ಉಡುಪಿ : malpe floating bridge : ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಮಲ್ಪೆಯ ಬೀಚ್ನಲ್ಲಿ ನಿರ್ಮಾಣಗೊಂಡಿದ್ದ ತೇಲುವ ಸೇತುವೆ ಇದೀಗ ಅಲೆಯ ರಭಸಕ್ಕೆ ಕೊಚ್ಚಿ ಹೋಗಿದೆ. ತೇಲುವ ಸೇತುವೆ ನಿರ್ಮಾಣಗೊಂಡು ಕೇವಲ ಎರಡೇ ದಿನಗಳಲ್ಲಿ ಈ ಘಟನೆ ಸಂಭವಿಸಿದೆ. ಫೋಂಟೋನ್ಸ್ ಬ್ಲಾಕ್ಗಳು ಸಮುದ್ರದಲ್ಲಿ ಅಲ್ಲಲ್ಲಿ ಬೇರ್ಪಟ್ಟು ತೇಲುತ್ತಿದ್ದು ಪ್ರವಾಸಿಗರ ಬಳಕೆಗೆ ಯೋಗ್ಯವಾಗದೇ ಉಳಿದಿದೆ.
ದೇಶದಲ್ಲಿ ಎರಡನೇ ಬಾರಿಗೆ ಹಾಗೂ ರಾಜ್ಯದಲ್ಲಿ ಮೊದಲ ಪ್ರಯತ್ನ ಎಂಬಂತೆ ಉಡುಪಿಯ ಮಲ್ಪೆ ಬೀಚ್ನಲ್ಲಿ ಈ ತೇಲುವ ಸೇತುವೆಯನ್ನು ನಿರ್ಮಿಸಲಾಗಿತ್ತು. ಉಡುಪಿಯ ಶಾಸಕ ಕೆ.ರಘುಪತಿ ಭಟ್ ಈ ತೇಲುವ ಸೇತುವೆಯನ್ನು ಉದ್ಘಾಟಿಸಿದ್ದರು. ಈ ಮೊದಲು ಸ್ಕೈವಾಕ್ನ ಕಾರಣಕ್ಕೆ ಫೇಮಸ್ ಆಗಿದ್ದ ಮಲ್ಪೆ ಬೀಚ್ ತೇಲುವ ಸೇತುವೆ ನಿರ್ಮಾಣದ ಬಳಿಕ ನಾಲ್ಕೇ ದಿನಗಳಲ್ಲಿ ಮತ್ತಷ್ಟು ಪ್ರತೀತಿಯನ್ನು ಗಳಿಸಿತ್ತು.
100 ಮೀಟರ್ ಉದ್ದ ಹಾಗೂ 3.5 ಮೀಟರ್ ಅಗಲವನ್ನು ಹೊಂದಿರುವ ಈ ಸೇತುವೆಯನ್ನು ಹೆಚ್ಚಿನ ಸಾಂದ್ರತೆಯ ಫೋಂಟೊನ್ಸ್ ಬ್ಲಾಕ್ಗಳಿಂದ ನಿರ್ಮಾಣ ಮಾಡಲಾಗಿದೆ. ಇದು ನಿಮಗೆ ಸಮುದ್ರದ ಮೇಲೆ ತೇಲುತ್ತಿರುವ ಅನುಭವವನ್ನು ನೀಡುತ್ತದೆ. ತೇಲುವ ಸೇತುವೆಯ ಕೊನೆಯಲ್ಲಿ 12 ಮೀಟರ್ ಉದ್ದ ಹಾಗೂ 7.5 ಮೀಟರ್ ಅಗಲದಲ್ಲಿ ಒಂದು ವೇದಿಕೆ ನಿರ್ಮಾಣ ಮಾಡಲಾಗಿದ್ದು ಇಲ್ಲಿ ನೀವು ಸಮುದ್ರದ ಅಂದವನ್ನು ವೀಕ್ಷಿಸಬಹುದಾಗಿದೆ. ಒಂದು ಬಾರಿಗೆ ಈ ಸೇತುವೆಯಲ್ಲಿ 100 ಮಂದಿ ಪ್ರವಾಸಿಗರು ತೆರಳಲು ಅವಕಾಶ ನೀಡಲಾಗುತ್ತದೆ.
ಬರೋಬ್ಬರಿ 80 ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡಿದ್ದ ಈ ಸೇತುವೆಯು ಕೇವಲ ನಾಲ್ಕು ದಿನಗಳಲ್ಲಿ ಕೊಚ್ಚಿ ಹೋಗಿದೆ. ಈ ತೇಲುವ ಸೇತುವೆಯನ್ನು ಸರಿಪಡಿಸಲು ಇನ್ನೂ ಒಂದು ವಾರಗಳ ಕಾಲಾವಕಾಶ ಬೇಕು ಎಂದು ಹೇಳಲಾಗುತ್ತಿದೆ. ಸೇತುವೆ ಲೋಕಾರ್ಪಣೆಗೊಂಡ ಸುದ್ದಿಯು ಮಾಧ್ಯಮಗಳಲ್ಲಿ ಬಿತ್ತರವಾಗುತ್ತಿದ್ದಂತೆಯೇ ಪ್ರವಾಸಿಗರ ದಂಡೇ ಈ ತೇಲುವ ಸೇತುವೆಯನ್ನು ವೀಕ್ಷಿಸಲು ಆಗಮಿಸುತ್ತದೆ. ಒಂದು ವೇಳೆ ಪ್ರವಾಸಿಗರು ತೇಲುವ ಸೇತುವೆಯ ಮೇಲೆ ಇದ್ದ ಸಂದರ್ಭದಲ್ಲಿಯೇ ಈ ರೀತಿ ಫೋಂಟೋನ್ಸ್ ಬ್ಲಾಕ್ಗಳು ಕೊಚ್ಚಿ ಹೋಗಿದ್ದರೆ ಎಂತಹ ದೊಡ್ಡ ಅನಾಹುತ ಉಂಟಾಗುತ್ತಿತ್ತು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್
ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್ ಹೊರಟ್ಟಿ
malpe floating bridge broke apart because of heavy wind