vitla pindi- festival : ಕೃಷ್ಣನೂರಿನಲ್ಲಿ ಮೇಳೈಸಿದ ವಿಟ್ಲಪಿಂಡಿ ಉತ್ಸವ : ಕಡಗೋಲು ಕೃಷ್ಣನ ದರ್ಶನ ಪಡೆದ ಭಕ್ತರು

ಉಡುಪಿ : vitla pindi- festival : ಶ್ರೀಕೃಷ್ಣ ಜನ್ಮಾಷ್ಟಮಿ ಅಂದರೆ ಸಾಕು ಮೊದಲು ನೆನಪಾಗೋದೇ ಕೃಷ್ಣನೂರು ಉಡುಪಿ. ಪೊಡವಿಗೊಡೆಯನ ಕ್ಷೇತ್ರವಾದ ಉಡುಪಿಯಲ್ಲಿ ಜನ್ಮಾಷ್ಟಮಿಯ ಮಾರನೇ ದಿನವಾದ ಇಂದು ವಿಟ್ಲಪಿಂಡಿಯ ಉತ್ಸವ ಮೇಳೈಸಿತ್ತು. ಚಿನ್ನದ ತೇರಿನಲ್ಲಿ ಬಂದ ಮುದ್ದು ಕೃಷ್ಣನ ಮೆರವಣಿಗೆ, ಅಷ್ಟ ಮಠಗಳ ರಥ ಬೀದಿಯಲ್ಲಿ ಕೃಷ್ಣನ ಲೀಲೋತ್ಸವ, ಮೊಸರ ಕುಡಿಕೆ ಒಡೆಯುವುದು ಸೇರಿದಂತೆ ವಿಟ್ಲಪಿಂಡಿಯ ಉತ್ಸವ ಇಂದು ಉಡುಪಿಯಲ್ಲಿ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ.


ಚಾರ್ತುಮ್ಯಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ಸವ ಮೂರ್ತಿ ದೇಗುಲದಿಂದ ಹೊರಬರಲಿಲ್ಲ. ಹೀಗಾಗಿ ಅಷ್ಟಮಿ ಸಂಭ್ರಮಕ್ಕೆಂದು ಸಿದ್ಧವಾಗಿದ್ದ ಮಣ್ಣಿನ ಕೃಷ್ಣನ ಮೂರ್ತಿಯನ್ನು ಚಿನ್ನದ ರಥದಲ್ಲಿ ಕುಳ್ಳಿರಿಸಿ ರಥಬೀದಿ ಸುತ್ತ ಮೆರವಣಿಗೆಯನ್ನು ಮಾಡಲಾಗಿದೆ. ಪರ್ಯಾಯ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಬಾಲಕೃಷ್ಣನಿಗೆ ಪೂಜೆ ಕೈಂಕರ್ಯವನ್ನು ನೆರವೇರಿಸಿದರು. ಕೃಷ್ಣನ ಮೂರ್ತಿ ರಥಬೀದಿಯಲ್ಲಿ ಮೆರವಣಿಗೆ ಮಾಡುತ್ತಿದ್ದ ಸಂದರ್ಭದಲ್ಲಿ ಗೊಲ್ಲರ ವೇಷ ತೊಟ್ಟಿದ್ದ ಯುವಕರು ಮೊಸರಿನ ಕುಡಿಕೆಗಳನ್ನು ಒಡೆದ ದೃಶ್ಯಗಳು ಕಣ್ಣಿಗೆ ರಸದೌತಣ

ವನ್ನು ನೀಡುವಂತಿತ್ತು.

ವಿಟ್ಲಪಿಂಡಿಯ ಉತ್ಸವದ ನಿಮಿತ್ತ ಶ್ರೀಮಠದ ಬಾಣಸಿಗರು ತಯಾರಿಸಿದ್ದ ಉಂಡೆ ಹಾಗೂ ಚಕ್ಕುಲಿಗಳು ಇಂದು ಭಕ್ತರಿಗೆ ಪ್ರಸಾದದ ರೂಪದಲ್ಲಿ ನೀಡಲಾಗಿದೆ. ಕಳೆದ 2 ವರ್ಷಗಳಿಂದ ಕೋವಿಡ್​ನಿಂದಾಗಿ ಅತ್ಯಂತ ಸರಳವಾಗಿ ನಡೆಯುತ್ತಿದ್ದ ವಿಟ್ಲಪಿಂಡಿ ಸಂಭ್ರಮ ಈ ಬಾರಿ ಅತ್ಯಂತ ಅದ್ಧೂರಿಯಾಗಿ ನೆರವೇರಿದೆ. ಹುಲಿ ವೇಷ, ಮುದ್ದು ಕೃಷ್ಣ ಹಾಗೂ ರಾಧೆ ವೇಷಾಧಾರಿಗಳು, ಸಾವಿರಾರು ಸಂಖ್ಯೆಯ ಭಕ್ತರು ವಿಟ್ಲಪಿಂಡಿಯ ಸಂಭ್ರಮವನ್ನು ಇನ್ನಷ್ಟು ಹೆಚ್ಚಿಸಿದರು .

ವಿಟ್ಲಪಿಂಡಿಯ ಉತ್ಸವ ಇಷ್ಟೊಂದು ಅದ್ಧೂರಿಯಾಗಿ ನಡೆಯಲು ಮುಖ್ಯ ಕಾರಣ ಶಿರೂರು ಲಕ್ಷ್ಮೀ ವರತೀರ್ಥರು. ಆದರೆ ಅವರ ಮರಣದ ಬಳಿಕ ವಿಟ್ಲಪಿಂಡಿ ಎಂದರೆ ಸಾಕು ಶಿರೂರು ಶ್ರೀಗಳು ನೆನಪಾಗುತ್ತಾರೆ. ಹೀಗಾಗಿ ಶೀರೂರು ಶ್ರೀಗಳ ಸ್ಮರಣಾರ್ಥ ಶ್ರೀ ಮಠದ ವತಿಯಿಂದ ಚಕ್ಕುಲಿಗಳನ್ನು ತಯಾರಿಸಿ ಭಕ್ತರಿಗೆ ನೀಡಲಾಗಿದೆ.

ಇದನ್ನು ಓದಿ : former minister MB Patil : ಸಿದ್ದರಾಮಯ್ಯ ಬಳಿಕ ಎಂ.ಬಿ ಪಾಟೀಲ್​​ಗೆ ಘೇರಾವ್​ : ಗೋ ಬ್ಯಾಕ್​​​ ಎಂ.ಬಿ ಪಾಟೀಲ್​ ಘೋಷಣೆ

ಇದನ್ನೂ ಓದಿ : Minister Ashwattha Narayan : ಮೊಟ್ಟೆ ರಾಜಕೀಯದಲ್ಲಿ ಡಿಕೆಶಿ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತೆ : ಅಶ್ವತ್ಥ ನಾರಾಯಣ ವ್ಯಂಗ್ಯ

vitla pindi- festival held in udupi during srikrishna janmashtami

Comments are closed.