Rishabh Pant: ಜವಾಬ್ದಾರಿ ಮರೆತ ರಿಷಭ್ ಪಂತ್’ಗೆ ಹಿಗ್ಗಾಮುಗ್ಗ ಬೈದ ಕ್ಯಾಪ್ಟನ್ ರೋಹಿತ್ ಶರ್ಮಾ

ದುಬೈ: (Rohit sharma scolding Rishabh pant) ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಸೂಪರ್-4 ಪಂದ್ಯದಲ್ಲಿ ಟೀಮ್ ಇಂಡಿಯಾ ವಿಕೆಟ್ ಕೀಪರ್ ರಿಷಭ್ ಪಂತ್ ಕೇವಲ 14 ರನ್ ಗಳಿಸಿ ಔಟಾದರು. ಅನುಭವಿ ದಿನೇಶ್ ಕಾರ್ತಿಕ್ ಬದಲು ಆಡುವ ಬಳಗದಲ್ಲಿ ಸ್ಥಾನ ಪಡೆದ ರಿಷಭ್ ಪಂತ್ ಬೇಜವಾಬ್ದಾರಿ ಹೊಡತಕ್ಕೆ ಕೈ ಹಾಕಿ ವಿಕೆಟ್ ಒಪ್ಪಿಸಿದರು. ನಾಯಕ ರೋಹಿತ್ ಶರ್ಮಾ, ಉಪನಾಯಕ ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ಔಟಾದಾಗ ವಿರಾಟ್ ಕೊಹ್ಲಿ ಜೊತೆ ನಿಂತು ಇನ್ನಿಂಗ್ಸ್ ಕಟ್ಟಬೇಕಿದ್ದ ಪಂತ್ 14 ರನ್ ಗಳಿಸಿದ್ದಾಗ ಪಾಕ್ ಲೆಗ್ ಸ್ಪಿನ್ನರ್ ಶದಾಬ್ ಖಾನ್ ಬೌಲಿಂಗ್’ನಲ್ಲಿ ರಿವರ್ಸ್ ಹೊಡೆತಕ್ಕೆ ಕೈ ಹಾಕಿ ಅತ್ಯಂತ ಬೇಜವಾಬ್ದಾರಿಯುತವಾಗಿ ಔಟಾದರು. ಇದು ನಾಯಕ ರೋಹಿತ್ ಶರ್ಮಾ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು.

ಔಟಾಗಿ ಪೆವಿಲಿಯನ್’ಗೆ ಬಂದ ರಿಷಭ್ ಪಂತ್’ಗೆ ರೋಹಿತ್ ಶರ್ಮಾ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡರು. ಇದು ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ.

ಪಾಕಿಸ್ತಾನ ವಿರುದ್ದದ ಪಂದ್ಯದಲ್ಲಿ ಭಾರತ ಸೋಲನ್ನು ಕಂಡಿದೆ. ಅದ್ರಲ್ಲೂ ವಿರಾಟ್‌ ಕೊಹ್ಲಿ ಹೊರತುಪಡಿಸಿ ಉಳಿದ್ಯಾವ ಆಟಗಾರರು ಕೂಡ ನಿರೀಕ್ಷಿತ ಆಟದ ಪ್ರದರ್ಶನ ನೀಡುವಲ್ಲಿ ವಿಫಲರಾಗಿದ್ದರು. ಅದ್ರಲ್ಲೂ ಭಾರತ ತಂಡದ ವಿಕೆಟ್‌ ಕೀಪರ್‌ ರಿಷಬ್‌ ಪಂತ್‌ ಕೆಟ್ಟ ಹೊಡೆತಕ್ಕೆ ಮನ ಮಾಡಿ ವಿಕೆಟ್‌ ಒಪ್ಪಿಸಿ ಫೆವಿಲಿಯನ್‌ ಹಾದಿ ಹಿಡಿದಿದ್ದರು. ಸಹಜವಾಗಿಯೇ ಇದು ರೋಹಿತ್‌ ಶರ್ಮಾ ಆಕ್ರೋಶಕ್ಕೆ ಕಾರಣವಾಗಿತ್ತು.

https://twitter.com/cric_roshmi/status/1566446687618760704?s=21

ಸಾಮಾಜಿಕ ಜಾಲತಾಣದಲ್ಲಿಯೂ ರಿಷಬ್‌ ಪಂತ್‌ ಆಟದ ಕುರಿತು ಆಕ್ರೋಶ ವ್ಯಕ್ತವಾಗುತ್ತಿದೆ. ಹಲವರು ಸಂಜು ಸ್ಯಾಮ್ಸನ್‌ ಹಾಗೂ ರಿಷಬ್‌ ಪಂತ್‌ ಅವರ ಆಟವನ್ನು ಹೋಲಿಕೆ ಮಾಡುವ ಟ್ವೀಟ್‌ ಮಾಡುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ರಿಷಬ್‌ ಪಂತ್‌ ಟೀಂ ಇಂಡಿಯಾ ಪರ ಕಣಕ್ಕೆ ಇಳಿದಿದ್ದರೂ ಕೂಡ ಹೇಳಿಕೊಳ್ಳುವಂತಹ ಪ್ರದರ್ಶನವನ್ನು ನೀಡಿಲ್ಲ.

ಇದನ್ನೂ ಓದಿ : Arshdeep Singh: ಕ್ಯಾಚ್ ಬಿಟ್ಟ ತಪ್ಪಿಗೆ ಒಂದೇ ದಿನದಲ್ಲಿ ಖಲಿಸ್ತಾನಿಯಾದ ಟೀಮ್ ಇಂಡಿಯಾ ಕ್ರಿಕೆಟರ್

ಇದನ್ನೂ ಓದಿ : Kohli breaks Rohit’s Record: ರೋಹಿತ್ ಶರ್ಮಾ ವಿಶ್ವದಾಖಲೆಯನ್ನು ಪುಡಿಗಟ್ಟಿದ ಕಿಂಗ್ ಕೊಹ್ಲಿ

Rohit sharma scolding Rishabh pant after his poor shot selection ind vs pak Asia cup 2022

Comments are closed.