Ganesh festival in Shimoga : ಶಿವಮೊಗ್ಗದಲ್ಲಿ ಗಣೇಶೋತ್ಸವಕ್ಕೂ ಮುನ್ನ ಗಲಭೆ ನಡೆಸಲು ಹುನ್ನಾರ : ಸಂಚಲನ ಮೂಡಿಸಿದ ಅನಾಮಧೇಯ ಪತ್ರ

ಶಿವಮೊಗ್ಗ : Ganesh festival in Shimoga : ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಶಿವಮೊಗ್ಗದಲ್ಲಿ ಉಂಟಾಗಿದ್ದ ಸಾವರ್ಕರ್​ ಫೋಟೋ ವಿವಾದವು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇಡೀ ರಾಜ್ಯವೇ ಶಿವಮೊಗ್ಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ್ದ ಈ ಸಾವರ್ಕರ್​ ಫೋಟೋ ವಿವಾದವು ಈಗಷ್ಟೇ ತಣ್ಣಗಾಗಿದೆ. ಆದರೆ ಇದರ ಬೆನ್ನಲ್ಲೇ ಶಿವಮೊಗ್ಗದಲ್ಲಿ ಮತ್ತೊಂದು ಗಲಭೆ ಸೃಷ್ಟಿಸಲು ಪ್ಲಾನ್​ ನಡೆದಿದೆಯಾ ಎಂಬ ಅನುಮಾನ ಮೂಡಿಸಿದೆ.


ಶಿವಮೊಗ್ಗದ ಗಾಂಧಿ ಬಜಾರ್​​ನಲ್ಲಿರುವ ದೇವಸ್ಥಾನವೊಂದರಲ್ಲಿ ಅನಾಮಿಕ ಪತ್ರವೊಂದು ದೊರಕಿದ್ದು ಇದರಲ್ಲಿ ಗಣೇಶೋತ್ಸವಕ್ಕೂ ಮುನ್ನ ಶಿವಮೊಗ್ಗದಲ್ಲಿ ಮತ್ತೊಂದು ಸಂಘರ್ಷವನ್ನು ನಡೆಸಲು ಹುನ್ನಾರ ನಡೆದಿರುವ ಬಗ್ಗೆ ಸಾಕ್ಷ್ಯ ದೊರಕಿದೆ. ಪತ್ರ ದೊರಕಿದ ತಕ್ಷಣವೇ ಅಲರ್ಟ್ ಆಗಿರುವ ಶಿವಮೊಗ್ಗ ಕೋಟೆ ಠಾಣೆಯ ಪೊಲೀಸರು ಪ್ರಕರಣ ದಾಖಲಸಿಕೊಂಡಿದ್ದು ತನಿಖೆಯನ್ನು ಚುರುಕುಗೊಳಿಸಿದ್ದಾರೆ .


ಶಿವಮೊಗ್ಗದ ಗಾಂಧಿ ಬಜಾರ್​ನಲ್ಲಿರುವ ಗಂಗಾ ಪರಮೇಶ್ವರ ದೇವಸ್ಥಾನದ ಬಳಿ ಈ ಪತ್ರವನ್ನು ಇಡಲಾಗಿದೆ. ದೇವಾಲಯದ ಪಕ್ಕದಲ್ಲಿಯೇ ಅಂಗಡಿ ನಡೆಸುತ್ತಿರುವ ವ್ಯಕ್ತಿಯೊಬ್ಬರು ತಮ್ಮ ಅಂಗಡಿ ಬಂದ್​ ಮಾಡಿ ಮನೆಗೆ ತೆರಳುತ್ತಿದ್ದ ಸಂದರ್ಭದಲ್ಲಿ ಈ ಲೆಟರ್​ ಅವರ ಕಣ್ಣಿಗೆ ಬಿದ್ದಿದೆ. ಪೊಲೀಸ್​ ಇಲಾಖೆಗೆ ಈ ಪತ್ರವನ್ನು ಕೊಟ್ಟು ಕೋಮು ಗಲಭೆ ತಪ್ಪಿಸಿ, ಮೂವರ ಪ್ರಾಣ ಉಳಿಸಿ ಎಂದು ಪತ್ರದಲ್ಲಿ ಬರೆಯಲಾಗಿದೆ .


ಈ ಪತ್ರವನ್ನು ಓದಿದ ಬಳಿಕ ಕೂಡಲೇ ಶಿವಮೊಗ್ಗದಲ್ಲಿರುವ ಗಾಂಧಿ ಬಜಾರ್​​​ ಅಂಗಡಿ ಮಾಲೀಕ ಕೋಟೆ ಠಾಣೆಗೆ ತೆರಳಿ ಈ ಪತ್ರವನ್ನು ನೀಡಿದ್ದಾರೆ. ಯಾರೋ ಅಪರಿಚಿತರು ಶಿವಮೊಗ್ಗದಲ್ಲಿ ಮತ್ತೊಂದು ಗಲಭೆ ನಡೆಸಲು ಪ್ಲ್ಯಾನ್​ ಮಾಡಿದ್ದಾರೆ ಎಂದು ಆರೋಪಿಸಿ ದೂರನ್ನು ದಾಖಲಿಸಿದ್ದಾರೆ.


ಈ ಪತ್ರದಲ್ಲಿ ಅಪರಿಚಿತನೊಬ್ಬ ಗಲಭೆಯ ಬಗ್ಗೆ ಮಾಹಿತಿ ನೀಡಿದ್ದಾರೆ. ಗಾಂಧಿ ಬಜಾರ್ ಬಳಿ ಮೂವರು ಗಾಂಜಾ ಸೇದುತ್ತಾ ಮಾತನಾಡಿಕೊಳ್ಳುತ್ತಿದ್ದರು. ಮೂವರು ಮಾತನಾಡಿಕೊಂಡಿರುವುದನ್ನು ಕೇಳಿಸಿಕೊಂಡು ನಾನು ಭಯಭೀತನಾಗಿದ್ದೇನೆ. ಮೂವರನ್ನು ಮಂಗಳೂರಿನಿಂದ ಕರೆಸಬೇಕು. ಅವರು ಮೊಬೈಲ್​ ಫೋನ್​ ಬಳಕೆ ಮಾಡಬಾರದು. ಯಾವುದೇ ಕಾರಣಕ್ಕೂ ಸ್ಥಳೀಯರಿಗೆ ಈ ವಿಚಾರ ತಿಳಿಯಬಾರದು. ಗಲಾಟೆ ನಡೆದರೆ ಮಾತ್ರ ಗಣೇಶೋತ್ಸವ ಆಚರಣೆಯನ್ನು ತಡೆಯೋಕೆ ಸಾಧ್ಯ ಎಂದು ಪತ್ರದಲ್ಲಿ ಅಪರಿಚಿತ ಬರೆದಿದ್ದಾನೆ.


ಈ ಪತ್ರದಲ್ಲಿ ಅಪರಿಚಿತ ವ್ಯಕ್ತಿಯು ಮೊಹಮ್ಮದ್​ ಫೈಸಲ್​ ಅಲಿಯಾಸ್​ ಚೆನ್ನು ಎಂಬಾತನ ಹೆಸರನ್ನು ಉಲ್ಲೇಖಿಸಿದ್ದಾನೆ. ಈ ವ್ಯಕ್ತಿಯು ಗಾಂಜಾ ಸೇವನೆ ಮಾಡೋದು ಮಾತ್ರವಲ್ಲದೇ ಗಾಂಜಾ ಮಾರಾಟವನ್ನೂ ಮಾಡುತ್ತಾನೆ. ಆಜಾದ್​ ನಗರದಲ್ಲಿ ಈತ ರೌಡಿಯಂತೆ ವರ್ತಿಸುತ್ತಾನೆಂದು ಪತ್ರದಲ್ಲಿ ಬರೆಯಲಾಗಿದೆ. ಅನಾಮಧೇಯ ವ್ಯಕ್ತಿಯ ಈ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ಶಿವಮೊಗ್ಗ ಪೊಲೀಸರು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಇದನ್ನು ಓದಿ :Yatnal outrage : ನಾನು ಆ ಒಂದು ಕೆಲಸ ಮಾಡಿದ್ದರೆ ಇಂದು ಮುಖ್ಯಮಂತ್ರಿ ಸ್ಥಾನದಲ್ಲಿರುತ್ತಿದ್ದೆ : ಯತ್ನಾಳ್​ ಹೊಸ ಬಾಂಬ್​​

ಇದನ್ನೂ ಓದಿ : satish jarkiholi : ಬಿಜೆಪಿಗರು ಸಾವರ್ಕರ್​ ಫೋಟೋ ಇಟ್ಟರೆ ಗಣೇಶೋತ್ಸವದಲ್ಲಿ ನಾವು ಅಂಬೇಡ್ಕರ್​ ಫೋಟೋ ಇಡ್ತೇವೆ : ಸತೀಶ್​ ಜಾರಕಿಹೊಳಿ

There is a plan to create a ruckus during Ganesh festival in Shimoga

Comments are closed.