Cylinder Prize hike : ಹೋಟೆಲ್ ಉದ್ಯಮಕ್ಕೆ ಶಾಕ್ ನೀಡಿದ ಕೇಂದ್ರ ! ಇನ್ಮೇಲೆ ಜೇಬು ಸುಡಲಿದೆಯೇ ಹೊರಗಿನ ಊಟ?!

Cylinder Prize hike : ನವದೆಹಲಿ/ಬೆಂಗಳೂರು: ಹೊಸ ವರ್ಷ (New Year) ಹೊಸ ಶಾಕ್ ಒಂದನ್ನು ಹೊತ್ತು ತಂದಿದೆ. ಹೌದು, ಈ ಬಾರಿ ಜನಸಾಮಾನ್ಯರಿಗೆ (Common People) ನೇರವಾಗಿ ಬಿಸಿ ತಟ್ಟದಿದ್ದರೂ ಪರೋಕ್ಷವಾಗಿಯಂತೂ ತುಂಬಾ ತೊಂದರೆ ಆಗಬಲ್ಲ ನಿರ್ಧಾರವೊಂದು ಕೇಳಿಬರುತ್ತಿದೆ. ಏನಪ್ಪಾ ಅದು ಅಂತೀರಾ? ಇಲ್ಲಿದೆ ನೋಡಿ ಕಂಪ್ಲೀಟ್ ವಿಷಯ
ಹೋಟೆಲ್ ಮಾಲೀಕರ ಎದೆಬಡಿತ ಹೆಚ್ಚಿಸಿದ ಸುದ್ದಿ
ಹೊಸ ವರ್ಷದ ಆರಂಭದಲ್ಲೇ ಹೋಟೆಲ್, ರೆಸ್ಟೋರೆಂಟ್ ಹಾಗೂ ಸಣ್ಣ ಉದ್ದಿಮೆದಾರರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ತೈಲ ಕಂಪನಿಗಳು ವಾಣಿಜ್ಯ ಬಳಕೆಯ (Commercial) ಎಲ್‌ಪಿಜಿ ಸಿಲಿಂಡರ್ ದರವನ್ನು ಗಣನೀಯವಾಗಿ ಹೆಚ್ಚಿಸಿವೆ.19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ದೇಶಾದ್ಯಂತ ಸರಿಸುಮಾರು 111 ರೂಪಾಯಿಗಳವರೆಗೆ ಏರಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 19 ಕೆಜಿ ಸಿಲಿಂಡರ್ ಬೆಲೆ 110.50 ರೂ. ಏರಿಕೆಯಾಗಿದ್ದು, ಪರಿಷ್ಕೃತ ದರವು ಸುಮಾರು 1,764.50 ರೂ. ತಲುಪಿದೆ. ದೆಹಲಿಯಲ್ಲಿ 1,691.50 ರೂ. (111 ರೂ. ಏರಿಕೆ), ಮುಂಬೈನಲ್ಲಿ 1,642.50 ರೂ. (111 ರೂ. ಏರಿಕೆ) ಹಾಗೆಯೇ ಚೆನ್ನೈನಲ್ಲಿ 1,849.50 ರೂ. (110 ರೂ. ಏರಿಕೆ) ಗೆ ಸಿಲೆಂಡರ್ ಬೆಲೆ ತಲುಪಿದ್ದು ಇನ್ಮೇಲೆ ಹೊರಗಿನ ಊಟ-ತಿಂಡಿ ಗ್ರಾಹಕರ ಜೇಬನ್ನು ಸುಡಲಿದೆ ಎನ್ನಬಹುದು!
ಇದನ್ನೂ ಓದಿ: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ : ಕರಾವಳಿ ಜಿಲ್ಲೆಗಳಿಗೆ ಕಾದಿದೆ ಮಳೆ: https://kannada.newsnext.live/india-news/low-pressure-in-bay-of-bengal-rain-likely-in-these-coastal-places/
Cylinder Prize hike : ಅಬ್ಬಾ ನಾವು ಸೇಫ್ ಎಂದ ಗೃಹಿಣಿಯರು
ವಾಣಿಜ್ಯ ಸಿಲಿಂಡರ್ ಬೆಲೆ ಏರಿಕೆಯಾಗಿದ್ದರೂ, 14.2 ಕೆಜಿ ತೂಕದ ಗೃಹಬಳಕೆಯ ಸಿಲಿಂಡರ್ ದರದಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಇದು ಸಾಮಾನ್ಯ ಜನರಿಗೆ ತುಸು ನೆಮ್ಮದಿ ತಂದಿದೆ. ಜಾಗತಿಕ ಇಂಧನ ಮಾರುಕಟ್ಟೆಯಲ್ಲಿನ ಏರಿಳಿತ ಹಾಗೂ ಕಚ್ಚಾ ತೈಲ ದರಗಳ ಆಧಾರದ ಮೇಲೆ ಪ್ರತಿ ತಿಂಗಳ ಮೊದಲ ದಿನದಂದು ತೈಲ ಕಂಪನಿಗಳು ಈ ಪರಿಷ್ಕರಣೆ ಮಾಡುತ್ತವೆ. ಡಿಸೆಂಬರ್‌ನಲ್ಲಿ ಅಲ್ಪ ಪ್ರಮಾಣದ ಇಳಿಕೆಯಾಗಿದ್ದ ದರ, ಈಗ ಮತ್ತೆ ಏರಿಕೆಯ ಹಾದಿ ಹಿಡಿದಿದೆ.
ಬೆಲೆ ಏರಿಕೆಯಿಂದ ತತ್ತರಿಸಿಲಿದೆಯೇ ದಕ್ಷಿಣ ಭಾರತದ ಉದ್ಯಮ?
ಈ ಬೆಲೆ ಏರಿಕೆಯಿಂದಾಗಿ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ, ಇದು ಗ್ರಾಹಕರ ಜೇಬಿಗೆ ಕತ್ತರಿ ಬೀಳುವಂತೆ ಮಾಡಲಿದೆ. ಅದರಲ್ಲೂ ಕೂಡ ದಕ್ಷಿಣ ಭಾರತಕ್ಕೆ ಸಾಗಾಣಿಕ ವೆಚ್ಚ ಜಾಸ್ತಿ ಆಗಿರುವುದರಿಂದ ಹೆಚ್ಚಾಗಿ ದಕ್ಷಿಣ ಭಾರತದ ಹೋಟೆಲ್ ಉದ್ಯಮಕ್ಕೆ ದೊಡ್ಡ ಮಟ್ಟಿನ ಹೊಡೆತ ಕೊಡಲಿದೆ



