Aradhana mahotsava in mantralaya : ಮಂತ್ರಾಲಯದಲ್ಲಿ ರಾಯರ ಅದ್ಧೂರಿ 351ನೇ ಆರಾಧನಾ ಮಹೋತ್ಸವ

ರಾಯಚೂರು : aradhana mahotsava in mantralaya : ರಾಘವೇಂದ್ರ ಸ್ವಾಮಿಗಳು ನೆಲೆಸಿರುವ ಮಂತ್ರಾಲಯ ಕ್ಷೇತ್ರದಲ್ಲಿ ಸಂಭ್ರಮ ಜೋರಾಗಿದೆ. ರಾಯದ 351ನೇ ಆರಾಧನಾ ಮಹೋತ್ಸ ಆರಂಭಗೊಂಡಿದ್ದು ಇಂದು ರಾಯರ ಪೂರ್ವಾರಾಧನೆಯನ್ನು ನಡೆಸಲಾಗುತ್ತಿದೆ. ಕಳೆದ 2 ವರ್ಷಗಳಿಂದ ಕೊರೊನಾ ಕಾರಣದಿಂದಾಗಿ ಮಂತ್ರಾಲಯಕ್ಕೆ ಆಗಮಿಸುವ ಭಕ್ತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ಈ ಬಾರಿ ಅಂದಾಜಿಗೂ ಮೀರಿ ಭಕ್ತರು ರಾಘವೇಂದ್ರನ ದರ್ಶನಕ್ಕೆ ಆಗಮಿಸುತ್ತಿದ್ದು ಶ್ರೀ ಮಠದಲ್ಲಿ ಭಕ್ತರ ವಸತಿಗೆ ಯಾವುದೇ ಅಡಚಣೆ ಉಂಟಾಗದಂತೆ ಸಕಲ ಕ್ರಮಗಳನ್ನು ಕೈಗೊಳ್ಳಲಾಗಿದೆ.

ರಾಜ್ಯದಲ್ಲಿ ಈ ಬಾರಿ ಜೋರಾಗಿರುವ ವರುಣನ ಆರ್ಭಟದ ಪ್ರಭಾವ ಮಂತ್ರಾಲಯದ ಮೇಲೂ ಬಿದ್ದಿದೆ. ಭಾರೀ ಮಳೆಯ ಹಿನ್ನೆಲೆಯಲ್ಲಿ ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿರುವ ಕಾರಣ ಗಂಗಮ್ಮ ದೇವಸ್ಥಾನ ಜಲಾವೃತಗೊಂಡಿದೆ. ಹೀಗಾಗಿ ಶ್ರೀ ಮಠದ ಸುತ್ತ ಭಕ್ತರಿಗೆ ಯಾವುದೇ ಅಪಾಯ ಉಂಟಾಗದಂತೆ ನಿಗಾ ವಹಿಸಲಾಗಿದೆ. ಮುಂಜಾಗ್ರಾತ ಕ್ರಮವಾಗಿ ತುಂಗಭದ್ರಾ ನದಿಯಲ್ಲಿ ತೀರ್ಥ ಸ್ನಾನ ಕೈಗೊಳ್ಳಲು ಭಕ್ತರಿಗೆ ನಿಷೇಧ ಹೇರಲಾಗಿದೆ.ಇದರ ಬಲದಾಗಿ ಭಕ್ತರ ಸ್ನಾನಕ್ಕೆ ತಾತ್ಕಾಲಿಕ ಸ್ನಾನ ಘಟ್ಟಗಳ ನಿರ್ಮಾಣವಾಗಿದೆ. ಭಕ್ತರಿಗೆ ತುಂಗಭದ್ರಾ ನದಿ ಸಮೀಪಕ್ಕೆ ತೆರಳಲು ನಿರ್ಬಂಧ ಹೇರಲಾಗಿದ್ದು ಆದರೂ ಯಾವುದಾದರೂ ಅಪಾಯ ಉಂಟಾದಲ್ಲಿ ತಕ್ಷಣ ರಕ್ಷಣಾ ಕಾರ್ಯ ಆರಂಭಿಸಲು ಅಂಬಿಗರನ್ನು ನಿಯೋಜನೆ ಮಾಡಲಾಗಿದೆ. ಜೊತೆಯಲ್ಲಿ ಮಂತ್ರಾಲಯ ಪೊಲೀಸರು, ಆಡಳಿತ ಮಂಡಳಿ ಹಾಗೂ ಸೆಕ್ಯೂರಿಟಿ ಗಾರ್ಡ್​ಗಳು ನದಿಯ ಸುತ್ತ ಹದ್ದಿನ ಕಣ್ಣಿಟ್ಟಿದ್ದಾರೆ.

ರಾಯರ ಆರಾಧನಾ ಮಹೋತ್ಸವವೆಂದರೆ ಶ್ರೀ ಮಠಕ್ಕೆ ಬರುವ ಭಕ್ತರ ಸಂಖ್ಯೆಯು ದುಪ್ಪಟ್ಟಾಗುತ್ತದೆ. ಈ ಸಂದರ್ಭದಲ್ಲಿ ಭಕ್ತರ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಬಾರದೆಂದು ಬರೋಬ್ಬರಿ 140 ಅಡಿ ಎತ್ತರದ ಕಾರಿಡಾರ್​ ನಿರ್ಮಾಣ ಮಾಡಲಾಗಿದೆ. ಈ ಬೃಹತ್​ ಕಾರಿಡಾರ್​ನಲ್ಲಿ ಭಕ್ತರು ಅನಾಯಾಸವಾಗಿ ಓಡಾಡಬಹುದಾಗಿದೆ.

ಈ ಹಿಂದೆ ಮಂತ್ರಾಲಯ ಪ್ರವೇಶಿಸುತ್ತಿದ್ದಂತೆಯೇ ರಾಯರ ಬೃಹತ್​ ಮೂರ್ತಿ ಕಾಣುತ್ತಿತ್ತು. ಆದರೆ ಆ ಮೂರ್ತಿಯನ್ನು ತೆರವುಗೊಳಿಸಿ ಕಾರಿಡಾರ್​ ನಿರ್ಮಿಸುವ ಮೂಲಕ ಭಕ್ತರ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ. ಕಾರಿಡಾರ್​ನ ಗೋಡೆಯ ತುಂಬೆಲ್ಲ ರಾಯರ ಕತೆಗಳನ್ನು ಸಾರುವ ವಿವಿಧ ಉಬ್ಬು ಚಿತ್ರಗಳನ್ನು ನಿರ್ಮಿಸಲಾಗಿದೆ. ರಾಯರ ಆರಾಧನಾ ಮಹೋತ್ಸವದ ನಿಮಿತ್ತ ಶ್ರೀಮಠವನ್ನು ಸಂಪೂರ್ಣ ದೀಪಗಳಿಂದ ಅಲಂಕಾರ ಮಾಡಲಾಗಿದೆ.

ಇದನ್ನು ಓದಿ : KL Rahul to Lead India : ಘಾಟಿ ಸುಬ್ರಮಣ್ಯನ ಸನ್ನಿಧಿಗೆ ಹೋದ ಐದೇ ದಿನಗಳಲ್ಲಿ ಕ್ಯಾಪ್ಟನ್, ರಾಹುಲ್‌ಗೆ ಸಿಕ್ತು ದೈವಬಲ

ಇದನ್ನೂ ಓದಿ : Arjun Tendulkar To Play for Goa: ಮುಂಬೈಗೆ ಅರ್ಜುನ್ ತೆಂಡೂಲ್ಕರ್ ಗುಡ್ ಬೈ, ಗೋವಾ ಪರ ಆಡಲಿದ್ದಾರೆ ಸಚಿನ್ ಪುತ್ರ

raghavendra swamy aradhana mahotsava in mantralaya

Comments are closed.