forest department :ಶ್ರೀಗಂಧದ ಮರಗಳೇ ಇವರ ಟಾರ್ಗೆಟ್​: ಅಕ್ರಮದ ಬಗ್ಗೆ ತಿಳಿದಿದ್ದರೂ ಅರಣ್ಯ ಇಲಾಖೆ ಸೈಲೆಂಟ್​

ಧಾರವಾಡ : forest department : ಕಾಡುಗಳ್ಳ ಅಂದ ತಕ್ಷಣ ನಮಗೆ ವೀರಪ್ಪನ್ ಹೆಸರು ನೆನಪಾಗುತ್ತೆ. ಈ ವೀರಪ್ಪನ್ ಸತ್ತು ಹಲವು ವರ್ಷಗಳೆ ಕಳೆದರು ಈ ಕಾಡುಗಳ್ಳರ ಮರಿ ಸಂತಾನಗಳು ಇನ್ನು‌ ನಮ್ಮ ರಾಜ್ಯದಲ್ಲಿದೆ. ಉತ್ತರ ಕರ್ನಾಟಕದ ಸಾಂಸ್ಕೃತಿಕ ರಾಜಧಾನಿ ಧಾರವಾಡಕ್ಕೆ ಶ್ರೀಗಂಧ ಮರಗಳ್ಳರ ಗ್ಯಾಂಗ್ ಎಂಟ್ರಿಯಾಗಿದೆ. ಗ್ಯಾಂಗ್ ಕಟ್ಟಿಕೊಂಡು ಶಸ್ತ್ರಾಸ್ತ್ರ ಹಿಡಿದುಕೊಂಡು ಬರುತ್ತಿರುವ ಈ ಮರಗಳ್ಳರು ಸರ್ಕಾರಿ‌ ಕಚೇರಿ, ಅಧಿಕಾರಿಗಳ ಮನೆ ಆವರಣದಲ್ಲಿರೋ‌ ಶ್ರೀಗಂಧ ಮರಗಳನ್ನು ಟಾರ್ಗೆಟ್ ಮಾಡಿ ಕೊಡಲಿಯೇಟು ನೀಡಿ ಅಕ್ರಮವಾಗಿ ಮರಗಳ ಸಾಗಾಟ ಮಾಡುತ್ತಿದ್ದಾರೆ.

ಕಳೆದ ಆರು ತಿಂಗಳಿನಿಂದ ಧಾರವಾಡ ನಗರದಲ್ಲಿ ಅ್ಯಕ್ಟಿವ್ ಆಗಿರೋ‌ ಈ ಮರಗಳ್ಳರು ಕಳೆದ ಎರಡು ವಾರಗಳಲ್ಲಿ ಶ್ರೀಗಂಧದ ಮರಗಳ ಸರಣಿ ಕಳ್ಳತನ ನಡೆಸಿದ್ದಾರೆ. ದುರಂತ ಅಂದ್ರೆ ಬಹುತೇಕ ಸರ್ಕಾರಿ ನಿವಾಸದಲ್ಲಿರೋ ಮರಗಳೇ ಕಳ್ಳರ ಪಾಲಾಗಿದೆ. ಧಾರವಾಡ ಕೆಸಿಡಿ ಕ್ಯಾಂಪಸ್‌ಗೆ‌ ನುಗ್ಗಿ‌ರುವ ಈ ಮರಕಳ್ಳರು, ಭದ್ರತಾ ಸಿಬ್ಬಂದಿಗೆ ಮಾರಕಾಸ್ತ್ರ ತೋರಿಸಿ ಬೆದರಿಕೆ ಹಾಕಿ, ಭದ್ರತಾ ಸಿಬ್ಬಂದಿಯನ್ನು ಓಡಿಸಿ‌ ಶ್ರೀಗಂಧದ ಮರ ಕಳ್ಳತನ ನಡೆಸಿದ್ದಾರೆ.

ಜಿಲ್ಲಾಧಿಕಾರಿ ಸೇರಿದಂತೆ ಅನೇಕ‌ ಅಧಿಕಾರಿಗಳ ಮನೆ ಹೊರಗಿನ‌ ಮರಗಳೂ ಕಳ್ಳರ ಪಾಲಾಗಿದ್ದರೂ ಸಹ ಅರಣ್ಯ ಇಲಾಖೆ ಮಾತ್ರ ಏನು ನಡೆದೆ ಇಲ್ಲ ಎಂಬಂತೆ ಸುಮ್ಮನೆ ಕುಳಿತಿದೆ. ಅರಣ್ಯ ಇಲಾಖೆ ಅಧಿಕಾರಿಗಳು ಇದನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಮರಗಳ್ಳರ ಅಟ್ಟಹಾಸ ಮುಂದುವರೆದಿದೆ.

ಧಾರವಾಡ ನಗರದ ಅನೇಕ‌ ಹಿರಿಯ ಅಧಿಕಾರಿಗಳ ಮನೆಗಳ ಮುಂದೆ ಶ್ರೀಗಂಧದ ಮರ ಇದೆ. ಆದ್ರೆ ಮನೆ ಹೊರಗೆ ಇರೋ ಶ್ರೀಗಂಧ ಮರಗಳಿಗೇ ಭದ್ರತೆ ಇಲ್ಲದಂತಾಗಿದೆ. ಈ ಮರಗಳ್ಳರು ಮಾರಕಾಸ್ತ್ರ ಹಿಡಿದು ಬರುತ್ತಿರುವುದರಿಂದ ಸಾಮಾನ್ಯ ಜನರಲ್ಲಿ ಭಯ ಶುರುವಾಗಿದೆ. ಇಷ್ಟೆಲ್ಲಾ ಆದರೂ ಸಹ ಅರಣ್ಯ ಇಲಾಖೆ ಸುಮ್ಮನೆ ಕುಳಿತಿದೆ.

ಇಲಾಖೆಗಳ ವತಿಯಿಂದ ವನ ಮಹೋತ್ಸವನ್ನು ವರ್ಷ ವರ್ಷ ಆಚರಿಸಲಾಗುತ್ತದೆ. ಆದ್ರೆ ಹೆಚ್ಚಿನ ಕಡೆಗಳಲ್ಲಿ ಅಂದು ಹೊಂಡ ತೆಗೆದು ನೆಟ್ಟ ಗಿಡಗಳಲ್ಲಿ ಮುಂದಿನ ವರ್ಷದಲ್ಲಿ ಅಲ್ಲಿ ಕೇವಲ ಗುಂಡಿ ಮಾತ್ರ ಉಳಿದಿರುತ್ತದೆ. ಹೀಗಾಗಿ ಅರಣ್ಯ ಇಲಾಖೆ ಹಲವು ವರ್ಷದಿಂದ ಸಮೃದ್ಧವಾಗಿ ಬೆಳೆದು ನಿಂತಿರುವ ಮರಗಳನ್ನು ಉಳಿಸಿಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಇದನ್ನು ಓದಿ : Dhoni Factor in Sri Lanka’s Asia Cup Victory: ನಂಬರ್ 7 ‘D’ ಮೋಡಿ.. ಶ್ರೀಲಂಕಾ ಏಷ್ಯಾ ಕಪ್ ಗೆಲುವಿನ ಹಿಂದೆ ಧೋನಿ ಜರ್ಸಿ ನಂಬರ್ ಮೋಡಿ

ಇದನ್ನೂ ಓದಿ : Asia Cup Final : ಪಾಕಿಸ್ತಾನ ಸೋತ ಬೆನ್ನಲ್ಲೇ ಭಾರತದ ಪತ್ರಕರ್ತನ ಫೋನ್ ಕಸಿದುಕೊಂಡ PCB ಚೀಫ್ ರಮೀಜ್ ರಾಜಾ

Sandalwood trees are their target: Despite knowing about the illegality, the forest department is silent

Comments are closed.