Educational Adoption Scheme: ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಶೈಕ್ಷಣಿಕ ದತ್ತು ಯೋಜನೆ

ತುಮಕೂರು : (Educational Adoption Scheme) ಸರ್ಕಾರಿ ಶಾಲಾ-ಕಾಲೇಜುಗಳ ಅಭಿವೃದ್ಧಿಗೆ ಶೈಕ್ಷಣಿಕ ದತ್ತು ಯೋಜನೆ ಸಹಕಾರಿಯಾಗಲಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ. ಚನ್ನಬಸವಪ್ಪ ಅಭಿಪ್ರಾಯಪಟ್ಟಿದ್ದಾರೆ.ತುಮಕೂರು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶೈಕ್ಷಣಿಕ ದತ್ತು ಯೋಜನೆ ಕಾರ್ಯಕ್ರಮದ ಪೂರ್ವಭಾವಿ ಸಭೆ ನಡೆದಿದ್ದು , ಸಭೆಯ ಅಧ್ಯಕ್ಷತೆ ವಹಿಸಿ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ ಮಾತನಾಡಿದರು.

ಸರ್ಕಾರಿ ಅಧಿಕಾರಿಗಳು , ಸರ್ಕಾರಿ ಶಾಲಾ- ಕಾಲೇಜು (Educational Adoption Scheme) ಗಳನ್ನು ಶೈಕ್ಷಣಿಕವಾಗಿ ದತ್ತು ಪಡೆದು ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ಜವಾಬ್ದಾರಿಯನ್ನು ಸರ್ಕಾರ ಶೈಕ್ಷಣಿಕ ದತ್ತು ಕಾರ್ಯಕ್ರಮದ ಮೂಲಕ ನೀಡಿದ್ದು, ಈ ಕಾರ್ಯಕ್ರಮವು ಸರ್ಕಾರಿ ಶಾಲಾ ಕಾಲೇಜು(Educational Adoption Scheme)ಗಳ ಅಭಿವೃದ್ಧಿಗೆ ಸಹಾಯವಾಗಲಿದೆ. ಶಾಲಾ ಕಾಲೇಜಿನ ಸಂಪನ್ಮೂಲಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿ , ಶಿಕ್ಷಣ ಸಂಸ್ಥೆಗಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಎಲ್ಲಾ ಇಲಾಖೆಗಳ ರಾಜ್ಯ, ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಹಂತದ ಅಧಿಕಾರಿಗಳಿಗೆ ಸರ್ಕಾರಿ ಶಾಲೆಗಳನ್ನು ದತ್ತು ನೀಡುವ ಉದ್ದೇಶದಿಂದ ಶೈಕ್ಷಣಿಕ ದತ್ತು ಯೋಜನೆ ಕಾರ್ಯಕ್ರಮವನ್ನು ಸರ್ಕಾರ ರೂಪಿಸಿದೆ. ಸರ್ಕಾರಿ ಅಧಿಕಾರಿಗಳಿಗೆ ಈ ನಿಟ್ಟಿನಲ್ಲಿ ಜವಾಬ್ದಾರಿಯನ್ನು ನೀಡಿ ಎಂದು ಆದೇಶ ಹೊರಡಿಸಿದೆ.

ಸರ್ಕಾರಿ ಅಧಿಕಾರಿಗಳು ತಮ್ಮ ಕೆಲಸ ಮಾಡುವ ವ್ಯಾಪ್ತಿಗೆ ಸೇರಿದ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆ, ಪ್ರೌಡಶಾಲೆ, ಪದವಿ ಪೂರ್ವ ಕಾಲೇಜು ಯಾವುದಾದರು ಒಂದು ಸರ್ಕಾರಿ ಶಾಲೆಯನ್ನು ದತ್ತು ಪಡೆದುಕೊಂಡು, ನಿರಂತರವಾಗಿ ಅವುಗಳ ಸಂಪರ್ಕದಲ್ಲಿದ್ದು , ಶಾಲೆಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ಕಾರ್ಯಕ್ರಮ ಇದಾಗಿದೆ.

ಇದನ್ನೂ ಓದಿ : Hindu gods:ಹಿಂದೂ ದೇವರನ್ನು ಆರಾಧಿಸಲಾರೆ ಎಂದ ಆಪ್​ ಸಚಿವ : ಬಿಜೆಪಿ ನಾಯಕರಿಂದ ತರಾಟೆ

ಇದನ್ನೂ ಓದಿ : Weather Report : ಕರ್ನಾಟಕದಲ್ಲಿ 3 ಬಾರೀ ಮಳೆ : ಇಂದು ಯೆಲ್ಲೋ ಅಲರ್ಟ್

ಅಧಿಕಾರಿಗಳು ತಾವು ದತ್ತು ಪಡೆದ ಸಂಸ್ಥೆಗೆ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಕಡ್ಡಾಯವಾಗಿ ಬೇಟಿ ನೀಡಿ, ಶಾಲೆಗಳ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸಿ, ಬೇಕಾದ ಸಲಹೆ , ಮಾರ್ಗದರ್ಶನ ನೀಡಿ, ವಿದ್ಯಾರ್ಥಿಗಳು , ಶಿಕ್ಷಕರು, ಹಾಗೂ ಪ್ರಾಂಶುಪಾಲರ ಜೊತೆ ಮಾತುಕತೆ ನಡೆಸಿ , ಮೂಲ ಸೌಕರ್ಯಗಳು ಸಂಸ್ಥೆಯಲ್ಲಿ ಸರಿಯಾದ ರೀತಿಯಲ್ಲಿ ಬಳಕೆಯಾಗುತ್ತಿದೆಯಾ ಇಲ್ಲವಾ ಎಂದು ಪರಿಶೀಲನೆ ಮಾಡಿ , ಅದಕ್ಕೆ ಬೇಕಾದ ಸಲಹೆ ಹಾಗು ಸೂಚನೆಗಳನ್ನು ನೀಡಬೇಕು . ವಿದ್ಯಾರ್ಥಿಗಳು ನಿಗದಿಪಡಿಸಿಕೊಂಡಿರುವ ತಮ್ಮ ಭವಿಷ್ಯದ ಕನಸನ್ನು ಸಾಕಾರಗೊಳಿಸುವಲ್ಲಿ ಅವರಿಗೆ ಸ್ಪೂರ್ತಿ ಹಾಗೂ ಉತ್ತೇಜನ ನೀಡಬೇಕು. ಶಾಲೆಯಲ್ಲಿನ ವಿದ್ಯಾರ್ಥಿಗಳ ಕಲಿಕಾ ಗುಣಮಟ್ಟ, ಮೌಲ್ಯಮಾಪನದ ವಿಧಾನ , ದಾಖಲಾತಿಗಳ ನಿರ್ವಹಣೆ, ನೀಡಿರುವ ಸೌಲಭ್ಯಗಳ ಬಳಕೆ ಹೇಗಿದೆ, ಪಠ್ಯ ಚಟುವಟಿಕೆಗಳ ನಿರ್ವಹಣೆ ಮುಂತಾದ ವಿಷಯಗಳ ಬಗ್ಗೆ ಪರಿಶೀಲನೆ ಮಾಡಿ ಅಗತ್ಯ ಸಲಹೆಗಳನ್ನು ಶಿಕ್ಷಕರಿಗೆ ನೀಡುವುದು ಅಧಿಕಾರಿಗಳ ಕರ್ತವ್ಯವಾಗಿದೆ.

ಇದನ್ನೂ ಓದಿ : Pramod Muthalik contest in Udupi : ಯುಪಿ‌ ಮಾದರಿ ಆಡಳಿತ; ಉಡುಪಿಯಿಂದ ಚುನಾವಣಾ ಕಣಕ್ಕೆ ಪ್ರಮೋದ್ ಮುತಾಲಿಕ್ ?

ಶಿಕ್ಷಕರ ಸಾಮರ್ಥ್ಯ ಅಭಿವೃದ್ದಿಗಾಗಿ ನೀಡಿರುವ ಸಂಪನ್ಮೂಲಗಳ ಬಳಕೆಯಾಗಿರುವ ಬಗ್ಗೆ ಪರಿಶೀಲಿಸಬೇಕು . ಶಾಲೆ ಬಿಟ್ಟ ಮಕ್ಕಳಿದ್ದಲ್ಲಿ ಅವರನ್ನು ಶಾಲೆಗೆ ಕರೆತರಲು ಬೇಕಾದ ಕ್ರಮಗಳನ್ನು ಕೈಗೊಳ್ಳಬೇಕು . ಕಲಿಕಾ ಪೂರಕವಾದ ಚಟುವಟಿಕೆಗಳಿಗೆ ಅಗತ್ಯವಾದ ಶೌಚಾಲಯ, ಕಟ್ಟಡ ನವೀಕರಣ , ಕಪಾಟು, ಮೇಜು, ವಿದ್ಯುತ್‌ ಸರಬರಾಜು , ಸೇಋಿದಂತೆ ಮಕ್ಕಳ ಶೈಕ್ಷಣಿಕ ಪ್ರವಾಸ , ಸಾಂಸ್ಕ್ರತಿಕ ಚಟುವಟಿಕೆಗಳ ಬಗ್ಗೆ ಮಕ್ಕಳಿಗಿರುವ ಒಲವು , ಅಕ್ಷರ ದಾಸೋಹ ಮತ್ತು ದಾಸೋಹ ಕೊಠಡಿಯನ್ನು ಸ್ವಚ್ಚವಾಗಿಡುವುದು ಅಧಿಕಾರಿಗಳ ಜವಾಬ್ಧಾರಿಯಾಗಿದೆ.

ಶಾಲೆಗಳಿಗೆ ಸಂಬಂಧಿಸಿದಂತೆ ಕುಂದು ಕೊರತೆಗಳಿದ್ದರೆ ಅದರ ನಿವಾರಣೆಗೆ ಧಾನಿಗಳು , ಸ್ಥಳೀಯ ಶಿಕ್ಷಣ ಸಂಸ್ಥೆಗಳು, ಶಿಕ್ಷಣ ಪೇಮಿಗಳ ನೆರವನ್ನು ಪಡೆದು ಸರಿಯಾದ ಸಲಹೆ ಸೂಚನೆಯೊಂದಿಗೆ ಅಗತ್ಯ ಕ್ರಮ ಕೈಗೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ. ಸರ್ಕಾರಿ ಅಧಿಕಾರಿಗಳು ತಮ್ಮ ಉದಾರತೆಯನ್ನು ತೋರುತ್ತಾರೆ ಎಂಬುದಕ್ಕೆ ಹಲವು ನಿರ್ದೇಶನಗಳು ಇದ್ದು ,ಸರ್ಕಾರಿ ಶಾಲೆಗಳ ಅಭಿವೃದ್ದಿಗೆ , ಶಾಲೆಗಳ ಪಲಿತಾಂಶ ಹೆಚ್ಚಿಸಲು ಈ ದತ್ತು ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗಿಯಾಗಿ , ಈ ಕಾರ್ಯಕ್ರಮಕ್ಕೆ ಕೈಜೋಡಿಸುತ್ತಿರುವುದು ಒಂದು ವಿಶಿಷ್ಠ ಕಲ್ಪನೆಯಾಗಿದೆ.

ಈ ಕಾರ್ಯಕ್ರಮವು ಮಕ್ಕಳ ಹಿತ ಮತ್ತು ಅಭಿವೃದ್ದಿಯನ್ನು ಒಳಗೊಂಡಿದ್ದು , ಸರ್ಕಾರಿ ಶಾಲೆ – ಕಾಲೇಜುಗಳ ಸರ್ವತೋಮುಖ ಅಭಿವೃದ್ಧಿಗೆ ನಾಂದಿ ಹಾಡಲಿದೆ.

Educational Adoption Scheme for Development of Government Schools and Colleges

Comments are closed.