DK Shivakumar : ‘ಮೂರು ವರ್ಷದ ಹಿಂದೆಯೇ ನಮಗೆ ಹಗ್ಗ ಹಾಕಿ ಗಲ್ಲಿಗೇರಿಸಬಹುದಿತ್ತಲ್ವಾ’ : ನಳೀನ್​ ಕುಮಾರ್​ ಕಟೀಲ್​ಗೆ ಡಿಕೆಶಿ ತಿರುಗೇಟು

ಚಾಮರಾಜನಗರ : DK Shivakumar : ಕಾಂಗ್ರೆಸ್​ ಸರ್ಕಾರದ ಅವಧಿಯಲ್ಲಿ ನಡೆದ ಅಕ್ರಮಗಳ ಬಗ್ಗೆಯೂ ತನಿಖೆ ನಡೆಸಲಾಗುವುದು ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​ ಹೇಳಿಕೆಗೆ ಕಾಂಗ್ರೆಸ್​ ನಾಯಕರು ಕೆಂಡಾಮಂಡಲರಾಗಿದ್ದಾರೆ. ತಮ್ಮ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್​ ನಾಯಕರು ಭ್ರಷ್ಟಾಚಾರ ನಡೆಸಿದ್ದಾರೆ ಎಂಬ ನಳೀನ್​ ಕುಮಾರ್​ ಕಟೀಲ್​​ ಆರೋಪಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಟಾಂಗ್​ ನೀಡಿದ್ದಾರೆ.


ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಈ ವಿಚಾರವಾಗಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​​ ಈಗ ಕಾಂಗ್ರೆಸ್​ ತನ್ನ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ಎಸಗಿದೆ ಎಂದು ಆರೋಪ ಮಾಡುವ ನಳೀನ್​ ಕುಮಾರ್​ ಕಟೀಲ್​ ಮೂರು ವರ್ಷದಿಂದ ಯಾಕೆ ಸುಮ್ಮನಿದ್ದರು..? ಇವರ ಬಾಯಿಗೆ ಏನಾಗಿತ್ತು..? ಇಷ್ಟೊತ್ತಿಗೆ ನಮಗೆ ಹಗ್ಗ ಹಾಕಿ ಗಲ್ಲಿಗೆ ಏರಿಸಬಹುದಿತ್ತಲ್ವಾ…? ಮೂರು ವರ್ಷದಿಂದ ನಳೀನ್​ ಕುಮಾರ್​ ಕಟೀಲ್​ ಎಲ್ಲಿಗೆ ಹೋಗಿದ್ದರು ಎಂದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.


ಸದನವನ್ನು ಬಿಟ್ಟು ಪಕ್ಷದ ಭಾರತ್​ ಜೊಡೋ ಯಾತ್ರೆಯಲ್ಲಿ ತೊಡಗಿಸಿಕೊಂಡಿರುವ ಬಗ್ಗೆಯೂ ಇದೇ ವೇಳೆ ಸ್ಪಷ್ಟನೆ ನೀಡಿದ ಅವರು, ಕಲಾಪ ಕರೀರಿ ಅಂತಾ ಹೇಳಿದವನು ನಾನೇ. ಸದನದಲ್ಲಿ ಮಾತನಾಡಲು ನಾವು ಬೇರೆಯವರನ್ನು ರೆಡಿ ಮಾಡಿ ಬಂದಿದ್ದೇವೆ. ಮಳೆಯಿಂದಾಗಿ ಬೆಂಗಳೂರಿನಲ್ಲಿ ಏನೇನಾಯ್ತು..? ಭ್ರಷ್ಟಾಚಾರ ಏನಾಯ್ತು ಅಂತೆಲ್ಲ ನಿನ್ನೆ ರೇಟ್​ ಕಾರ್ಡ್​ ಕೊಟ್ಟಿದ್ದೇವೆ. ಎಲ್ಲಾ ವಿಚಾರಗಳನ್ನು ನಾವು ಜನರ ಮುಂದೆ ಇಟ್ಟಿದ್ದೇವೆ. ಕಲಾಪ ಖಂಡಿತವಾಗಿಯೂ ಮುಖ್ಯವಾದದ್ದು. ಆದರೆ ಪಕ್ಷದ ಅಧ್ಯಕ್ಷನಾಗಿ ನನಗೆ ಭಾರತ್​ ಜೋಡೋ ಯಾತ್ರೆ ಕೂಡ ಮುಖ್ಯವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್​ ಹೇಳಿದ್ದಾರೆ.


ನಿನ್ನೆ ಮೈಸೂರಿನಲ್ಲಿ ಮಾತನಾಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್​ ಕುಮಾರ್​ ಕಟೀಲ್​, ನಮ್ಮ ಸರ್ಕಾರದ ಅವಧಿಯಲ್ಲಿ ಪಿಎಸ್ಐ ಪರೀಕ್ಷೆ ಸಂದರ್ಭದಲ್ಲಿ ನಡೆದ ಅಕ್ರಮ ಹೊರ ಬಿದ್ದಿದೆ. ಕೂಡಲೇ ನಾವು ತಪ್ಪಿತಸ್ಥರ ವಿರುದ್ಧ ಯಾವುದೇ ಮುಲಾಜು ನೋಡದೇ ಕ್ರಮ ಕೈಗೊಳ್ಳುತ್ತಿದ್ದೇವೆ. ಆದರೆ ಈ ಸಿದ್ದರಾಮಯ್ಯ ತಾನು ಸಿಎಂ ಆಗಿದ್ದ ಸಂದರ್ಭದಲ್ಲಿ ಈ ನೈತಿಕತೆ ಯಾಕೆ ತೋರಿಸಿಲ್ಲ ಎಂದು ಪ್ರಶ್ನೆ ಮಾಡಿದ್ದರು.

ಇದನ್ನು ಓದಿ : India Women Vs England Women: ಇಂಗ್ಲೆಂಡ್ ವನಿತೆಯರ ವಿರುದ್ಧ ಸ್ಮೃತಿ ಮಂಧನ ಅಬ್ಬರದ ಬ್ಯಾಟಿಂಗ್, ಭಾರತಕ್ಕೆ ಭರ್ಜರಿ ಜಯ

ಇದನ್ನೂ ಓದಿ : ICC T20 World Cup India matches : ಭಾರತದ ಪಂದ್ಯಗಳು ಯಾವಾಗ, ಎಲ್ಲಿ, ಎದುರಾಳಿಗಳು ಯಾರು..? ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

KPCC President DK Shivakumar’s anger against Naleen Kumar Kateel

Comments are closed.