಗ ಶಿವಮೊಗ್ಗದಲ್ಲಿ ಪುನರಾವರ್ತನೆಯಾಗಿದೆ. ಚಾಕು ಹಾಕಿದವರಿಗೆ ಹಾರ ಹಾಕಿ ಸನ್ಮಾನವಂತೂ ಮಾಡೋದಿಲ್ಲ. ಪೊಲೀಸರು ಏನು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಂಡಿದ್ದಾರೆ ಎಂದು ಹೇಳಿದರು.

ಇದನ್ನು ಓದಿ : Background of main accused Nadeem : ಶಿವಮೊಗ್ಗ ಗಲಾಟೆ ಪ್ರಕರಣ : ಪ್ರಮುಖ ಆರೋಪಿ ನದೀಮ್​ ಹಿಂದಿದೆ ಕರಾಳ ಇತಿಹಾಸ

ಇದನ್ನೂ ಓದಿ : cleared all flexes in shivamogga : ಶಿವಮೊಗ್ಗ ಗಲಾಟೆ ಪ್ರಕರಣ : ನಗರಾದ್ಯಂತ ಎಲ್ಲಾ ಫ್ಲೆಕ್ಸ್​ಗಳನ್ನು ತೆರವುಗೊಳಿಸಿದ ಪಾಲಿಕೆ

Knife stabbing case: B Y Vijayendra visits Megan Hospital

Comments are closed.