Dal Paratha : ಮಕ್ಕಳ ಟಿಫಿನ್‌ ಬಾಕ್ಸ್‌ ಗೆ ಮಾಡಿಕೊಡಿ ರುಚಿಯಾದ ದಾಲ್‌ ಪರಾಠ!

ಮಕ್ಕಳ ಟಿಫಿನ್‌ ಬಾಕ್ಸ್‌ (Children’s Tiffin Box) ಅನ್ನುವುದು ಬಹಳ ಮುಖ್ಯವಾದ ದಿನದ ಊಟ. ಅದರಲ್ಲೂ ದಿನಕ್ಕೊಂದು ತಿಂಡಿ ಬಯಸುವ ಮಕ್ಕಳಿಗೆಂದು ತಯಾರಿಸುವ ಟಿಫಿನ್‌ ಒಂದು ದೊಡ್ಡ ತಲೆನೋವು. ದಿನದ ಬಹುಪಾಲು ಸಮಯ ಶಾಲೆಯಲ್ಲೇ ಕಳೆಯುವ ಅವರಿಗೆ ಅತಿ ಹೆಚ್ಚಿನ ಶಕ್ತಿ ನೀಡುವ ಆಹಾರದ ಅವಶ್ಯಕತೆ ಇದೆ(Dal Paratha) . ಅವರ ಟಿಫಿನ್‌ ಬಾಕ್ಸ್‌ನಲ್ಲಿ ಸಂತುಲಿತ ಪೂರ್ಣಾಹಾರ ಇರುವುದು ಬಹಳ ಮುಖ್ಯ. ದಾಲ್‌ ಅಥವಾ ಬೇಳೆಯಲ್ಲಿ ಪ್ರೋಟಿನ್‌ ಮತ್ತು ವಿಟಮಿನ್‌ಗಳು ಇರುವುದರಿಂದ ಮಕ್ಕಳ ಬೆಳವಣಿಗೆಗೆ ಮುಖ್ಯವಾಗಿದೆ.

ದಾಲ್‌ ಪರಾಠ ಮಾಡುವುದು ಹೇಗೆ?

ಬೇಕಾಗುವ ಪದಾರ್ಥಗಳು :

ಕಡಲೆ ಬೇಳೆ ಅಥವಾ ತೊಗರಿ ಬೇಳೆ – 1 ಕಪ್‌
ಗೋಧಿ ಹಿಟ್ಟು
ಜೀರಿಗೆ ಪುಡಿ–ಅರ್ಧ ಚಮಚ
ಗರಂ ಮಸಾಲಾ ಪುಡಿ –ಅರ್ಧ ಚಮಚ
ಮೆಣಸಿನ ಪುಡಿ– ಕಾಲು ಚಮಚ
ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು– ಎರಡು ಚಮಚ
ಉಪ್ಪು – ಕಾಲು ಚಮಚ
ಅಡುಗೆ ಎಣ್ಣೆ

ತಯಾರಿಸುವ ವಿಧಾನ :

  • ಒಂದು ಕಪ್‌ ಬೇಳೆ ತೆಗೆದುಕೊಂಡು ಎರಡು ಗಂಟೆಗಳ ಕಾಲ ನೀರಿನಲ್ಲಿ ನೆನೆಯಲು ಹಾಕಿ. ನಂತರ ಕುಕ್ಕರ್‌ನಲ್ಲಿ 2 ಸೀಟಿ ಹಾಕಿಸಿ.
  • ಮಿಕ್ಸರ್ ಜಾರ್‌ಗೆ ಬೇಳೆ ಹಾಕಿ ನುಣ್ಣಗೆ ಗಟ್ಟಿಯಾಗಿ ರುಬ್ಬಿಕೊಳ್ಳಿ.
  • ಅದಕ್ಕೆ ಜೀರಿಗೆ ಪುಡಿ, ಗರಂ ಮಸಾಲಾ ಪುಡಿ, ಮೆಣಸಿನ ಪುಡಿ, ಉಪ್ಪು, ಮತ್ತು ಕೊತ್ತಂಬರಿ ಸೊಪ್ಪು ಸೇರಿಸಿ ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ.
  • ಆ ಮಿಶ್ರಣಕ್ಕೆ ಗೋಧಿ ಹಿಟ್ಟು ಸೇರಿಸ ಚಪಾತಿ ಹಿಟ್ಟಿನ ತರಹ ನಾದಿಕೊಳ್ಳಿ. ಒಂದು ಪ್ಲೇಟ್‌ ಮುಚ್ಚಿ ಅರ್ಧ ಗಂಟೆ ಬಿಡಿ.
  • ನಂತರ ಚಿಕ್ಕ ಉಂಡೆಗಳನ್ನು ಮಾಡಿಕೊಂಡು ತ್ರಿಕೋನಾಕೃತಿಯಲ್ಲಿ ಮಡಿಚಿ ಲಟ್ಟಿಸಿ.
  • ಎಣ್ಣೆ ಸವರಿ ಎರಡೂ ಕಡೆ ಚೆನ್ನಾಗಿ ಬೇಯಿಸಿ.

ಯಾವುದಾದರೂ ಚಟ್ನಿಯ ಜೊತೆ ಮಕ್ಕಳ ಟಿಫಿನ್‌ ಬಾಕ್ಸ್‌ ಪ್ಯಾಕ್‌ ಮಾಡಿ.

ಇದನ್ನೂ ಓದಿ : Flax Seed : ಅಗಾಧ ಪೋಷಕಾಂಶ ಹೊಂದಿರುವ ಅಗಸೆ ಬೀಜದಿಂದ ಏನೆಲ್ಲಾ ತಯಾರಿಸಬಹುದು ಗೊತ್ತಾ?

ಇದನ್ನೂ ಓದಿ : Protect Liver : ನಿಮ್ಮ ಲಿವರ್‌ ರಕ್ಷಿಸಿಕೊಳ್ಳಿ! ಲಿವರ್‌ ಅನ್ನು ರಕ್ಷಿಸಬಲ್ಲ ಆಹಾರಗಳು ಯಾವುದು ಗೊತ್ತಾ?

(Dal Paratha make this delicious recipe for your kid’s tiffin box)

Comments are closed.