Priyanka Chopra : ಮೊಟ್ಟ ಮೊದಲ ಬಾರಿಗೆ ಪುತ್ರಿಯ ಫೋಟೋವನ್ನು ಹಂಚಿಕೊಂಡ ಪ್ರಿಯಾಂಕಾ-ನಿಕ್​ ದಂಪತಿ

Priyanka Chopra : ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ತಮ್ಮ ಮಗುವಿನ ಆರೈಕೆಯಲ್ಲಿ ಬ್ಯುಸಿಯಾಗಿದ್ದಾರೆ. ಬಾಡಿಗೆ ತಾಯ್ತನದ ಮೂಲಕ ಮಗುವನ್ನು ಪಡೆದಿರುವ ನಟಿ ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಾಸ್​ ದಂಪತಿ ವಿಶ್ವ ತಾಯಂದಿರ ದಿನದ ಪ್ರಯುಕ್ತ ಮೊಟ್ಟ ಮೊದಲ ಬಾರಿಗೆ ತಮ್ಮ ಸೋಶಿಯಲ್​ ಮೀಡಿಯಾ ಖಾತೆಗಳಲ್ಲಿ ಮಗಳ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.


ವಿಶ್ವ ತಾಯಂದಿರ ದಿನದ ಪ್ರಯುಕ್ತ ಪುತ್ರಿ ಮಾಲತಿ ಮೇರಿ ಫೋಟೋವನ್ನು ಹಂಚಿಕೊಂಡಿರುವ ಪ್ರಿಯಾಂಕಾ ಚೋಪ್ರಾ ಪುತ್ರಿಯ ಆಗಮನದ ಬಳಿಕ ತಮ್ಮ ಜೀವನದಲ್ಲಾದ ಬದಲಾವಣೆಗಳನ್ನು ಸುದೀರ್ಘವಾಗಿ ಬರೆದುಕೊಂಡಿದ್ದಾರೆ. ಈ ಫೋಟೋದಲ್ಲಿ ಪುತ್ರಿ ಮಾಲತಿ ಮೇರಿಯನ್ನು ಪ್ರಿಯಾಂಕಾ ಚೋಪ್ರಾ ತಮ್ಮ ತೋಳುಗಳಲ್ಲಿ ಇರಿಸಿಕೊಂಡು ಕಣ್ಣು ಮುಚ್ಚಿದ್ದರೆ ಪತಿ ನಿಕ್​ ಜೋನಾಸ್​ ತಮ್ಮ ಪುತ್ರಿಯನ್ನೇ ನೋಡುತ್ತಾರೆ. ಫೋಟೋದಲ್ಲಿ ಮಗುವಿನ ಮುಖವನ್ನು ತೋರಿಸಲು ಇಷ್ಟಪಡದ ಈ ದಂಪತಿ ಬಿಳಿ ಬಣ್ಣದ ಹೃದಯದ ಇಮೋಜಿಯ ಮೂಲಕ ಮಗುವಿನ ಮುಖವನ್ನು ಮುಚ್ಚಿದ್ದಾರೆ. 100ಕ್ಕೂ ಅಧಿಕ ದಿನಗಳನ್ನು ತುರ್ತು ನಿಗಾ ಘಟಕದಲ್ಲಿ ಕಳೆದ ಬಳಿಕ ನಮ್ಮ ಮಗಳು ಮನೆಗೆ ಆಗಮಿಸಿದ್ದಾಳೆ ಎಂದು ಫೋಟೋದಲ್ಲಿ ಪ್ರಿಯಾಂಕಾ ಚೋಪ್ರಾ ಬರೆದುಕೊಂಡಿದ್ದಾರೆ .


ಎನ್​​ಐಸಿಯುನಲ್ಲಿ 100ಕ್ಕೂ ಅಧಿಕ ದಿನಗಳನ್ನು ಕಳೆದ ಬಳಿಕ ನಮ್ಮ ಪುಟಾಣಿ ಮಗಳು ಕೊನೆಗೂ ಮನೆಗೆ ಬಂದಿದ್ದಾಳೆ. ಪ್ರತಿಯೊಂದು ಕುಟುಂಬದ ಪ್ರಯಾಣವು ವಿಶಿಷ್ಠವಾಗಿ ಇರುತ್ತದೆ. ಈ ಸಂದರ್ಭದಲ್ಲಿ ನಿರ್ದಿಷ್ಟ ಮಟ್ಟದ ನಂಬಿಕೆಯ ಅಗತ್ಯ ಕೂಡ ಇರುತ್ತದೆ. ನಮ್ಮ ಪಾಲಿಗೆ ಈ ಕೆಲವು ತಿಂಗಳುಗಳು ಅತ್ಯಂತ ಸವಾಲಿನದ್ದಾಗಿದ್ದರೂ ಸಹ ಪ್ರತಿಯೊಂದು ಕ್ಷಣವು ಎಷ್ಟು ಮುಖ್ಯ ಹಾಗೂ ಎಷ್ಟೊಂದು ಪರಿಪೂರ್ಣವಾಗಿತ್ತು ಎಂದು ನಟಿ ಬರೆದುಕೊಂಡಿದ್ದಾರೆ. ತಮ್ಮ ಪುತ್ರಿಯನ್ನು ಆರೈಕೆ ಮಾಡಿದ ಎಲ್ಲಾ ವೈದ್ಯರು ಹಾಗೂ ದಾದಿಯರಿಗೂ ಪ್ರಿಯಾಂಕಾ ಇದೇ ವೇಳೆ ಧನ್ಯವಾದ ತಿಳಿಸಿದ್ದಾರೆ.


ನಮ್ಮ ಪುಟ್ಟ ಹುಡುಗಿ ಕೊನೆಗೂ ಮನೆಗೆ ಬಂದಿರುವುದಕ್ಕೆ ನಮಗೆ ಅತ್ಯಂತ ಸಂತೋಷವಿದೆ. ಪ್ರತಿ ಹೆಜ್ಜೆಯಲ್ಲಿಯೂ ನಿಸ್ವಾರ್ಥತೆಯಿಂದ ನಮ್ಮೊಂದಿಗೆ ಲಾಸ್​​ ಏಂಜಲೀಸ್​ನ ಸೀಡರ್​ ಸಿನಾಯ್​ನಲ್ಲಿರುವ ಪ್ರತಿಯೊಬ್ಬ ವೈದ್ಯರು ಹಾಗೂ ನರ್ಸ್ಗಳಿಗೆ ನಾನು ಧನ್ಯವಾದ ಹೇಳಲು ಇಚ್ಛಿಸುತ್ತೇನೆ. ನಮ್ಮ ಮುಂದಿನ ಅಧ್ಯಾಯ ಇದೀಗ ಆರಂಭಗೊಂಡಿದೆ. ಮಮ್ಮಿ ಹಾಗೂ ಡ್ಯಾಡಿ ನಿನ್ನನ್ನು ಪ್ರೀತಿಸುತ್ತೇವೆ ಎಂದು ಬರೆದುಕೊಂಡಿದ್ದಾರೆ.


ಪ್ರಿಯಾಂಕಾ ಚೋಪ್ರಾ ಹಾಗೂ ನಿಕ್​ ಜೋನಾಸ್​ ದಂಪತಿ ಈ ವರ್ಷದ ಜನವರಿ ತಿಂಗಳಲ್ಲಿ ಬಾಡಿಗೆ ತಾಯ್ತನದ ಮೂಲಕ ಹೆಣ್ಣು ಮಗುವನ್ನು ಬರ ಮಾಡಿಕೊಂಡಿದ್ದಾರೆ. ನಿಕ್​ ಜೋನಾಸ್​ ಹಾಗೂ ಪ್ರಿಯಾಂಕಾ ದಂಪತಿ 2018ರ ಡಿಸೆಂಬರ್​ ತಿಂಗಳಲ್ಲಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು.

ಇದನ್ನು ಓದಿ : SSLC Result : ಮೇ 20 ರೊಳಗೆ ಎಸ್ಎಸ್ಎಲ್‌ಸಿ ಫಲಿತಾಂಶ: ಮೌಲ್ಯ ಮಾಪನಕ್ಕೆ ಗೈರಾದವರಿಗೆ ನೊಟೀಸ್

ಇದನ್ನೂ ಓದಿ : School Open Postpone : ಶಾಲೆ ಆರಂಭ ಮುಂದೂಡಿ : ಸಿಎಂ ಬೊಮ್ಮಾಯಿಗೆ ಪತ್ರ ಬರೆದ ಸಭಾಪತಿ ಬಸವರಾಜ್‌ ಹೊರಟ್ಟಿ

“Our Little Girl Is Finally Home”: Priyanka Chopra Shares Daughter’s Pic

Comments are closed.