MI Cape Town : ಎಂಐ ಕೇಪ್ ಟೌನ್ ತಂಡಕ್ಕೆ ಟಿ20 ದಿಗ್ಗಜರ ಎಂಟ್ರಿ, ಮುಂಬೈ ತಂಡ ಸೇರಿದವರು ಯಾರ್ಯಾರು ಗೊತ್ತಾ?

ಮುಂಬೈ: (MI Cape Town) ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಆಡಲಿರುವ ಎಂಐ ಕೇಪ್ ಟೌನ್ ಫ್ರಾಂಚೈಸಿ ತನ್ನ ತಂಡಕ್ಕೆ ಟಿ20 ಕ್ರಿಕೆಟ್’ನ ಸ್ಟಾರ್ ಆಟಗಾರರನ್ನೇ ಸೇರಿಸಿಕೊಂಡಿದೆ. ಐಪಿಎಲ್’ನ ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್’ನಲ್ಲಿ ಕೇಪ್ ಟೌನ್ ಫ್ರಾಂಚೈಸಿಯನ್ನು ತನ್ನದಾಗಿಸಿಕೊಂಡಿದೆ. ತಂಡಕ್ಕೆ ಎಂಐ ಕೇಪ್ ಟೌನ್ ಎಂದು ಹೆಸರಿಟ್ಟಿದೆ. ಬುಧವಾರವಷ್ಟೇ ನೂತನ ತಂಡದ ಹೆಸರನ್ನು ಅನಾವರಣಗೊಳಿಸಿದ್ದ ಫ್ರಾಂಚೈಸಿ ಈಗ ತಂಡದ ಪರ ಆಡಲಿರುವ ಆಟಗಾರರ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಿದೆ.

ಐಪಿಎಲ್’ನಲ್ಲಿ ಗುಜರಾತ್ ಟೈಟನ್ಸ್ ಪರ ಆಡುವ ಅಫ್ಘಾನಿಸ್ತಾನ ಆಟಗಾರ ರಶೀದ್ ಖಾನ್, ಪಂಜಾಬ್ ಕಿಂಗ್ಸ್ ಪರ ಆಡುವ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಗಿಸೊ ರಬಾಡ, ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸುವ ಇಂಗ್ಲೆಂಡ್’ನ ಸ್ಫೋಟಕ ಬ್ಯಾಟ್ಸ್’ಮನ್ ಲಿಯಾಮ್ ಲಿವಿಂಗ್’ಸ್ಟನ್, ಚೆನ್ನೈ ಸೂಪರ್ ಕಿಂಗ್ಸ್ ಆಲ್ರೌಂಡರ್ ಇಂಗ್ಲೆಂಡ್’ನ ಸ್ಯಾಮ್ ಕರನ್ ಮತ್ತು ಮುಂಬೈ ಇಂಡಿಯನ್ಸ್ ತಂಡವನ್ನೇ ಪ್ರತಿನಿಧಿಸುವ ದಕ್ಷಿಣ ಆಫ್ರಿಕಾದ ಯುವ ಬ್ಯಾಟ್ಸ್’ಮನ್ ಡೆವಾಲ್ಡ್ ಬ್ರೆವಿಸ್ ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್’ನಲ್ಲಿ ಎಂಐ ಕೇಪ್ ಟೌನ್ ತಂಡದ ಪರ ಆಡಲಿದ್ದಾರೆ.

ಎಂಐ ಕೇಪ್ ಟೌನ್ ತಂಡದ ಪರ ಆಡಲಿರುವ ಆಟಗಾರರ ಮೊದಲ ಪಟ್ಟಿ
ರಶೀದ್ ಖಾನ್ (ಅಫ್ಘಾನಿಸ್ತಾನ)
ಕಗಿಸೊ ರಬಾಡ (ದಕ್ಷಿಣ ಆಫ್ರಿಕಾ)
ಲಿಯಾಮ್ ಲಿವಿಂಗ್’ಸ್ಟನ್ (ಇಂಗ್ಲೆಂಡ್)
ಸ್ಯಾಮ್ ಕರನ್ (ಇಂಗ್ಲೆಂಡ್)
ಡೆವಾಲ್ಡ್ ಬ್ರೆವಿಸ್ (ದಕ್ಷಿಣ ಆಫ್ರಿಕಾ)

ಕ್ರಿಕೆಟ್ ಸೌತ್ ಆಫ್ರಿಕಾ ಟಿ20 ಲೀಗ್ ಮುಂದಿನ ವರ್ಷದ ಜನವರಿ ತಿಂಗಳಲ್ಲಿ ನಡೆಯಲಿದ್ದು, ಐಪಿಎಲ್’ನ ಆರು ಫ್ರಾಂಚೈಸಿಗಳು ತಂಡಗಳನ್ನು ಖರೀದಿಸಿವೆ. ಜೊಹಾನ್ಸ್’ಬರ್ಗ್ ಫ್ರಾಂಚೈಸಿಯನ್ನು ಚೆನ್ನೈ ಸೂಪರ್ ಕಿಂಗ್ಸ್, ಕೇಪ್ ಟೌನ್ ತಂಡವನ್ನು ಮುಂಬೈ ಇಂಡಿಯನ್ಸ್, ಪೋರ್ಟ್ ಎಲಿಜಬೆತ್ ತಂಡದ ಫ್ರಾಂಚೈಸಿಯನ್ನು ಸನ್’ರೈಸರ್ಸ್ ಹೈದರಾಬಾದ್, ಡರ್ಬನ್ ಫ್ರಾಂಚೈಸಿಯನ್ನು ಲಕ್ನೋ ಸೂಪರ್ ಜೈಂಟ್ಸ್, ಪಾರ್ಲ್ ತಂಡ ಫ್ರಾಂಚೈಸಿಯನ್ನು ರಾಜಸ್ಥಾನ್ ರಾಯಲ್ಸ್ ಮತ್ತು ಪ್ರಿಟೋರಿಯಾ ಫ್ರಾಂಚೈಸಿಯನ್ನು ಡೆಲ್ಲಿ ಕ್ಯಾಪಿಟಲ್ಸ್ ತಂಡದದ ಮಾಲೀಕರು ಖರೀದಿ ಮಾಡಿದ್ದಾರೆ.

ದಕ್ಷಿಣ ಆಫ್ರಿಕಾ ಟಿ20 ಲೀಗ್’ನಲ್ಲಿ ಕೇಪ್ ಟೌನ್ ಫ್ರಾಂಚೈಸಿಯನ್ನು ಖರೀಸಿದಿರುವ ಮುಂಬೈ ಇಂಡಿಯನ್ಸ್, ಯುನೈಟೆಡ್ ಅರಬ್ ಎಮಿರೇಟ್ಸ್ ಕ್ರಿಕೆಟ್ ಸಂಸ್ಥೆ ನಡೆಸಲಿರುವ ಯುಎಇ ಇಂಟರ್’ನ್ಯಾಷನಲ್ ಟಿ20 ಲೀಗ್’ನಲ್ಲೂ ಫ್ರಾಂಚೈಸಿಯನ್ನು ಖರೀದಿಸಿದ್ದು, ತಂಡಕ್ಕೆ ಎಂಐ ಎಮಿರೇಟ್ಸ್ (MI Emirates) ಎಂದು ಹೆಸರಿಟ್ಟಿದೆ.

ಇದನ್ನೂ ಓದಿ : Sachin Raksha Bandhan Gift : ರಕ್ಷಾ ಬಂಧನದ ದಿನ ಅಕ್ಕನ ಕೊಟ್ಟ ಅಮೂಲ್ಯ ಉಡುಗೊರೆಯನ್ನು ನೆನಪಿಸಿಕೊಂಡ ಸಚಿನ್ ತೆಂಡೂಲ್ಕರ್

ಇದನ್ನೂ ಓದಿ : KL Rahul to Lead India : ಘಾಟಿ ಸುಬ್ರಮಣ್ಯನ ಸನ್ನಿಧಿಗೆ ಹೋದ ಐದೇ ದಿನಗಳಲ್ಲಿ ಕ್ಯಾಪ್ಟನ್, ರಾಹುಲ್‌ಗೆ ಸಿಕ್ತು ದೈವಬಲ

Entry of T20 greats to MI Cape Town team, do you know who is part of Mumbai team

Comments are closed.