Kuchalakki distribution : ಕರಾವಳಿ ಜಿಲ್ಲೆಗಳಲ್ಲಿ ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಣೆಗೆ ಕೇಂದ್ರ ಸರ್ಕಾರದ ಅನುಮತಿ

ಉಡುಪಿ : ( Kuchalakki distribution ) ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಕೇಂದ್ರ ಸರ್ಕಾರ ಕುಚಲಕ್ಕಿ ಖರೀದಿಸಿ, ಪಡಿತರ ವ್ಯವಸ್ಥೆಯಡಿ ಕುಚಲಕ್ಕಿಯನ್ನು ವಿತರಿಸುವುದಾಗಿ ಕೇಂದ್ರ ಸರ್ಕಾರ ಅನುಮತಿ ನೀಡಿದೆ .

ಈ ಹಿಂದೆ ಕಳೆದ ವರ್ಷ ಕೇಂದ್ರ ಸರ್ಕಾರ ಸ್ಥಳೀಯ ಕುಚಲಕ್ಕಿ ಖರೀದಿ ವಿತರಿಸಲು ಅನುಮತಿ ನೀಡಿದ ಸಮಯ ಸ್ಥಳೀಯ ಕುಚಲಕ್ಕಿ ಸಿಗದೆ ಈ ಕಾರ್ಯ ವಿಳಂಭವಾಗಿದ್ದ ಕಾರಣ , ಹೊರ ರಾಜ್ಯಗಳ ಕುಚಲಕ್ಕಿಯನ್ನೇ ವಿತರಿಸಲಾಗಿತ್ತು(Kuchalakki distribution ). ಈ ನಿಟ್ಟಿನಲ್ಲಿ ಕುಚಲಕ್ಕಿ ಖರೀದಿಗೆ ಮೊದಲೆ ಅನುಮತಿ ನೀಡಿದ್ದರಿಂದ ಹೆಚ್ಚಿನ ರೀತಿಯಲ್ಲಿ ಕುಚಲಕ್ಕಿ ಸಿಗಬಹುದು .

ಗದ್ದೆಗಳಲ್ಲಿ ಈ ತಿಂಗಳಿನಿಂದ ಕಟಾವು ಶುರುವವಾಗಲಿದ್ದು , ಆದಷ್ಟು ಬೇಗ ಭತ್ತ ಖರೀದಿ ಕೇಂದ್ರವನ್ನು ಸ್ಥಾಪಿಸಿ , ರೈತರಿಗೆ ಇದರ ಕುರಿತಾಗಿ ಸೂಕ್ತ ಮಾಹಿತಿಯನ್ನು ನೀಡುವ ಕೆಲಸ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕೃಷಿ ಇಲಾಖೆ ಮಾಡಬೇಕಿದೆ.

ಇದನ್ನೂ ಓದಿ : PLK 2022 Bengaluru Bulls : “ಗೂಳಿ” ಇಲ್ಲದೆ ಮೊದಲ ಪಂದ್ಯ ಗೆದ್ದ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್

ಇದನ್ನೂ ಓದಿ : Indian Air Force Day:ಭಾರತೀಯ ವಾಯುಪಡೆಯ ದಿನ: ಮಹತ್ವ ಮತ್ತು ಇತಿಹಾಸ

ಪ್ರತಿ ತಿಂಗಳು ಪಡಿತರ ವ್ಯವಸ್ಥೆಯಡಿ ಕುಚಲಕ್ಕಿ ವಿತರಿಸಲು ಸರಾಸರಿ ಒಂದು ಲಕ್ಷ ಕ್ವಿಂಟಾಲ್‌ ಅಕ್ಕಿ ಬೇಕಾಗುತ್ತದೆ. ಕೇಂದ್ರ ಸರ್ಕಾರವು ಈ ಹಿಂದೆ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಗೇಡ್‌ ಎ ಭತ್ತಕ್ಕೆ 1950 ರೂ . ಸಮಾನ್ಯ ಭತ್ತಕ್ಕೆ 1940 ರೂ ಕ್ವಿಂಟಾಲ್‌ ಗೆ ನೀಡಿ ಖರೀದಿಸಲಾಗುತ್ತಿತ್ತು . ಇದೀಗ ರೈತರು ಬೆಂಬಲ ಬೆಲೆ ಹೆಚ್ಚಿಸುವುದಾಗಿ , ಇಲ್ಲದಿದ್ದರೆ ರಾಜ್ಯಸರ್ಕಾರದಿಂದ ಕೊಡುವುದಾಗಿ ಆಗ್ರಹವನ್ನು ಮಾಡುತ್ತಿದ್ದಾರೆ.

ಇದನ್ನೂ ಓದಿ : Educational Adoption Scheme: ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಶೈಕ್ಷಣಿಕ ದತ್ತು ಯೋಜನೆ

ಇದನ್ನೂ ಓದಿ : Medical College : ವೈದ್ಯಕೀಯ ಕಾಲೇಜುಗಳಿಂದ ಶುಲ್ಕ ಏರಿಕೆ ಪ್ರಸ್ತಾಪ: ವಿದ್ಯಾರ್ಥಿಗಳಿಗೆ ಕಾದಿದೆ ಶಾಕ್

ಸ್ಥಳೀಯ ಕುಚಲಕ್ಕಿ ವಿತರಣೆಗೆ ಅನೇಕ ವರ್ಷದಿಂದ ಬೇಡಿಕೆಯಿದ್ದು , ಉಭಯ ಜಿಲ್ಲೆಗಳಿಂದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ರಾಜ್ಯ ಸರ್ಕಾರವು ಅದನ್ನು ಕೇಂದ್ರ ಸರ್ಕಾರಕ್ಕೆ ಒಪ್ಪಿಸಿದ್ದು , ಇದೀಗ ಕೇಂದ್ರ ಸರ್ಕಾರ ಉಡುಪಿ , ದಕ್ಷಿಣ ಕನ್ನಡ, ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆದ ವಿವಿಧ ಪ್ರಭೇದಗಳ ಕುಚಲಕ್ಕಿಯ ತಳಿಯನ್ನು ಸರ್ಕಾರ ಕನಿಷ್ಠ ಬೆಂಬಲ ಬೆಲೆಯಡಿ ಅದನ್ನು ಖರೀದಿಸಿ , ಪಡಿತರ ಮೂಲಕ ಅದನ್ನು ಕರಾವಳಿ ಜಿಲ್ಲಾ ವ್ಯಾಪ್ತಿಯಲ್ಲಿ ವಿತರಿಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ.

Central government has given permission to buy kuchalakki in coastal districts of the state and distribute kuchalakki under rationing system.

Comments are closed.