Neglect of district administration : ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತದ ನಿರ್ಲಕ್ಷ್ಯ : ಶಾಲೆ ರಜೆ ಬಗ್ಗೆ ಮೊದಲೇ ಸಿಗದ ಸ್ಪಷ್ಟನೆ, ಗೊಂದಲದಲ್ಲಿ ಪೋಷಕರು

ಉಡುಪಿ/ ಮಂಗಳೂರು : Neglect of district administration : ಕಳೆದ ಎರಡು ದಿನಗಳಿಂದ ರಣ ಭೀಕರವಾಗಿ ಸುರಿಯುತ್ತಿರುವ ಮಳೆಯು ಕರಾವಳಿ ಜಿಲ್ಲೆಗಳಾದ ಉಡುಪಿ ಹಾಗೂ ದಕ್ಷಿಣ ಕನ್ನಡವನ್ನು ನಲುಗಿಸಿದೆ. ಮಂಗಳವಾರ ಸಂಜೆಯಿಂದ ಆರಂಭವಾದ ಮಳೆಯು ಇನ್ನೂ ಮುಂದುವರಿದಿದ್ದು ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಹಲವು ಕಡೆಗಳಲ್ಲಿ ರಸ್ತೆ ಸಂಪೂರ್ಣ ಜಲಾವೃತಗೊಂಡು ಸಂಚಾರ ದುಸ್ಥರವಾಗಿದ್ದರೆ ಇನ್ನೂ ಕೆಲವೆಡೆಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮುಂಜಾಗ್ರತಾ ಕ್ರಮವಾಗಿ ಹವಾಮಾನ ಇಲಾಖೆಯು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಆರೆಂಜ್​ ಅಲರ್ಟ್​ ಘೋಷಣೆ ಮಾಡಿದೆ.


ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳೂರು, ಸುಳ್ಯ, ಪುತ್ತೂರು , ಬಂಟ್ವಾಳ ಹಾಗೂ ಬೆಳ್ತಂಗಡಿ ತಾಲೂಕುಗಳಲ್ಲಿ ನಿನ್ನೆ ರಾತ್ರಿಯಿಂದ ಒಂದೇ ಸಮನೆ ಮಳೆ ಸುರಿಯುತ್ತಿದೆ. ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬ್ಲಾಕ್​ ಆಗಿದ್ದರೆ ಇತ್ತ ಮಣ್ಣು ಕುಸಿದು ರೈಲು ಸಂಚಾರ ಕೂಡ ಸ್ಥಗಿತಗೊಂಡಿದೆ.


ಉಡುಪಿ ಜಿಲ್ಲೆಯ ಪರಿಸ್ಥಿತಿ ಕೂಡ ಇದಕ್ಕೆ ಹೊರತಾಗಿಲ್ಲ. ಮಂಗಳವಾರ ರಾತ್ರಿಯಿಂದ ಬ್ರಹ್ಮಾವರ, ಮರವಂತೆ, ಕುಂದಾಪುರ, ಬೈಂದೂರು, ಸಾಲಿಗ್ರಾಮ, ಶಿರೂರು ಸೇರಿದಂತೆ ಹಲವಡೆಗಳಲ್ಲಿ ವರುಣನ ಆರ್ಭಟ ಮಿತಿಮೀರಿದೆ. ಭಾರೀ ಮಳೆಯಿಂದಾಗಿ ಬಹುತೇಕ ಕಡೆಗಳಲ್ಲಿ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿವೆ. ಉಡುಪಿ ಜಿಲ್ಲೆಯಲ್ಲಿ 200 ಮಿ.ಮೀಟರ್​ವರೆಗೆ ಮಳೆ ಸುರಿಯುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಹವಾಮಾನ ಇಲಾಖೆ ಆರೆಂಜ್​ ಅಲರ್ಟ್​ ಘೋಷಣೆಯಾಗಿದೆ.


ಮಳೆಗಾಲ ಆರಂಭಗೊಂಡು ಸರಿಯಾಗಿ ಒಂದು ತಿಂಗಳು ಪೂರ್ಣಗೊಂಡಿಲ್ಲ. ಅಷ್ಟರಲ್ಲಾಗಲೇ ಎರಡೇ ದಿನದ ಮಳೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡದ ಸ್ಥಿತಿ ಅಯೋಮಯವಾಗಿದ್ದು ಕರಾವಳಿ ಜಿಲ್ಲೆಗಳ ಜಿಲ್ಲಾಡಳಿತ ನಿರ್ಲಕ್ಷ್ಯಕ್ಕೆ ಹಿಡಿದ ಕೈ ಗನ್ನಡಿ ಎಂಬಂತಿದೆ. ಎರಡೂ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿರುವುದರ ಬಗ್ಗೆ ಹವಾಮಾನ ಇಲಾಖೆ ಮೊದಲೇ ಘೋಷಣೆ ಮಾಡಿತ್ತು. ಆರೆಂಜ್​ ಅಲರ್ಟ್​ ಕೂಡ ನೀಡಲಾಗಿತ್ತು. ಆದರೂ ಸಹ ಉಡುಪಿ ಹಾಗೂ ದಕ್ಷಿಣ ಕನ್ನಡಗಳಲ್ಲಿ ಮೊದಲೇ ಶಾಲೆಗೆ ರಜೆ ಘೋಷಣೆ ಮಾಡಿರಲಿಲ್ಲ. ಮಕ್ಕಳು ಶಾಲೆಗೆ ತೆರಳಿದ ಬಳಿಕ ರಜೆ ಘೋಷಣೆ ಮಾಡಲಾಗಿದ್ದು ಶಿಕ್ಷಕರು ಮಕ್ಕಳನ್ನು ಶಾಲೆಯಲ್ಲಿ ಇರಿಸಿಕೊಳ್ಳಬೇಕೆ ಅಥವಾ ಮನೆಗೆ ಕಳುಹಿಸಬೇಕೆ ಎಂಬ ಗೊಂದಲದಲ್ಲಿದ್ದಾರೆ.


ನಾಳೆ ಶಾಲೆಗೆ ರಜೆ ನೀಡುವ ಬಗ್ಗೆ ಉಭಯ ಜಿಲ್ಲೆಗಳ ಜಿಲ್ಲಾಡಳಿತ ಯಾವುದೇ ಸ್ಪಷ್ಟನೆ ನೀಡಿಲ್ಲ. ರಸ್ತೆಗಳು ನದಿಯಂತಾಗಿರುವ ಹಿನ್ನೆಲೆಯಲ್ಲಿ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೆ ಮುಂದೆ ನೋಡುತ್ತಿದ್ದಾರೆ. ಖಾಸಗಿ ಶಾಲೆಗಳು ಬಹುತೇಕ ರಜೆಯನ್ನು ಘೋಷಣೆ ಮಾಡಿವೆ. ಆದರೆ ಸರ್ಕಾರಿ ಶಾಲೆಗಳಲ್ಲಿ ಸೂಕ್ತ ಆದೇಶ ಕೊರತೆಯಿಂದಾಗಿ ಮಕ್ಕಳು ಹಾಗೂ ಶಿಕ್ಷಕರು ಮಳೆಯಿಂದ ಹೈರಾಣಾಗುವಂತಾಗಿದೆ.

ಇದನ್ನು ಓದಿ : Heavy rain : ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಭಾರೀ ಮಳೆ : ಜನ ಜೀವನ ಅಸ್ತವ್ಯಸ್ತ

ಇದನ್ನೂ ಓದಿ : KL Rahul : ಕೆ.ಎಲ್​ ರಾಹುಲ್​ಗೆ ಯಶಸ್ವಿ ಶಸ್ತ್ರಚಿಕಿತ್ಸೆ : ಶೀಘ್ರ ಚೇತರಿಕೆಯ ಹಾದಿಯಲ್ಲಿದ್ದೇನೆಂದ ಕನ್ನಡಿಗ

Rain in Dakshina Kannada, Udupi: Neglect of district administration

Comments are closed.