Govinda Karjolas outrage : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದಿದ್ದು ತಪ್ಪು ಅಂದಮೇಲೆ ಅವರ ಹಿಂದೂ ವಿರೋಧಿ ಹೇಳಿಕೆಗಳೂ ತಪ್ಪೇ ಅಲ್ಲವೇ : ಕಾರಜೋಳ ಪ್ರಶ್ನೆ

ಹಾಸನ : Govinda Karjolas outrage : ಹಿಂದೂ ವಿರೋಧಿ ಹೇಳಿಕೆಗಳನ್ನು ನೀಡುವ ವಿಪಕ್ಷ ನಾಯಕ ಸಿದ್ದರಾಮಯ್ಯರ ಮೇಲೆ ಮೊಟ್ಟೆ ಎಸೆತ ವಿಚಾರವಾಗಿ ಪ್ರತಿಕ್ರಿಯಿಸಿದ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ರಾಜಕೀಯ ಟೀಕೆ ಟಿಪ್ಪಣಿಗಳು ಸೌಜನ್ಯದಿಂದ ಕೂಡಿರಬೇಕು. ಕಾನೂನನ್ನು ಕೈಗೆತ್ತಿಕೊಳ್ಳುವಂತೆ ಮಾಡಬಾರದು. ಚುನಾವಣೆ ಬಳಿಕ ವೈರತ್ವವನ್ನು ಮಾಡದೇ ಎಲ್ಲರೂ ಒಂದಾಗಿ ಮುನ್ನಡೆಯುವಂತೆ ಇರಬೇಕು ಎಂದಿದ್ದಾರೆ.

ಹಾಸನದ ಚನ್ನರಾಯಪಟ್ಟಣದಲ್ಲಿ ಈ ವಿಚಾರವಾಗಿ ಮಾತನಾಡಿದ ಸಚಿವ ಕಾರಜೋಳ, ನಾವು ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ಮಾತನಾಡಬೇಕು. ಈ ಸಮಸ್ಯೆಗಳು ಹುಟ್ಟಿಕೊಂಡಿದ್ದು ಯಾತಕ್ಕಾಗಿ..? ಸಿದ್ದರಾಮಯ್ಯ ಮೇಲೆ ಮೊಟ್ಟೆ ಎಸೆದಿದ್ದು ಎಷ್ಟು ತಪ್ಪೋ, ಅದೇ ರೀತಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು ಕೂಡ ತಪ್ಪೇ ಎಂದು ಹೇಳಿದ್ದಾರೆ.

ಸಾವರ್ಕರ್​​ ಕುಟುಂಬ ಬ್ರಿಟೀಷರ ವಿರುದ್ಧ ಹೋರಾಡಿದ ಕುಟುಂಬ. ಬ್ರಿಟೀಷರು ರೊಚ್ಚಿಗೆದ್ದು ಸಾವರ್ಕರ್​ ಆಸ್ತಿಯನ್ನು ಮುಟ್ಟುಗೋಲು ಹಾಕಿದ್ದರು. ಜಿನ್ನಾ ಪಾಕಿಸ್ತಾನವನ್ನು ಧಿಕ್ಕರಿಸಿದ ಭಾರತದಲ್ಲೇ ಉಳಿದ ಮೇಲೆ ಆ ಮುಸಲ್ಮಾನರೂ ಕೂಡ ಭಾರತೀಯರೇ ಅಲ್ಲವೇ..? ಭಾರತದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಫೋಟೋವನ್ನು ಅಲ್ಲಿ ಹಾಕಬಾರದು.. ಇಲ್ಲಿ ಹಾಕಬಾರದು ಅಂದರೆ ಅದು ತಪ್ಪಲ್ವಾ..? ಎಂದು ಪ್ರಶ್ನೆ ಮಾಡಿದ್ದಾರೆ.

ಇನ್ನು ದುಷ್ಕರ್ಮಿಗಳ ದಾಳಿಗೆ ಬಲಿಯಾದ ಪ್ರವೀಣ್​ ನೆಟ್ಟಾರು ನಿವಾಸಕ್ಕೆ ಮಾತ್ರ ಭೇಟಿ ನೀಡಿದ ಸಿಎಂ ಬೊಮ್ಮಾಯಿ ನಡೆ ವಿಚಾರವಾಗಿ ಸಿದ್ದರಾಮಯ್ಯ ಟೀಕೆ ಸಂಬಂಧವೂ ಪ್ರತಿಕ್ರಿಯಿಸಿದ ಕಾರಜೋಳ, ಕಾನೂನು ಪ್ರಕಾರ ಎಲ್ಲರಿಗೂ ಪರಿಹಾರ ಸಿಗುತ್ತೆ. ಕಾನೂನು ಪರೀಕ್ಷೆಗಳನ್ನು ನಡೆಸಿ ಮೇಲಾಧಿಕಾರಿಗಳು ಕೊಡಬೇಕಾದ ಪರಿಹಾರವನ್ನು ಕೊಡುತ್ತಾರೆ ಎಂದು ಹೇಳಿದರು.

ಸರ್ಕಾರವನ್ನು ತಳ್ಳಿಕೊಂಡು ಹೋಗ್ತಿದ್ದೇವೆಂಬ ಸಚಿವ ಮಾಧುಸ್ವಾಮಿ ಆಡಿಯೋ ವೈರಲ್ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು , ಇದರ ಬಗ್ಗೆ ಈಗ ಮಾತನಾಡಿ ಯಾವುದೇ ಪ್ರಯೋಜನವಿಲ್ಲ. ಸರ್ಕಾರ ಚೆನ್ನಾಗಿ ನಡೀತಾ ಇದೆ. ಮೂಲ ಬಿಜೆಪಿಗರು ಮತ್ತು ವಲಸೆ ಬಿಜೆಪಿಗರು ಎಂಬ ವಿಚಾರ ನಮ್ಮಲ್ಲಿ ಇಲ್ಲ ಎಂದು ಹೇಳಿದರು.

ಸಿದ್ದರಾಮಯ್ಯ ಉತ್ಸವದ ಬಳಿಕ ಬಿಜೆಪಿಗೆ ನಡುಕ ಉಂಟಾಗಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೂ ಪ್ರತಿಕ್ರಿಯಿಸಿದ ಅವರು ,ಸಿದ್ದರಾಮಯ್ಯೊತ್ಸವ ಆದ ಮೇಲೆ ಕಾಂಗ್ರೆಸ್ ಮೂರು ಹೋಳಾಗಿದೆ.ದೇಶದಲ್ಲಿ 20 ರಾಜ್ಯದಲ್ಲಿ ಆಡಳಿತ ಮಾಡ್ತಿದ್ದೆವೆ ನಮಗೆ ಸಿದ್ದರಾಮಯ್ಯ ಉತ್ಸವದ ಭಯ ಇಲ್ಲ.ನಮ್ಮ ಸರ್ಕಾರ ಸ್ಪಷ್ಟ ಬಹುತದೊಂದಿಗೆ ಆಡಳಿತ ಮಾಡ್ತಾತಿದೆ ಎಂದು ಹೇಳಿದರು.

ಇದನ್ನು ಓದಿ : Govinda Karajola : ‘ಮುಪ್ಪಿನಲ್ಲಿ ಸಿದ್ದರಾಮಯ್ಯಗೆ ಮಠ-ಮಾನ್ಯಗಳ ಬಗ್ಗೆ ಜ್ಞಾನೋದವಾಗಿದೆ’ : ಗೋವಿಂದ ಕಾರಜೋಳ ವ್ಯಂಗ್ಯ

ಇದನ್ನೂ ಓದಿ : Minister Ashwattha Narayan : ಮೊಟ್ಟೆ ರಾಜಕೀಯದಲ್ಲಿ ಡಿಕೆಶಿ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತೆ : ಅಶ್ವತ್ಥ ನಾರಾಯಣ ವ್ಯಂಗ್ಯ

Minister Govinda Karjolas outrage over Siddaramaiah’s anti-Hindu statement

Comments are closed.