egg throwing case in Kodagu : ಕಾಂಗ್ರೆಸ್ಸಿಗರೇ ಮೊಟ್ಟೆ ಎಸೆದು ಬಿಜೆಪಿಗರ ಮೇಲೆ ಯಾಕೆ ಅಪವಾದ ಹೊರಿಸಿರಬಾರದು?ಸಚಿವ ಮುನಿರತ್ನ ಹೊಸ ಬಾಂಬ್​​

ಕೋಲಾರ : egg throwing case in Kodagu : ಕೊಡಗು ಜಿಲ್ಲೆಯಲ್ಲಿ ನೆರೆ ಪೀಡಿತ ಪ್ರದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದ ವಿಪಕ್ಷ ನಾಯಕ ಸಿದ್ದರಾಮಯ್ಯ ಕಾರಿಗೆ ಬಿಜೆಪಿ ಕಾರ್ಯಕರ್ತರು ಮೊಟ್ಟೆ ಒಡೆದ ಪ್ರಕರಣ ಇದೀಗ ರಾಜಕೀಯ ವಲಯದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಬಿಜೆಪಿ ಕಾರ್ಯಕರ್ತರ ಈ ವರ್ತನೆಗೆ ಮಾಜಿ ಸಿಎಂ ಬಿ.ಎಸ್​ ಯಡಿಯೂರಪ್ಪ, ಸಿಎಂ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ನಾಯಕರೇ ಅಸಮಾಧಾನ ಹೊರ ಹಾಕುತ್ತಿರುವ ನಡುವೆಯೇ ಸಚಿವ ಮುನಿರತ್ನ ಮಾತ್ರ ಇದು ಉದ್ದೇಶಪೂರ್ವಕವಾಗಿ ನಡೆದ ಕೃತ್ಯ ಎಂದು ಹೇಳುವ ಮೂಲಕ ಕಾಂಗ್ರೆಸ್​ ಕಾರ್ಯಕರ್ತರತ್ತ ಬೊಟ್ಟು ಮಾಡಿದ್ದಾರೆ.


ಕೋಲಾರದಲ್ಲಿ ಈ ವಿಚಾರವಾಗಿ ಮಾತನಾಡಿದ ಉಸ್ತುವಾರಿ ಸಚಿವ ಮುನಿರತ್ನ ಸಿದ್ದರಾಮಯ್ಯ ಕಾರಿಗೆ ಮೊಟ್ಟೆ ಒಡೆದ ವಿಚಾರಕ್ಕೆ ಸಂಬಂಧಿಸಿ ಆಗಸ್ಟ್​​ 26ರಂದು ಕಾಂಗ್ರೆಸ್​ ಪ್ರತಿಭಟನೆ ಮಾಡುತ್ತೆ ಅಂದರೆ ಸಿದ್ದರಾಮಯ್ಯ ಉದ್ದೇಶಪೂರ್ವಕವಾಗಿಯೇ ಮೊಟ್ಟೆ ಹೊಡೆಸಿಕೊಂಡಿದ್ದಾರಾ ಎಂಬ ಅನುಮಾನ ಮೂಡುತ್ತಿದೆ. ಸಿದ್ದರಾಮಯ್ಯ ಕಡೆಯವರೇ ವಾಹನಕ್ಕೆ ಹೊಡೆದಿರಬಹುದು, ಬಳಿಕ ಅವರೇ ಬಿಜೆಪಿ ಕಾರ್ಯಕರ್ತರ ಮೇಲೆ ಆರೋಪ ಹೊರಿಸಿರಬಹುದು ಎಂದು ಹೊಸ ಬಾಂಬ್​ ಸಿಡಿಸಿದ್ದಾರೆ.


ಕಾಂಗ್ರೆಸ್​ನ ಮೊಟ್ಟೆ ರಾಜಕೀಯ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು ಚುನಾವಣೆ ಸಮೀಪಿಸುತ್ತಿದೆ ಅಲ್ವಾ ಹೀಗಾಗಿ ಮೊಟ್ಟೆ ಅಲ್ಲ ಏನು ಬೇಕಿದ್ರೂ ಬಳಸಿಕೊಳ್ತಾರೆ. ಸರ್ಕಾರದ ವಿರುದ್ಧ ಹೋರಾಡೋಕೆ ಕಾಂಗ್ರೆಸ್ಸಿಗರಿಗೆ ಬೇರೆ ಅಸ್ತ್ರ ಸಿಗ್ತಾ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ.


ನಾವು ಮನಸ್ಸು ಮಾಡಿದರೆ ಮುಖ್ಯಮಂತ್ರಿಗಳು ಹಾಗೂ ಸಚಿವರಿಗೆ ರಾಜ್ಯದಲ್ಲಿ ಓಡಾಡೋಕೆ ಬಿಡಲ್ಲ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಇದೇ ವೇಳೆ ಪ್ರತಿಕ್ರಿಯೆ ನೀಡಿದ ಮುನಿರತ್ನ, ಇಂತಹ ಮಾತು ಸಿದ್ದರಾಮಯ್ಯರ ಹಿರಿತನಕ್ಕೆ ಶೋಭೆ ತರೋದಿಲ್ಲ. ಇದು ಹೆದರಿಸುವ ತಂತ್ರ, ನಾನು ಮನಸ್ಸು ಮಾಡಿದರೆ ಓಡಾಡಲು ಬಿಡಲ್ಲ ಎಂದು ಹೇಳಿಕೆ ನೀಡುವುದು ತಪ್ಪು. ನಿನ್ನೆ ಕೊಡಗುವಿನಲ್ಲಿ ನಡೆದಿರುವ ಘಟನೆ ತಪ್ಪು. ಯಾರೇ ಆಗಿರಲಿ ಈ ರೀತಿ ಮಾಡುವುದು ತಪ್ಪೇ ಎಂದು ಹೇಳಿದರು.


ಕರ್ನಾಟಕದಲ್ಲಿರುವ ರಾಜಕಾರಣ ಶಾಂತಿಯುತವಾದ ರಾಜಕಾರಣ. ಸಿದ್ದರಾಮಯ್ಯರಂತಹ ಹಿರಿಯರಿಗೆ ಮೊಟ್ಟೆ ಒಡೆಯುವುದು ತಪ್ಪು. ಸಿದ್ದರಾಮಯ್ಯ ನಾನೇ ಮುಖ್ಯಮಂತ್ರಿ ಎಂದು ಹೇಳ್ತಾರೆ. ನಿನ್ನೆ ಕುಮಾರಸ್ವಾಮಿ ಡಿ.ಕೆ ಶಿವಕುಮಾರ್​ ಮುಂದಿನ ಸಿಎಂ ಆಗಲಿ ಎಂದು ಹೇಳಿದ್ದರು. ರಾಜ್ಯದಲ್ಲಿ ಸಿಎಂ ಕುರ್ಚಿ ಖಾಲಿ ಇಲ್ಲ. 2023ಕ್ಕೆ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವೇ ಅಧಿಕಾರಕ್ಕೆ ಬರಲಿದೆ. ಬಿಜೆಪಿ ಸರ್ಕಾರವನ್ನು ಜನರು ಮೆಚ್ಚಿಕೊಂಡಿದ್ದಾರೆ ಎಂದು ಸಚಿವ ಮುನಿರತ್ನ ಹೇಳಿದರು.

ಇದನ್ನು ಓದಿ : Former minister KS Eshwarappa : ಡಿ.ಕೆ ಶಿವಕುಮಾರ್​, ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಗುಡುಗು

ಇದನ್ನೂ ಓದಿ : janmastami in udupi : ಕೃಷ್ಣನೂರಿನಲ್ಲಿ ಜನ್ಮಾಷ್ಟಮಿ ಸಂಭ್ರಮ: ನಾಳೆ ವಿಟ್ಲಪಿಂಡಿ ಸಡಗರ

Minister Munirath’s response regarding the egg throwing case in Kodagu

Comments are closed.