Rescue of the bull : ಮೋರಿಯಲ್ಲಿ ಬಿದ್ದು ಒದ್ದಾಡಿದ ಹೋರಿಗೆ ಪುರ್ನಜನ್ಮ : ಮೈನವಿರೇಳಿಸುವಂತಿದೆ ರಕ್ಷಣಾ ಕಾರ್ಯಾಚರಣೆ

ವಿಜಯಪುರ : Rescue of the bull: ಮನುಷ್ಯನಿಗೆ ಏನಾದರೂ ತೊಂದರೆಯಾದ್ರೆ ತನ್ನವರ ಬಳಿ ಹೇಳಿಕೊಳ್ಳಬಹುದು. ಆದ್ರೆ ಮೂಕಪ್ರಾಣಿಗಳಿಗೆ ಸಂಚಕಾರ ಎದುರಾದಾಗ ಯಾರ ಬಳಿಯು ಹೇಳಿಕೊಳ್ಳುವುದಕ್ಕೆ ಅವುಗಳಿಗೆ ಸಾಧ್ಯವಾಗೋದಿಲ್ಲ. ಇದೇ ರೀತಿ ಗೂಳಿಯೊಂದು ದೊಡ್ಡದಾದ ಮೋರಿಯೊಳಗೆ ಸಿಲುಕಿ ಪರದಾಡಿದ ಘಟನೆ ವಿಜಯಪುರ ನಗರದ ಎಸ್.ಆರ್.ಕಾಲೋನಿಯಲ್ಲಿ ನಡೆದಿದೆ. ಒಂದು ಗಂಟೆಗೂ ಹೆಚ್ಚು ಕಾಲ ಪ್ರಯತ್ನಿಸಿ ಯಶಸ್ವಿಯಾಗಿ ಮೋರಿಯೊಳಗೆ ಸಿಲುಕಿದ್ದ ಈ ಜಾನುವಾರು ರಕ್ಷಣಾ ಕಾರ್ಯಚರಣೆಯನ್ನು ನಡೆಸಲಾಯಿತು.

ನಗರದಲ್ಲಿ ಬಾಯ್ದೆರೆದ ಸ್ಥಿತಿಯಲ್ಲಿ ಇದ್ದ ಈ‌ ಮೋರಿಗೆ ಆಯತಪ್ಪಿ ಗೂಳಿ ಬಿದ್ದಿತ್ತು. ಮೋರಿಯೊಳಗೆ ಸಿಲುಕಿಕೊಂಡು ಅಲುಗಾಡದ ಸ್ಥಿತಿಯಲ್ಲಿತ್ತು. ಈ ವಿಚಾರ ಸ್ಥಳೀಯರ ಗಮನಕ್ಕೆ ಬಂದಿತ್ತು. ವಿಚಾರ ಗೊತ್ತಾಗುತ್ತಿದ್ದಂತೆ ಸ್ಥಳೀಯರು, ಗೋ ರಕ್ಷಣಾ ಯುವಕರು, ಮಹಾನಗರ ಪಾಲಿಕೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಅಗ್ನಿಶಾಮಕ ದಳದ ಸಿಬ್ಬಂದಿ ಹೋರಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸ್ಥಳೀಯ ಸಮಾಜಸೇವಕ ಪ್ರೇಮಾನಂದ ಬಿರಾದಾರ ನೇತ್ರತ್ವದಲ್ಲಿ ಈ ರೆಸ್ಕ್ಯೂ ಅಪರೇಶನ್ ಮಾಡಲಾಯಿತು.

ಈ ರಕ್ಷಣಾ ಕಾರ್ಯಾಚರಣೆಗೆ ಜೆ.ಸಿ.ಬಿ ಯಂತ್ರ ಹಾಗೂ ಅಗ್ನಿಶಾಮಕ ದಳದ ವಾಹನಗಳನ್ನು ಬಳಕೆ ಮಾಡಲಾಯಿತು. ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಹರಸಾಹಸ ಪಟ್ಟು ಹೋರಿಯನ್ನು ಮೇಲಕೆತ್ತಲಾಯಿತು. ಬೃಹದಾದ ರೋಪ್ ಒಂದನ್ನು ಹೋರಿಯ ಹೊಟ್ಟೆ ಭಾಗಕ್ಕೆ ಕಟ್ಟಿ ಯಶಸ್ವಿಯಾಗಿ ಈ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು. ಹೋರಿ ಮೇಲಕ್ಕೆ ಬರುತ್ತಿದಂತೆ ಬದುಕಿದೆಯಾ ಬಡಜೀವವೆ ಎಂದು ನೆಮ್ಮದಿಯ ನಿಟ್ಟುಸಿರು ಬಿಟ್ಟಿತು.

ಜಾನುವಾರುಗಳನ್ನು ಈ ರೀತಿ ಬೀದಿಗೆ ಬಿಡುವಂತದ್ದು ನಿಜವಾಗಿಯೂ ತಪ್ಪು. ಬಾಯಿ ಬಾರದ ಮೂಕಪ್ರಾಣಿಗಳಿಗೆ ಎಲ್ಲಿ ಹೊಂಡ, ಗುಂಡಿ, ಮೋರಿ, ಅಪಾಯ ಇದೆ ಎಂಬುದು ಅಷ್ಡೊಂದು ತಿಳಿಯುವುದಿಲ್ಲ. ಆದ್ರೆ ಆಹಾರವನ್ನು ಅರಸಿ ಹೋಗುವ ಸಂದರ್ಭ ಈ ರೀತಿಯ ಅವಘಡಗಳು ಸಂಭವಿಸುತ್ತದೆ. ಹೀಗಾಗಿ ಜಾನುವಾರುಗಳನ್ನು ಈ ರೀತಿ ಬೀದಿಗೆ ಬಿಡುವವರ ವಿರುದ್ಧ ಕ್ರಮ ಜರುಗಿಸಿ ಎಂದು ನೆಟ್ಟಿಗರು‌‌ ಸೋಷಿಯಲ್ ಮೀಡಿಯಾದಲ್ಲಿ ಕಮೆಂಟ್ ಶುರು ಮಾಡಿದ್ದಾರೆ.

ಇದನ್ನು ಓದಿ : Arvind Kejriwal : ಅಗ್ನಿ ಪರೀಕ್ಷೆಗಿಳಿದ ಅರವಿಂದ್ ಕೇಜ್ರಿವಾಲ್

ಇದನ್ನೂ ಓದಿ : Sudeep Birthday Shiva Rajkumar : ಸುದೀಪ್ ಬರ್ತಡೇಗೆ ಕಲರ್ ಫುಲ್ ಕಾಮನ್ ಡಿಪಿ: ಪೋಟೋ ಜೊತೆ ವೈರಲ್ ಆಯ್ತು ಶಿವಣ್ಣ ಸ್ಪೆಶಲ್ ವಿಶ್

Rescue of the bull lying in the drain

Comments are closed.