Murugashri to weaken the POCSO case : ಪೋಕ್ಸೋ ಪ್ರಕರಣ ದುರ್ಬಲಗೊಳಿಸಲು ಮುರುಘಾಶ್ರೀಗಳ ಸಮ್ಮುಖದಲ್ಲಿ ನಡೆಯಿತಾ ಸಂಧಾನ ಸಭೆ

ಚಿತ್ರದುರ್ಗ : ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬ್ರಹನ್ಮಠದ ಮುರುಘಾಶ್ರೀಗಳ ವಿರುದ್ಧ ಎದುರಾಗಿರುವ ಲೈಂಗಿಕ ದೌರ್ಜನ್ಯ ಪ್ರಕರಣ (Murugashri to weaken the POCSO case) ರಾಜ್ಯದಲ್ಲಿ ಭಾರೀ ಸಂಚನವನ್ನು ಸೃಷ್ಟಿಸಿದೆ. ಮುರುಘಾಶ್ರೀಗಳ ವಿರುದ್ಧ ಲೈಂಗಿಕ ದೌರ್ಜನ್ಯದ ಆರೋಪವನ್ನು ಹೊರಿಸಿರುವ ಇಬ್ಬರು ಮಕ್ಕಳು ಇಂದು ಮುಂಜಾನೆ 3:30ರ ಸುಮಾರಿಗೆ ಬಾಲಮಂದಿರಕ್ಕೆ ಆಗಮಿಸಿದ್ದಾರೆ. ಚಿತ್ರದುರ್ಗದ ಜಿಲ್ಲಾಪಂಚಾಯ್ತಿ ಬಳಿ ಇರುವ ಈ ಬಾಲ ಮಂದಿರಕ್ಕೆ ವಿದ್ಯಾರ್ಥಿನಿಯರು ಪೊಲೀಸ್​ ಭದ್ರತೆಯೊಂದಿಗೆ ಆಗಮಿಸಿದ್ದಾರೆ. ಇಂದು ಈ ಮಕ್ಕಳನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಸಿದ್ಧತೆ ನಡೆಸಲಾಗುತ್ತಿದೆ.

ಇನ್ನು ವಿದ್ಯಾರ್ಥಿಗಳು ಬಾಲ ಮಂದಿರಕ್ಕೆ ಆಗಮಿಸುತ್ತಿದ್ದಂತೆಯೇ ಡಿವೈಎಸ್ಪಿ ಅನಿಲ್ ಕುಮಾರ್​ ಕೂಡ ಬಾಲ ಮಂದಿರಕ್ಕೆ ಆಗಮಿಸಿದ್ದಾರೆ. ಡಿವೈಎಸ್ಪಿ ಅನಿಲ್ ಕುಮಾರ್ ನಗರ ಠಾಣೆ ಪಿಎಸ್ಐ ದೀಪು ಸೇರಿದಂತೆ ಐದು ಜನರ ತಂಡ ಬಾಲಮಂದಿರಕ್ಕೆ ಆಗಮಿಸಿ ಮಕ್ಕಳಿಂದ ಪ್ರಕರಣ ಸಂಬಂಧ ಹೇಳಿಕೆಗಳನ್ನು ಪಡೆದುಕೊಂಡಿದ್ದಾರೆ. ಮಹಿಳಾ ಪೊಲೀಸರು ಮಕ್ಕಳನ್ನು ವಿಚಾರಣೆಗೆ ಒಳಪಡಿಸಿದ್ದು ಬಿಗಿ ಪೊಲೀಸ್​ ಭದ್ರತೆಯೊಂದಿಗೆ ವಿದ್ಯಾರ್ಥಿನಿಯರು ತಮ್ಮ ಹೇಳಿಕೆಗಳನ್ನು ನೀಡಿದ್ದಾರೆ.

ಇನ್ನು ಇಂದು ವಿದ್ಯಾರ್ಥಿಗಳ ಜೊತೆಯಲ್ಲಿ ಮುರುಘಾಶ್ರೀಗಳನ್ನೂ ಮೆಡಿಕಲ್​​ ಟೆಸ್ಟ್​ಗೆ ಒಳಪಡಿಸುವ ಸಾಧ್ಯತೆಯಿದೆ ಎನ್ನಲಾಗಿದೆ. ವಿದ್ಯಾರ್ಥಿಗಳನ್ನು ಚಿತ್ರದುರ್ಗದಲ್ಲಿ ಜಡ್ಜ್​​ ಮುಂದೆ ಪೊಲೀಸರು ಹಾಜರುಪಡಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ವಿದ್ಯಾರ್ಥಿನಿಯರನ್ನು ಕೋರ್ಟ್​ಗೆ ಕರೆದೊಯ್ಯಲಾಗಿದೆ. ವಿದ್ಯಾರ್ಥಿಗಳ ಹೇಳಿಕೆಯ ಬಳಿಕ ಅವರನ್ನು ಮೆಡಿಕಲ್​ ಟೆಸ್ಟ್​ಗೆ ಕಳಿಸಲಾಗುತ್ತದೆ.

ಇನ್ನು ಈ ಎಲ್ಲದರ ನಡುವೆ ಶ್ರೀಗಳ ವಿರುದ್ಧ ಎದುರಾಗಿರುವ ಆರೋಪಗಳ ನಡುವೆಯೇ ಚಿತ್ರದುರ್ಗದ ಬಳಿಯ ಗ್ರಾಮವೊಂದರಲ್ಲಿ ಮುರುಘಾಶ್ರೀ ಹಾಗೂ ಬಸವರಾಜನ್​​ ನಡುವೆ ನೇರ ಮಾತುಕತೆ ನಡೆದಿದೆ ಎಂಬ ಮಾಹಿತಿ ಕೇಳಿ ಬಂದಿದೆ. ಸಿದ್ದಾಪುರ ಗ್ರಾಮದಲ್ಲಿ ಸೇರಿದ ಮುರುಘಾಶ್ರೀ ಹಾಗೂ ಬಸವರಾಜನ್​ ಪೋಕ್ಸೋ ಪ್ರಕರಣವನ್ನು ದುರ್ಬಲಗೊಳಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗ್ತಿದೆ. ಕೆಲವು ಮಠಾಧೀಶರು ಹಾಗೂ ಮುಖಂಡರ ಸಮ್ಮುಖದಲ್ಲಿ ನಡೆದ ಈ ಸಂಧಾನ ಯಶಸ್ವಿಗೊಂಡಿದೆ ಎಂದು ಹೇಳಲಾಗಿದೆ.

ಇದನ್ನು ಓದಿ : clashes on live in relationship :ಲಿವ್​ ಇನ್​ ರಿಲೇಶನ್​ಶಿಪ್​​ನಲ್ಲಿ ಬಿರುಕು : ಸಂಗಾತಿಯಿಂದಲೇ ವ್ಯಕ್ತಿಗೆ ಶಾಕ್​ ಟ್ರೀಟ್​ಮೆಂಟ್​

ಇದನ್ನೂ ಓದಿ : Arkavathi trouble : ಮಾಜಿ ಸಿಎಂ ಸಿದ್ದರಾಮಯ್ಯಗೆ ಮತ್ತೆ ಅರ್ಕಾವತಿ ಸಂಕಷ್ಟ: ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ ದೂರುದಾರ

Murugashri to weaken the POCSO case

Comments are closed.