Preparations in Mangalore : ಕಡಲನಗರಿಗೆ ಪ್ರಧಾನಿ ಆಗಮನಕ್ಕೆ ದಿನಗಣನೆ : ಭರದಿಂದ ಸಾಗಿದೆ ಸಿದ್ಧತೆ

ಮಂಗಳೂರು : Preparations in Mangalore : ಸೆಪ್ಟೆಂಬರ್ 2 ರಂದು ಕಡಲನಗರಿ ಮಂಗಳೂರಿಗೆ ಪ್ರಧಾನಿ ನರೇಂದ್ರ ಮೋದಿ‌‌ ಆಗಮಿಸಲಿದ್ದಾರೆ. ನಗರ ಹೊರವಲಯದ ಬಂಗ್ರಕೂಳೂರಿನಲ್ಲಿ ನಡೆಯಲಿರುವ ಬೃಹತ್ ಸಮಾವೇಶದಲ್ಲಿ ನಮೋ ಭಾಗಿಯಾಗಲಿದ್ದಾರೆ. ಕೊಚ್ಚಿಯಿಂದ ಸೇನಾ ಹೆಲಿಕಾಫ್ಟರ್ ಮೂಲಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ಪ್ರಧಾನಿ ಬರುವ ಸಾಧ್ಯತೆಯಿದೆ. ಹೀಗಾಗಿ ಪ್ರಧಾನಿ ಕಾರ್ಯಕ್ರಮಕ್ಕೆ ಭರದ ಸಿದ್ದತೆ ನಡೆಯುತ್ತಿದೆ.

ಬಂಗ್ರಕೂಳೂರು ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಸಮಾವೇಶಕ್ಕೆ ತಯಾರಿಯನ್ನು ಮಾಡಲಾಗುತ್ತಿದೆ. ದಕ್ಷಿಣಕನ್ನಡ ಜಿಲ್ಲೆಯಿಂದಲೇ ಸುಮಾರು ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಸೇರುವ ನಿರೀಕ್ಷೆಯಿದೆ. ಇದಕ್ಕಾಗಿ ಸುಮಾರು 25 ಎಕರೆ ಪ್ರದೇಶದಲ್ಲಿ ಬೃಹತ್ ಪೆಂಡಾಲ್ ಹಾಕುವುದಕ್ಕೆ ಸಿದ್ದತೆ ಮಾಡಲಾಗುತ್ತಿದೆ. ಪ್ರಧಾನಿ ಭಾಗವಹಿಸುವ ಸರ್ಕಾರಿ ಕಾರ್ಯಕ್ರಮ ಇದಾಗಿದ್ದು ನವಮಂಗಳೂರು ಬಂದರು ಪ್ರಾಧಿಕಾರ ಹಾಗೂ ಎಂ.ಆರ್.ಪಿ.ಎಲ್‌ನ ಅಭಿವೃದ್ದಿ ಕಾರ್ಯಗಳ ಲೋಕಾರ್ಪಣೆ, ಯೋಜನೆಗಳಿಗೆ ಪ್ರಧಾನಿ ಚಾಲನೆ ನೀಡಲಿದ್ದಾರೆ. ಸಮಾವೇಶದಲ್ಲಿ ಕೇಂದ್ರ, ರಾಜ್ಯ ಯೋಜನೆಗಳ ಫಲಾನುಭವಿಗಳು ಭಾಗಿಯಾಗಲಿದ್ದಾರೆ. ಪ್ರಧಾನಿ ಕಚೇರಿಯಿಂದ ಕಾರ್ಯಕ್ರಮದ ಅಧಿಕೃತ ಪಟ್ಟಿ ಇನ್ನಷ್ಟೇ ಬರಬೇಕಿದ್ದು ಜಿಲ್ಲಾಡಳಿತ, ಜನಪ್ರತಿನಿಧಿಗಳು ಸರಣಿ ಸಭೆ ನಡೆಸಿ ಕಾರ್ಯಕ್ರಮಕ್ಕೆ ತಯಾರಿ ನಡೆಸುತ್ತಿದ್ದಾರೆ.

ಸೋಮವಾರ ವೇಳೆಗೆ ಸಿದ್ದತೆಗೆ ಸಂಬಂಧಿಸಿದ ಎಲ್ಲಾ ಯೋಜನೆ ಅಂತಿಮವಾಗಲಿದೆ. ಇದರ ಮ್ಯಾಪ್ ಸಿದ್ದಪಡಿಸಿ ವಾಟ್ಸಪ್ ಮೂಲಕ ಸಾರ್ವಜನಿಕರಿಗೆ ಮಾಹಿತಿ‌ ನೀಡಲಾಗುವುದು ಎಂದು ಸ್ಥಳೀಯ ಶಾಸಕ ಭರತ್ ಶೆಟ್ಟಿ ಮಾಹಿತಿ ನೀಡಿದ್ದಾರೆ. ಕುಡಿಯುವ ನೀರು, ಶೌಚಾಲಯ ಇತ್ಯಾದಿ ಮೂಲ ಸೌಕರ್ಯಕ್ಕೆ ವ್ಯವಸ್ಥೆ ಮಾಡುತ್ತಿದ್ದು ಮೈದಾನಕ್ಕೆ ಹೆದ್ದಾರಿಯಿಂದ ಒಟ್ಟು ಮೂರು ಎಂಟ್ರಿ ಇರಲಿದೆ.

ಪ್ರವೀಣ್ ನೆಟ್ಟಾರ್ ಹತ್ಯೆ ಸೇರಿದಂತೆ ರಾಜ್ಯದಲ್ಲಿ ನಡೆದಿರುವ ಹಲವು ವಿದ್ಯಮಾನಗಳಿಂದ ಕಳೆಗುಂದಿದ್ದ ಬಿ.ಜೆ.ಪಿ ವರ್ಚಸ್ಸು ವೃದ್ದಿಗೆ ಪ್ರಧಾನಿ ಮೋದಿ ಅವರ ಕಾರ್ಯಕ್ರಮ ಹೊಸ ವೇದಿಕೆ ಒದಗಿಸಲಿದೆ. ಒಟ್ಟಿನಲ್ಲಿ ಕೇಸರಿ ಪಕ್ಷದಲ್ಲಿ ನಮೋ ಕಾರ್ಯಕ್ರಮ ಹೊಸ ಸಂಚಲನ ಸೃಷ್ಟಿಸಿದ್ದು ಇದೇ ವೇದಿಕೆ ಮೂಲಕ ಚುನಾವಣೆಗೆ ರಣಕಹಳೆ ಮೊಳಗಿಸಲು ರಾಜ್ಯ ಬಿ.ಜೆ.ಪಿ ಭರ್ಜರಿ ಸಿದ್ದತೆ ನಡೆಸಿದೆ.

ಇದನ್ನು ಓದಿ : Congress workers’ outrage :24 ಗಂಟೆಯೊಳಗೆ ಚಿರತೆ ಸೆರೆ ಹಿಡಿಯಿರಿ: ಇಲ್ಲ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ- ಬೆಳಗಾವಿಯಲ್ಲಿ ಕೈ ಕಾರ್ಯಕರ್ತೆಯರ ಆಕ್ರೋಶ

ಇದನ್ನೂ ಓದಿ : My sugar factory in Mandya : ಮಂಡ್ಯ ರೈತರಿಗೆ ಸಿಹಿ ಸುದ್ದಿ : ಶೀಘ್ರದಲ್ಲೇ ಪುನಾರಂಭಗೊಳ್ಳಲಿದೆ ಮೈ ಶುಗರ್​ ಕಾರ್ಖಾನೆ

Preparations in Mangalore for Prime Minister Modi’s arrival

Comments are closed.