Maruga Mutt : ಡಾ.ಶಿವಮೂರ್ತಿ ಮುರುಘಾ ಶರಣರಿಗೆ ಮತ್ತಷ್ಟು ಸಂಕಷ್ಟ : ಬಂಧನ ಭೀತಿಯಲ್ಲಿ ಸ್ವಾಮೀಜಿ

ಚಿತ್ರದುರ್ಗ : Maruga Mutt : ಕೋಟೆ ನಾಡು ಚಿತ್ರದುರ್ಗದ ಮುರುಘಾ ಮಠದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಎದುರಾಗಿರುವ ಪೋಸ್ಕೋ ಪ್ರಕರಣವು ದಿನಕ್ಕೊಂದು ತಿರುವುಗಳನ್ನು ಪಡೆದುಕೊಳ್ತಿದೆ. ತಮ್ಮ ಮೇಲೆ ಮುರುಘಾ ಶರಣರು ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಸಂತ್ರಸ್ತೆ ಬಾಲಕಿಯರು ನೀಡಿರುವ ಹೇಳಿಕೆಯು ಶಿವಮೂರ್ತಿ ಶರಣರಿಗೆ ದೊಡ್ಡ ಕಂಟಕಪ್ರಾಯವಾಗುವ ಎಲ್ಲಾ ಲಕ್ಷಣಗಳು ದಟ್ಟವಾಗಿದೆ. ಪ್ರಕರಣ ಸಂಬಂಧ ತನಿಖೆಗಾಗಿ ಇಂದು ಪೊಲೀಸರು ಮುರುಘಾ ಮಠಕ್ಕೆ ಆಗಮಿಸುವ ನಿರೀಕ್ಷೆಯಿದೆ. ಪೋಕ್ಸೋ ಪ್ರಕರಣದ ಅಡಿಯಲ್ಲಿ ಸ್ವಾಮೀಜಿಗಳನ್ನು ತನಿಖೆಗೆ ಒಳಪಡಿಸುವ ಸಾಧ್ಯತೆಯಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಠದಲ್ಲಿ ವಿಚಾರಣೆ ಮಾಡುವ ವೇಳೆಯಲ್ಲಿ ಮುರುಘಾ ಶ್ರೀಗಳ ಮೇಲೆ ಕಿಂಚಿತ್ತು ಅನುಮಾನ ಉಂಟಾದರೂ ಸಹ ಹೆಚ್ಚಿನ ವಿಚಾರಣೆಗೆಂದು ಪೊಲೀಸರು ತಮ್ಮ ವಶಕ್ಕೆ ಪಡೆಯುವ ಸಾಧ್ಯತೆಯಿದೆ. ಬಾಲಕಿಯರು ಶ್ರೀಗಳ ಮೇಲೆ ಹಾಕಿರುವ ಆರೋಪ ಪ್ರಾಥಮಿಕ ತನಿಖೆಯಲ್ಲಿ ಸಾಬೀತಾದಲ್ಲಿ ಇಂದು ಸಂಜೆ ವೇಳೆ ಡಾ. ಶಿವಮೂರ್ತಿ ಮುರುಘಾ ಶರಣರನ್ನು ಪೊಲೀಸರು ಬಂಧಿಸುವ ಸಾಧ್ಯತೆ ದಟ್ಟವಾಗಿದೆ.

ಅಕ್ಕ ಮಹಾದೇವಿ ವಸತಿ ನಿಲಯದಲ್ಲಿದ್ದ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪದ ಅಡಿಯಲ್ಲಿ ಡಾ. ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಪೋಕ್ಸೋ ಕಾಯ್ದೆಯ ಅಡಿಯಲ್ಲಿ ಮೈಸೂರಿನ ನಜರಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇತ್ತ ಲೈಂಗಿಕ ಕಿರುಕುಳ ನೀಡಿದ ಅರೋಪದಡಿ ಮುರುಘಾ ಮಠದ ಆಡಳಿತಾಧಿಕಾರಿ ಎಸ್.ಕೆ.ಬಸವರಾಜನ್‌ ಹಾಗೂ ಅವರ ಪತ್ನಿ ಸೌಭಾಗ್ಯ ಬಸವರಾಜನ್ ಅವರ ವಿರುದ್ಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನು ಓದಿ : Sudeep Birthday Shiva Rajkumar : ಸುದೀಪ್ ಬರ್ತಡೇಗೆ ಕಲರ್ ಫುಲ್ ಕಾಮನ್ ಡಿಪಿ: ಪೋಟೋ ಜೊತೆ ವೈರಲ್ ಆಯ್ತು ಶಿವಣ್ಣ ಸ್ಪೆಶಲ್ ವಿಶ್

ಇದನ್ನೂ ಓದಿ : India Vs Pakistan Asia Cup 2022: ಭಾರತದ ಧ್ವಜ ಹಿಡಿಯಲು ನಿರಾಕರಿಸಿದ್ರಾ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ?

ಇದನ್ನೂ ಓದಿ : Rescue of the bull : ಮೋರಿಯಲ್ಲಿ ಬಿದ್ದು ಒದ್ದಾಡಿದ ಹೋರಿಗೆ ಪುರ್ನಜನ್ಮ : ಮೈನವಿರೇಳಿಸುವಂತಿದೆ ರಕ್ಷಣಾ ಕಾರ್ಯಾಚರಣೆ

The Swamiji of Maruga Mutt are likely to be arrested today

Comments are closed.