Sirsi-Kumta: ಖರ್ಚು ಕಮ್ಮಿ ,ಪ್ರಯಾಣವೂ ಸುಲಭ; ಹೊಸ ವರ್ಷಕ್ಕೆ ಇದೊಂದು ಸಿಹಿ ಸುದ್ದಿ, ಅರ್ಧಕ್ಕರ್ಧ ಇಳಿಯಲಿದೆ ಈ ಮಾರ್ಗದ ಟಿಕೇಟ್‌ ದರ!

ಶಿರಸಿ: ಉತ್ತರ ಕನ್ನಡ ಜಿಲ್ಲೆಯ ಬಹುಬೇಡಿಕೆಯ ವಿಚಾರವಾಗಿದ್ದ ಶಿರಸಿ-ಕುಮಟಾ ಹೆದ್ದಾರಿ ಸಂಚಾರವನ್ನು ನಿನ್ನೆ ಪ್ರಾರಂಭಿಸಲಾಯಿತು. ಕತಗಾಲ್ ನಿಂದ ಚಾಲಕರಿಗೆ, ನಿರ್ವಾಹಕರಿಗೆ ಸನ್ಮಾನ ಮಾಡಿ ಬಸ್ ಅನ್ನು ತಳಿರು-ತೋರಣದಿಂದ ಸಿಂಗರಿಸಿ ಬರ ಮಾಡಿಕೊಳ್ಳಲಾಯಿತು. ಕಾಮಗಾರಿ ಪ್ರಗತಿಯಲ್ಲಿರುವ ಶಿರಸಿ–ಕುಮಟಾ ರಾಷ್ಟ್ರೀಯ ಹೆದ್ದಾರಿ 766ರಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳ ಸಂಚಾರಕ್ಕೆ ಡಿ.30ರಿಂದ ಅನುಮತಿ ನೀಡಿ ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯಾ ಆದೇಶಿಸಿದ್ದರು.

ಶಿರಸಿ ಜಾತ್ರೆಯ ಪೂರ್ವಭಾವಿ ನಿರ್ಧಾರ, ವೇಗ ಮಿತಿ ಉಂಟು!

ʼಶಿರಸಿಯಲ್ಲಿ ನಡೆಯುವ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಪೊಲೀಸ್ ಅಧೀಕ್ಷಕರು ಹಾಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರ ವರದಿ ಆಧರಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ’ ಎಂದು ಡಿಸಿ ಲಕ್ಷ್ಮಿ ಪ್ರಿಯಾ ತಿಳಿಸಿದ್ದರು. ಸಂಚಾರ ಸಂದರ್ಭದಲ್ಲಿ ಬಸ್ ಹೊರತುಪಡಿಸಿ ಬೇರೆ ಭಾರಿ ವಾಹನಗಳು ಸಂಚರಿಸಲು ಅವಕಾಶವಿಲ್ಲ. ಹಾಗೂ ಕಾಮಗಾರಿ ಪ್ರಗತಿಯಲ್ಲಿರುವ ಸೂಕ್ಷ್ಮ ಪ್ರದೇಶದಲ್ಲಿ ವೇಗದ ಮೀತಿ 20 ಕಿ.ಮೀ.ಗೆ ಸೀಮಿತವಾಗಿರಬೇಕು’ ಎಂದೂ ಸೂಚಿಸಿದ್ದಾರೆ.

ಇದನ್ನೂ ಓದಿ: ಹೋಟೆಲ್‌ ಉದ್ಯಮಕ್ಕೆ ಶಾಕ್‌ ನೀಡಿದ ಕೇಂದ್ರ! ಇನ್ಮೇಲೆ ಜೇಬು ಸುಡಲಿದೆಯೇ ಹೊರಗಿನ ಊಟ?!https://kannada.newsnext.live/india-news/sudden-hike-in-commercial-cylinder-prize-new-dehli-bengaluru/

ಪೊಲೀಸ್‌ ಇಲಾಖೆಗೆ ನಿರ್ವಹಣೆಯ ಭಾರ

ʼಪೊಲೀಸ್ ಇಲಾಖೆ ವತಿಯಿಂದ ಅವಶ್ಯವಿರುವ ಕಡೆಗಳಲ್ಲಿ ಬ್ಯಾರಿಕೇಡ್‍ಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಸಂಚಾರ ದಟ್ಟಣೆ ಆಗದ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ವತಿಯಿಂದ ರಸ್ತೆಯಲ್ಲಿ ಅಗತ್ಯವಿರುವ ಕಡೆಗಳಲ್ಲಿ ವೇಗದ ಮಿತಿ ಫಲಕ, ರಸ್ತೆ ತಿರುವು ಪ್ರದೇಶದಲ್ಲಿ ಅಗತ್ಯ ಸೂಚನಾ ಫಲಕಗಳು, ಇನ್ನೀತರ ಅಗತ್ಯ ಸರಕ್ಷಾ ಕ್ರಮಗಳನ್ನು ಅಳವಡಿಸುವಂತೆ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.

ಸತತ ಒಂದು ವರ್ಷದಿಂದ ನಡೀತಿದೆ ಕಾಮಗಾರಿ

ಹೆದ್ದಾರಿ ಕಾಮಗಾರಿ ಹಿನ್ನೆಲೆಯಲ್ಲಿ 2024ರ ಡಿ.2ರಿಂದ ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರವನ್ನು ಈ ಮಾರ್ಗದಲ್ಲಿ ನಿಷೇಧಿಸಲಾಗಿತ್ತು. ಈ ಕಾಮಗಾರಿಯು ಇನ್ನೂ ಪೂರ್ಣಗೊಳ್ಳುವ ಹಂತದಲ್ಲೇ‌ ಇದೆ.

ಯಾಕೆ ಈ ಮಾರ್ಗ ಸ್ಪೆಷಲ್?

ಇನ್ನೂ ಈ ವಿಷಯ ಯಾಕೆ ಮಹತ್ವದ್ದು ಎಂದರೆ ಈ ಮುಂಚೆ ಎಲ್ಲಾ ಬಸ್ ಗಳೂ ಕೂಡ ಶಿರಸಿಯಿಂದ ಸಿದ್ದಾಪುರಕ್ಕೆ ಹೋಗಿ ಅಲ್ಲಿಂದ ಕುಮಟಾಕ್ಕೆ ಸಾಗುತ್ತಿದ್ದವು. ಈ ಸಂಚಾರದ ಒಟ್ಟೂ ದೂರ 110 ಕಿಲೋಮೀಟರ್ ಆಗುತ್ತಿತ್ತು ಜೊತೆಗೆ 3-4 ತಾಸು ಹಿಡಿಯುತ್ತಿತ್ತು! ಆದರೆ ಈಗ ಶಿರಸಿ-ಕುಮಟಾ  ರಸ್ತೆ ಆರಂಭವಾದ ಕಾರಣ ಕೇವಲ 61 ಕಿಲೋಮೀಟರ್ ಪ್ರಯಾಣ ಅಷ್ಟೇ ಸಾಕು, ಜೊತೆಗೆ ಇದನ್ನು ಕ್ರಮಿಸಲು 1.30-2 ತಾಸು ಬೇಕಾಗುತ್ತದೆ. ಅಲ್ಲಿಗೆ ಹಣಕ್ಕೆ ಹಣ, ಇಂಧನಕ್ಕೆ ಇಂಧನ ಜೊತೆಗೆ ಸಮಯವೂ ಉಳಿತಾಯವಾಗಲಿದೆ. ಈ ಮೊದಲು ಶಿರಸಿಯಿಂದ ಕುಮಟಾದ ಬಸ್ ಸಂಚಾರದ ದರ 120 ಕ್ಕಿಂತ ಹೆಚ್ಚಿತ್ತು ಅದೀಗ 40% ತಗ್ಗಲಿದೆ!

Vidhya | ವಿದ್ಯಾಶ್ರೀ

ವಿದ್ಯಾಶ್ರೀ ಅವರು ನ್ಯೂಸ್‌ ನೆಕ್ಸ್ಟ್‌ ಕನ್ನಡ ( Kannada News Next) ದಲ್ಲಿ ಕಂಟೆಂಟ್‌ ಕ್ರಿಯೆಟರ್‌ ಆಗಿ ಕೆಲಸ ಮಾಡುತ್ತಿದ್ದಾರೆ. ಕನ್ನಡದ ನ್ಯೂಸ್‌ ಚಾನೆಲ್‌, ದಿನ ಪತ್ರಿಕೆ ಹಾಗೂ ಡಿಜಿಟಲ್‌ ಮಾಧ್ಯಮದಲ್ಲಿ ಹಲವು ವರ್ಷಗಳ ಕಾಲ ಕೆಲಸ ಮಾಡಿದ ಅನುಭವ ಹೊಂದಿದ್ದಾರೆ.

Related Stories