Hubli Eidga Maidan : ಹುಬ್ಬಳ್ಳಿ ಈದ್ಗಾ ಮೈದಾನದ ಗಣೇಶ್ ಪೆಂಡಾಲ್ ನಿಂದ ಸಾವರ್ಕರ್ ಫ್ಲೆಕ್ಸ್, ಫೋಟೋ ಎತ್ತಂಗಡಿ

ಹುಬ್ಬಳ್ಳಿ : Hubli Eidga Maidan : ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ವಿಗ್ರಹ ಪ್ರತಿಷ್ಟಾಪನೆಗೆ ಪಾಲಿಕೆ ಅನುಮತಿಯನ್ನು ನೀಡಿತ್ತು. ಆದ್ರೆ ಅನುಮತಿ ನೀಡುವ ಸಂದರ್ಭದಲ್ಲಿ ಗಣೇಶಮೂರ್ತಿ ಹೊರತುಪಡಿಸಿ ಯಾವುದೇ ಮೂರ್ತಿ, ಫೋಟೋ, ಫ್ಲೆಕ್ಸ್ ಅಳವಡಿಸುವಂತಿಲ್ಲ ಎಂಬ ನಿಬಂಧನೆಯನ್ನು ಹಾಕಿತ್ತು. ಆದ್ರೆ ಗಣೇಶ ವಿಗ್ರಹ ಪ್ರತಿಷ್ಟಾಪನೆಯ ಜೊತೆ ಸಾವರ್ಕರ್ ಭಾವಚಿತ್ರವನ್ನು ಆಯೋಜಕರು ಹಾಕಿದ್ದರು. ಆದ್ರೆ ಇದಕ್ಕೆ ಕೆಲ‌ ಮುಸ್ಲಿಂ ಮುಖಂಡರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದಂತೆ ಗಣೇಶ ಪೆಂಡಾಲ್ ನಲ್ಲಿದ್ದ ಸಾವರ್ಕರ್ ಪೋಟೋವನ್ನು ಆಯೋಜಕರು ತೆರವುಗೊಳಿಸಿದ್ದಾರೆ.

ನಿನ್ನೆ ಸಾವರ್ಕರ್ ಫೋಟೋ ಅಳವಡಿಸಿರೋದನ್ನು ಮಹಾಮಂಡಳಿ‌ ಸಮರ್ಥಿಸಿಕೊಂಡಿತ್ತು. ಆದ್ರೆ ಮುಸ್ಲಿಂ ಮುಖಂಡರ ತೀವ್ರ ವಿರೋಧ ವ್ಯಕ್ತಪಡಿಸಿ ಪಾಲಿಕೆ ಆಯುಕ್ತರ ಆದೇಶ ಉಲ್ಲಂಘಿಸಿದವರ ಮೇಲೆ ಕ್ರಮಕ್ಕೆ ಆಗ್ರಹಿಸಿದ್ದರು. ಆದ್ರೆ ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ಆಯೋಜಕರು ಪೆಂಡಾಲ್ ನಿಂದ ದಿಢೀರಾಗಿ ಸಾವರ್ಕರ್ ಫೋಟೋ ಮತ್ತು ಭಾವಚಿತ್ರವನ್ನು ಎತ್ತಂಗಡಿ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅನುಮತಿಗೆ ತೊಂದರೆಯಾಗಬಹುದು ಎಂಬ ಲೆಕ್ಕಾಚಾರದಲ್ಲಿ ಆಯೋಜಕರು ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಪಾಲಿಕೆ ಮೈದಾನದ ಒಳಗೆ ಗಣೇಶಮೂರ್ತಿ ಹೊರತುಪಡಿಸಿ ಯಾವುದೇ ಮೂರ್ತಿ, ಫೋಟೋ, ಫ್ಲೆಕ್ಸ್ ಅಳವಡಿಸುವಂತಿಲ್ಲ ಎಂಬ ನಿಬಂಧನೆಯನ್ನು ಹಾಕಿರೋದು. ಹೀಗಾಗಿ ತೆರವು ಮಾಡಿದ ಸಾವರ್ಕರ್ ಪೋಟೊವನ್ನು ಆಯೋಜಕರು ಈದ್ಗಾ ಮೈದಾನದ ಹೊರಭಾಗದಲ್ಲಿ ಅಳವಡಿಕೆ ಮಾಡಿದ್ದಾರೆ. ಈದ್ಗಾ ಮೈದಾನಕ್ಕೆ ಹೊಂದಿಕೊಂಡಿರುವ ರಸ್ತೆಗೆ ಪ್ರವೇಶ ದ್ವಾರದ ಬಳಿ ಸಾವರ್ಕರ್ ಬೃಹದಾದ ಪೋಟೋವನ್ನು ಹಾಕಿದ್ದಾರೆ.

ಇನ್ನು ಸಾವರ್ಕರ್ ವಿವಾದದ ಹಿನ್ನೆಲೆಯಲ್ಲಿ ಈದ್ಗಾ ಮೈದಾನ ಒಳಗೆ ಮತ್ತು ಹೊರ ಭಾಗದಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಹದ್ದಿನ ಕಣ್ಣು ಇಟ್ಟಿದಾರೆ. ಒಟ್ಟಿನಲ್ಲಿ ಈ ಬಾರಿಯ ಗಣೇಶೋತ್ಸವದಲ್ಲಿ ಸಾವರ್ಕರ್ ಫೋಟೋ ಭಾರೀ ಸದ್ದು ಮಾಡುತ್ತಿದ್ದು ಪೊಲೀಸರಿಗೆ ಕಾನೂನು ಸುವ್ಯವಸ್ಥೆ ಕಾಪಾಡೋದೆ ಸವಾಲಿನ ಕೆಲಸವಾಗಿದೆ.

ಇದನ್ನು ಓದಿ : Student beat teacher: ಕಡಿಮೆ ಮಾರ್ಕ್ಸ್ ಕೊಟ್ಟಿದ್ದಕ್ಕೆ ಶಿಕ್ಷಕರನ್ನ ಮರಕ್ಕೆ ಕಟ್ಟಿ ಥಳಿಸಿದ ಸ್ಟೂಡೆಂಟ್ಸ್

ಇದನ್ನೂ ಓದಿ : Pramod Muthalik : ಎಡಿಜಿಪಿಯವರೇ ನೀವು ಯಾವ ದೇಶದಲ್ಲಿದ್ದೀರಿ : ಸಾವರ್ಕರ್​ ಫೋಟೋ ಕುರಿತಂತೆ ಅಲೋಕ್​ ಕುಮಾರ್​ ಹೇಳಿಕೆಗೆ ಮುತಾಲಿಕ್​ ವ್ಯಂಗ್ಯ

Savarkar Flex from Ganesh Pendal, Hubli Eidga Maidan, Photo Clear

Comments are closed.