Boycott Amazon : ರಾಧಾ-ಕೃಷ್ಣರ ಅಶ್ಲೀಲ ಭಂಗಿಯ ಪೇಟಿಂಗ್​ ಮಾರಾಟಕ್ಕೆ ಮುಂದಾದ ಅಮೆಜಾನ್​ : ಹಿಂದೂಗಳ ಆಕ್ರೋಶ

Boycott Amazon : ಪ್ರತಿಯೊಂದು ಧರ್ಮದಲ್ಲಿಯೂ ಆಯಾ ದೇವರಿಗೆ ಪವಿತ್ರವಾದ ಸ್ಥಾನಮಾನವನ್ನು ನೀಡಲಾಗಿದೆ.ಈ ವಿಚಾರದಲ್ಲಿ ಹಿಂದೂ ಧರ್ಮ ಕೂಡ ಹೊರತಾಗಿಲ್ಲ. ಆದರೆ ಈ ದಿನಗಳಲ್ಲಿ ಹಿಂದೂ ದೇವತೆಗಳಿಗೆ ಅವಮಾನ ಮಾಡುವಂತಹ ಸಾಕಷ್ಟು ಪೋಸ್ಟರ್​ಗಳು ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದೆ. ಕೆಲವು ತಿಂಗಳುಗಳ ಹಿಂದೆ ಧೂಮಪಾನ ಮಾಡುತ್ತಿರುವ ರೀತಿಯಲ್ಲಿ ದುರ್ಗಾಮಾತೆಯನ್ನು ಚಿತ್ರಿಸಿದ್ದು ಭಾರೀ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಇ – ಕಾಮರ್ಸ್ ದೈತ್ಯ ಅಮೆಜಾನ್​​​ ಶ್ರೀ ಕೃಷ್ಣ ಜನ್ಮಾಷ್ಟಮಿಯ ಸಂದರ್ಭದಲ್ಲಿ ತನ್ನ ಶಾಪಿಂಗ್​ ವೆಬ್​ಸೈಟ್​ನಲ್ಲಿ ರಾಧಾ-ಕೃಷ್ಣರ ಅಶ್ಲೀಲ ಪೇಟಿಂಗ್​ಗಳನ್ನು ಮಾರಾಟಕ್ಕೆ ಮುಂದಾಗಿದ್ದು ಹಿಂದೂಗಳ ಆಕ್ರೋಶಕ್ಕೆ ಕಾರಣವಾಗಿದೆ.


ರಾಧಾ ಹಾಗೂ ಕೃಷ್ಣನ ಪ್ರೀತಿಯನ್ನು ಈ ಜಗತ್ತಿನ ಅತ್ಯಂತ ಪವಿತ್ರವಾದ ಪ್ರೀತಿ ಎಂದು ಕರೆಯಲಾಗುತ್ತೆ. ಆದರೆ ಅಮೆಜಾನ್​ನಲ್ಲಿ ಬಿಕರಿಗೆ ಇಡಲಾಗಿದ್ದ ರಾಧಾ -ಕೃಷ್ಣರ ಫೋಟೋದಲ್ಲಿ ಅಶ್ಲೀಲ ಭಂಗಿಯಲ್ಲಿ ರಾಧಾ ಕೃಷ್ಣ ಕುಳಿತಿರುವಂತೆ ಚಿತ್ರಿಸಲಾಗಿದೆ. ಇದು ಹಿಂದೂ ಜನ ಜಾಗೃತಿ ಸಮಿಯಿಯ ಗಮನಕ್ಕೆ ಬಂದಿದ್ದು ಸೋಶಿಯಲ್​ ಮೀಟಿಯಾದಲ್ಲಿ ಬಾಯ್ಕಾಟ್​ ಅಮೆಜಾನ್​ ಎಂಬ ಅಭಿಯಾನ ನಡೆಯುತ್ತಿದೆ.


ಹಿಂದೂ ಜನ ಜಾಗೃತಿ ಸಮಿತಿಯು ಹಿಂದೂ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಅಡಿಯಲ್ಲಿ ಅಮೆಜಾನ್​ ಇಂಡಿಯಾದ ವಿರುದ್ಧ ಸೂಕ್ತ ಕ್ರಮವನ್ನು ಕೈಗೊಳ್ಳುವಂತೆ ಆಗ್ರಹಿಸಿ ಬೆಂಗಳೂರಿನ ಪೊಲೀಸರಿಗೆ ಮನವಿ ಪತ್ರವನ್ನು ಸಲ್ಲಿಸಿದೆ. ಇಂಕೋಲೊಜಿ ಹಿಂದೂ ಗಾಡ್ಸ್​ ಫೈನ್​ ಆರ್ಟ್ಸ್​ ಪೇಂಟಿಂಗ್​​ ಎಂಬ ಶೀರ್ಷಿಕೆಯ ಅಡಿಯಲ್ಲಿ ಈ ಅಶ್ಲೀಲ ರಾಧಾ ಕೃಷ್ಣರ ಫೋಟೋವನ್ನು ಬಿಕರಿ ಮಾಡಲಾಗಿದ್ದು ಇದು ಕೋಟ್ಯಂತರ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿದೆ ಎಂದು ಸೋಶಿಯಲ್​ ಮೀಡಿಯಾಗಳಲ್ಲಿ ಆಕ್ರೋಶವನ್ನು ಹೊರ ಹಾಕಲಾಗುತ್ತಿದೆ.


ದೇಶದ ಕೋಟ್ಯಂತರ ಹಿಂದೂ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಿದ್ದ ಸಂದರ್ಭದಲ್ಲಿ ಅಶ್ಲೀಲ ಚಿತ್ರಗಳನ್ನು ಮಾರಾಟ ಮಾಡುತ್ತಿರುವ ಅಮೆಜಾನ್​ ಭಾರತೀಯ ದಂಡ ಸಂಹಿತೆ 295, 295 ಎ ಮತ್ತು 298 ರ ಅಡಿಯಲ್ಲಿ ಕಾನೂನಿಗೆ ವಿರುದ್ಧವಾದ ಕೆಲಸ ಮಾಡಿದಂತಾಗಿದೆ.

ಇದನ್ನು ಓದಿ : Minister Ashwattha Narayan : ಮೊಟ್ಟೆ ರಾಜಕೀಯದಲ್ಲಿ ಡಿಕೆಶಿ ಹೇಳಿಕೆ ಅವರ ಸಂಸ್ಕೃತಿ ತೋರಿಸುತ್ತೆ : ಅಶ್ವತ್ಥ ನಾರಾಯಣ ವ್ಯಂಗ್ಯ

ಇದನ್ನೂ ಓದಿ : Govinda Karjola’s outrage : ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದಿದ್ದು ತಪ್ಪು ಅಂದಮೇಲೆ ಅವರ ಹಿಂದೂ ವಿರೋಧಿ ಹೇಳಿಕೆಗಳೂ ತಪ್ಪೇ ಅಲ್ಲವೇ : ಕಾರಜೋಳ ಪ್ರಶ್ನೆ

Amazon sells ‘obscene’ Radha-Krishna painting on Janmashtami? Angry netizens tweet Boycott Amazon

Comments are closed.