KL Rahul Record in T20 : ಆಸ್ಟ್ರೇಲಿಯಾ ವಿರುದ್ಧ ಆಕರ್ಷಕ ಅರ್ಧಶತಕ ಬಾರಿಸಿ ವಿಶೇಷ ದಾಖಲೆ ಬರೆದ ಕೆ.ಎಲ್ ರಾಹುಲ್

ಮೊಹಾಲಿ: (KL Rahul Record in T20) ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತ 4 ವಿಕೆಟ್’ಗಳ ಸೋಲು ಕಂಡಿದೆ. ಸೋಲಿನ ಮಧ್ಯೆಯೂ ಆಕರ್ಷಕ ಅರ್ಧಶತಕ ಬಾರಿಸಿದ ಕನ್ನಡಿಗ ಕೆ.ಎಲ್ ರಾಹುಲ್ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಇದೇ ವೇಳೆ ತಮ್ಮ ಅರ್ಧಶತಕದ ಇನ್ನಿಂಗ್ಸ್’ನಲ್ಲಿ ರಾಹುಲ್ ಹಲವು ದಾಖಲೆಗಳನ್ನು ಬರೆದಿದ್ದಾರೆ.

ಮೊಹಾಲಿಯ ಪಂಜಾಬ್ ಕ್ರಿಕೆಟ್ ಸಂಸ್ಥೆ ಮೈದಾನದಲ್ಲಿ ಮಂಗಳವಾರ ನಡೆದ ಆಸೀಸ್ ವಿರುದ್ಧದ ಪ್ರಥಮ ಟಿ20 (India Vs Australia T20 Series) ಪಂದ್ಯದಲ್ಲಿ ಆಕರ್ಷಕ ಆಟವಾಡಿದ್ದ ರಾಹುಲ್ ಕೇವಲ 35 ಎಸೆತಗಳಲ್ಲಿ 55 ರನ್ ಸಿಡಿಸಿದ್ದರು. ರಾಹುಲ್ ಇನ್ನಿಂಗ್ಸ್’ನಲ್ಲಿ 4 ಬೌಂಡರಿಗಳು ಮತ್ತು 3 ಸಿಕ್ಸರ್’ಗಳಿದ್ದವು. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ರಾಹುಲ್ ಬಾರಿಸಿದ 18ನೇ ಅರ್ಧಶತಕ. ಇದೇ ವೇಳೆ ರಾಹುಲ್ ಟಿ20 ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ 2 ಸಾವಿರ ರನ್ ಪೂರ್ತಿಗೊಳಿಸಿದ್ದಾರೆ.

ಆಸೀಸ್ ವಿರುದ್ಧದ ಮೊದಲ ಟಿ20ಯಲ್ಲಿ ರಾಹುಲ್ ಬರೆದ ದಾಖಲೆಗಳು

  • ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 2000 ರನ್ ಪೂರ್ತಿ.
  • ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ವೇಗವಾಗಿ 2 ಸಾವಿರ ಪೂರ್ತಿಗೊಳಿಸಿದ ಜಗತ್ತಿನ 3ನೇ ಆಟಗಾರ.
  • ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ವೇಗವಾಗಿ 2 ಸಾವಿರ ಪೂರ್ತಿಗೊಳಿಸಿದ ಭಾರತದ 2ನೇ ಆಟಗಾರ.
  • ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 200+ ಸ್ಕೋರ್’ಗಳಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಆಟಗಾರ (10 ಅರ್ಧಶತಕ)
  • ತವರು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಭಾರತ ಆರಂಭಿಕ ಆಟಗಾರ (09 ಅರ್ಧಶತಕ)

ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್: ವೇಗವಾಗಿ 2000 ರನ್ ದಾಖಲೆ (ಟಾಪ್-5)

  1. ಬಾಬರ್ ಅಜಮ್ (ಪಾಕಿಸ್ತಾನ): 52 ಇನ್ನಿಂಗ್ಸ್
  2. ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ): 52 ಇನ್ನಿಂಗ್ಸ್
  3. ವಿರಾಟ್ ಕೊಹ್ಲಿ (ಭಾರತ): 56 ಇನ್ನಿಂಗ್ಸ್
  4. ಕೆ.ಎಲ್ ರಾಹುಲ್ (ಭಾರತ): 58 ಇನ್ನಿಂಗ್ಸ್
  5. ಆರೋನ್ ಫಿಂಚ್ (ಆಸ್ಟ್ರೇಲಿಯಾ): 62 ಇನ್ನಿಂಗ್ಸ್

200+ ಸ್ಕೋರ್’ಗಳಲ್ಲಿ ಅತೀ ಹೆಚ್ಚು ಅರ್ಧಶತಕ
10: ಕೆ.ಎಲ್ ರಾಹುಲ್ (ಭಾರತ)
09: ರೋಹಿತ್ ಶರ್ಮಾ (ಭಾರತ)
06: ಆರೋನ್ ಫಿಂಚ್ (ಆಸ್ಟ್ರೇಲಿಯಾ)
05: ಬಾಬರ್ ಅಜಮ್ (ಪಾಕಿಸ್ತಾನ)
05: ಕಾಲಿನ್ ಮನ್ರೊ (ನ್ಯೂಜಿಲೆಂಡ್)
05: ವಿರಾಟ್ ಕೊಹ್ಲಿ (ಭಾರತ)

ತವರು ಟಿ20 ಪಂದ್ಯಗಳಲ್ಲಿ ಅತೀ ಹೆಚ್ಚು ಅರ್ಧಶತಕ ಬಾರಿಸಿದ ಭಾರತ ಆರಂಭಿಕರು
09: ಕೆ.ಎಲ್ ರಾಹುಲ್ (20 ಇನ್ನಿಂಗ್ಸ್)
09: ರೋಹಿತ್ ಶರ್ಮಾ (43 ಇನ್ನಿಂಗ್ಸ್)

ಆರಂಭಿಕನಾಗಿ ಆಸ್ಟ್ರೇಲಿಯಾ ವಿರುದ್ಧ ಅತೀ ಹೆಚ್ಚು 50+ ರನ್ ಬಾರಿಸಿದ ಭಾರತೀಯರು
03: ಕೆ.ಎಲ್ ರಾಹುಲ್
02: ರೋಹಿತ್ ಶರ್ಮಾ, ಶಿಖರ್ ಧವನ್, ಗೌತಮ್ ಗಂಭೀರ್

ಇದನ್ನೂ ಓದಿ : Death Over Problem : ವಿಶ್ವಕಪ್‌ಗೆ ಡೇಂಜರ್ ಸಿಗ್ನಲ್.. ಭಾರತವನ್ನು ಸೋಲಿಸುತ್ತಿದ್ದಾನೆ “ಡೆತ್ ಓವರ್” ವಿಲನ್

ಇದನ್ನೂ ಓದಿ : Rohit Sharma Dinesh Karthik : ಭಾರತ Vs ಆಸ್ಟ್ರೇಲಿಯಾ ಟಿ20 ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಕುತ್ತಿಗೆ ಹಿಚುಕಿದ ರೋಹಿತ್ ಶರ್ಮಾ

KL Rahul Record in T20 special record by scoring an impressive half-century against Australia

Comments are closed.