Background of main accused Nadeem : ಶಿವಮೊಗ್ಗ ಗಲಾಟೆ ಪ್ರಕರಣ : ಪ್ರಮುಖ ಆರೋಪಿ ನದೀಮ್​ ಹಿಂದಿದೆ ಕರಾಳ ಇತಿಹಾಸ

ಶಿವಮೊಗ್ಗ : Background of main accused Nadeem : ಇಷ್ಟು ದಿನ ಗಲಾಟೆ – ಸಂಘರ್ಷಗಳು ಅಂದರೆ ದಕ್ಷಿಣ ಕನ್ನಡ ಜಿಲ್ಲೆ ಹೆಸರು ಮೊದಲು ಕೇಳಿ ಬರ್ತಿದೆ. ಆದರೆ ಇದೀಗ ಈ ಸಾಲಿಗೆ ಶಿವಮೊಗ್ಗ ನಗರ ಸೇರಿಕೊಂಡಿದೆ. ನಿನ್ನೆ ದೇಶದ ಸ್ವಾತಂತ್ರ್ಯ ದಿನಾಚರಣೆಯಂದು ವೀರ ಸಾವರ್ಕರ್​ ಫೋಟೋ ಅಳವಡಿಕೆ ವಿಚಾರದಲ್ಲಿ ನಡೆದ ಗಲಾಟೆಯು ಇಬ್ಬರು ವ್ಯಕ್ತಿಗಳ ಮೇಲೆ ಚಾಕು ಇರಿತ ಮಾಡುವವರೆಗೂ ಹೋಗಿದೆ. ಫ್ಲೆಕ್ಸ್​ ಅಳವಡಿಕೆ ವಿಚಾರದಲ್ಲಿ ಗಲಾಟೆ ಉಂಟಾದ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯು ರಾತ್ರೋರಾತ್ರಿ ನಗರದಲ್ಲಿನ ಎಲ್ಲಾ ಫ್ಲೆಕ್ಸ್​ಗಳನ್ನು ತೆರವುಗೊಳಿಸಿದೆ.


ಇನ್ನು ಶಿವಮೊಗ್ಗ ಜಿಲ್ಲೆಯ ಗಾಂಧಿ ಬಜಾರ್​​ ಬಟ್ಟೆ ಅಂಗಡಿಯನ್ನು ಹೊಂದಿದ್ದ ಪ್ರೇಮ್​ ಸಿಂಗ್​​ ಮೇಲೆ ಚಾಕು ಇರಿತ ಮಾಡಿದ್ದ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಶಿವಮೊಗ್ಗ ಜೆಸಿ ನಗರದ ನದೀಮ್ (25) ಹಾಗೂ ಬುದ್ಧ ನಗರದ ಅಬ್ದುಲ್ ರೆಹಮಾನ್ (25)ರನ್ನು ಪೊಲೀಸರು ಬಂಧಿಸಿದ್ದಾರೆ.

ಅಂದಹಾಗೆ ಪ್ರೇಮ್​​ಸಿಂಗ್​​ಗೆ ಚಾಕು ಇರಿದ ನದೀಮ್​ ಹಿಂದೆ ಒಂದು ಕರಾಳ ಇತಿಹಾಸವಿದೆ. 2016ರಲ್ಲಿ ಶಿವಮೊಗ್ಗದಲ್ಲಿ ಇದೇ ರೀತಿಯಲ್ಲಿ ಕೋಮು ಗಲಭೆ ಉಂಟಾಗಿತ್ತು. ಈ ಕೋಮು ಗಲಭೆಯಲ್ಲಿಯೂ ಇದೇ ನದೀಮ್​ ಪ್ರಮುಖ ಪಾತ್ರ ವಹಿಸಿದ್ದ. 2016ರ ಗಣೇಶೋತ್ಸವದ ಸಂದರ್ಭದಲ್ಲಿ ಈತ ಕಲ್ಲು ತೂರಾಟ ಹಾಗೂ ಚಪ್ಪಲಿ ತೂರಾಟ ನಡೆಸಿದ್ದ. ಈ ಮೂಲಕ ಗಲಭೆ ಹೆಚ್ಚಾಗಲು ನದೀಮ್​ ಕಾರಣನಾಗಿದ್ದ. ಇದೀಗ ಚಾಕು ಇರಿತದ ಮೂಲಕ ಮತ್ತೆ ಕೋಮು ಗಲಭೆ ಸೃಷ್ಟಿಸಲು ಈ ನದೀಮ್​ ಯತ್ನಿಸಿದ್ದಾನೆ.


ಇನ್ನು ಗಾಂಧಿ ಬಜಾರ್​ನಲ್ಲಿ ಪ್ರೇಮ್​ ಸಿಂಗ್​​ ಎಂಬ ಯುವಕನಿಗೆ ಚಾಕು ಇರಿತ ಪ್ರಕರಣದಲ್ಲಿ ಪ್ರಮುಖ ಆರೋಪಿ ಮಾರ್ನಾಮಿಬೈಲ್ ನ ಜಬೀವುಲ್ಲಾ ಮೇಲೆ ಪೊಲೀಸರು ಫೈರಿಂಗ್​ ನಡೆಸಿದ್ದಾರೆ. ಶಿವಮೊಗ್ಗದ ತೀರ್ಥಹಳ್ಳಿ ರಸ್ತೆಯಲ್ಲಿ ತಡರಾತ್ರಿ ಈ ಘಟನೆ ಸಂಭವಿಸಿದೆ. ತೀರ್ಥಹಳ್ಳಿಯ ನಮೋ ಶಂಕರ ಲೇಔಟ್​​ನಲ್ಲಿ ಪೊಲೀಸರು ಜಬೀವುಲ್ಲಾ ಕಾಲಿಗೆ ಗುಂಡೇಟು ಹಾರಿಸಿದ್ದಾರೆ. ಆರೋಪಿಯ್ನು ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದನ್ನು ಓದಿ : cleared all flexes in shivamogga : ಶಿವಮೊಗ್ಗ ಗಲಾಟೆ ಪ್ರಕರಣ : ನಗರಾದ್ಯಂತ ಎಲ್ಲಾ ಫ್ಲೆಕ್ಸ್​ಗಳನ್ನು ತೆರವುಗೊಳಿಸಿದ ಪಾಲಿಕೆ

ಇದನ್ನೂ ಓದಿ : Bigg Boss Ott Kannada Season 1 : ಸೋನುಗೌಡಗೆ ಕ್ಲಾಸ್​ ತೆಗೆದುಕೊಂಡ ಕಿಚ್ಚ ಸುದೀಪ

Shivamogga riot case: Background of main accused Nadeem

Comments are closed.