Pramod Muthalik : ಎಡಿಜಿಪಿಯವರೇ ನೀವು ಯಾವ ದೇಶದಲ್ಲಿದ್ದೀರಿ : ಸಾವರ್ಕರ್​ ಫೋಟೋ ಕುರಿತಂತೆ ಅಲೋಕ್​ ಕುಮಾರ್​ ಹೇಳಿಕೆಗೆ ಮುತಾಲಿಕ್​ ವ್ಯಂಗ್ಯ

ಬೆಳಗಾವಿ : Pramod Muthalik : ಸಾರ್ವಜನಿಕ ಗಣೇಶೋತ್ಸವ ಸೇರಿದಂತೆ ಯಾವುದೇ ಕಾರ್ಯಕ್ರಮ ನಡೆಯುವ ಸಂದರ್ಭದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡೋದು ಪೊಲೀಸರ ಕರ್ತವ್ಯ ಆಗಿರುತ್ತೆ. ಇದೇ ರೀತಿ ಈ ಬಾರಿಯ ಗಣೇಶೋತ್ಸವಗಳಲ್ಲಿ ಸಾವರ್ಕರ್ ಭಾವಚಿತ್ರ ಸದ್ದು ಮಾಡುತ್ತಿದ್ದಂತೆ ಗಣಪತಿ ವಿಗ್ರಹ ಪ್ರತಿಷ್ಟಾಪನೆ ಸೇರಿದಂತೆ ಭಾವಚಿತ್ರ ಹಾಕೋದಕ್ಕೆ ಸ್ಥಳೀಯಾಡಳಿತದ ಅನುಮತಿ ಪಡೆಯುವಂತೆ ಸರ್ಕಾರ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಕಾನೂನು ಸುವ್ಯವಸ್ಥೆ ವಿಭಾಗದ ಎ.ಡಿ.ಜಿ.ಪಿ ಅಲೋಕ್ ಕುಮಾರ್ ಸಾರ್ವಜನಿಕ ಸ್ಥಳಗಳಲ್ಲಿ ಸಾವರ್ಕರ್ ಸೇರಿದಂತೆ ಇನ್ನಿತರರ ಫೋಟೋ ಹಾಕಲು ಸ್ಥಳೀಯಾಡಳಿತಗಳ ಅನುಮತಿ ಪಡೆಯಬೇಕೆಂದು ಹೇಳಿದ್ದರು. ಬೆಳಗಾವಿ ಜಿಲ್ಲೆಗೂ ಭೇಟಿ ನೀಡಿದ ಅಲೋಕ್ ಕುಮಾರ್ ಈ ಹೇಳಿಕೆ ನೀಡಿದ್ದರು. ಆದ್ರೆ ಇದೀಗ ಎ.ಡಿ.ಜಿ.ಪಿಯವರ ಈ ಹೇಳಿಕೆಗೆ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿಯಲ್ಲಿ ಹೇಳಿಕೆ ನೀಡಿರುವ ಪ್ರಮೋದ್ ಮುತಾಲಿಕ್ ಸ್ವಾತಂತ್ರ್ಯ ಸಿಕ್ಕಿ 75 ವರ್ಷ ಆಯ್ತು, ಸ್ವಾತಂತ್ರ್ಯ ನಮಗೆ ಸಿಗಬೇಕಾದ್ರೆ ತಿಲಕ್‌, ಸಾವರ್ಕರ್ ಕಾರಣ ಎಂಬುದು ನಿಮಗೆ ಗೊತ್ತಿಲ್ವಾ.?ಎಡಿಜಿಪಿಯವರೇ ಯಾವ ದೇಶದಲ್ಲಿ ಇದ್ದೀವಿ ನಾವು ಎಂದು ಪ್ರಮೋದ್ ಮುತಾಲಿಕ್ ಪ್ರಶ್ನಿಸಿದ್ದಾರೆ. ಈ ನಡುವೆ ಎಡಿಜಿಪಿ ಅಲೋಕ್‌ಕುಮಾರ್ ಕ್ಷಮೆಯಾಚನೆಗೆ ಆಗ್ರಹಿಸಿರುವ ಪ್ರಮೋದ್ ಮುತಾಲಿಕ್ ಸಾವರ್ಕರ್ ತಮ್ಮ ಆಯುಷ್ಯದಲ್ಲಿ ಅರ್ಧ ಆಯುಷ್ಯ ಜೈಲಿನಲ್ಲಿ ಕಳೆದ ವ್ಯಕ್ತಿ, ಸ್ವಾತಂತ್ರ್ಯದಲ್ಲಿ ಹೋರಾಟ ಮಾಡಿದ ವ್ಯಕ್ತಿಗಾಗಿ ಪರ್ಮಿಷನ್ ತಗೆದುಕೊಳ್ಳಬೇಕಾ ನಾವು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾವು ಕ್ಷಮೆ ಕೇಳಬೇಕು ಅಂತಾ ನಾನು ಹೇಳುತ್ತಿದ್ದೇನೆ. ಈ ರೀತಿಯ ನಿಮ್ಮ ಹೇಳಿಕೆಯಿಂದ ದೇಶಭಕ್ತಿ, ಸ್ವಾತಂತ್ರ್ಯ, ಸಂವಿಧಾನ ಮೇಲೆ ಪರಿಣಾಮ ಆಗುತ್ತದೆ. ಈ ರೀತಿಯ ನಿಮ್ಮ ಹೇಳಿಕೆ ಸರಿಯಲ್ಲ, ದೇಶಭಕ್ತರಿಗೆ ಅವಮಾನ ಮಾಡ್ತಿದೀರಿ ನೀವು ಎಂದು ಅಲೋಕ್ ಕುಮಾರ್ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಖಂಡನೆ ವ್ಯಕ್ತಪಡಿಸಿದ್ದಾರೆ‌. ಸಾವರ್ಕರ್ ಬಗ್ಗೆ ವಿರೋಧ ಮಾಡಿದ್ರು ಸಾವರ್ಕರ್ ಮೇಲಿನ ದೇಶಭಕ್ತಿ ಕಡಿಮೆ ಆಗಿಲ್ಲ,ಆಗೋದೂ ಇಲ್ಲ. ನೀವು ನಿಮ್ಮ ಹೇಳಿಕೆ ವಾಪಸ್ ಪಡೆದು ಕ್ಷಮೆ ಕೇಳಬೇಕು. ಈ ರೀತಿ ಹೇಳಿಕೆ ಎಂದೂ ಕೊಡಲು ಹೋಗಬೇಡಿ. 75 ವರ್ಷ ಸ್ವಾತಂತ್ರ್ಯದ ಇತಿಹಾಸದಲ್ಲಿ ಮಹಾಪುರುಷರ ಫೋಟೋ ಹಾಕಿ ದೇಶಭಕ್ತಿ ತೋರಿಸುವ ಕೆಲಸ ಮಾಡ್ತಿದೀವಿ. ಅದಕ್ಕೆ ಕಲ್ಲು ಹಾಕಕ್ಕೋಗಬೇಡಿ, ಇದನ್ನ ಖಂಡಿಸುತ್ತೇನೆ, ವಿರೋಧಿಸುತ್ತಿದ್ದೇನೆ ಎಂದು‌ ಮುತಾಲಿಕ್ ಹೇಳಿದ್ದಾರೆ‌.

ಇದನ್ನು ಓದಿ : Lumpy skin disease: 8 ರಾಜ್ಯಗಳಲ್ಲಿ ಜಾನುವಾರಗಳ ಜೀವ ಹಿಂಡುತ್ತಿದೆ ಚರ್ಮ ರೋಗ

ಇದನ್ನೂ ಓದಿ :Student beat teacher: ಕಡಿಮೆ ಮಾರ್ಕ್ಸ್ ಕೊಟ್ಟಿದ್ದಕ್ಕೆ ಶಿಕ್ಷಕರನ್ನ ಮರಕ್ಕೆ ಕಟ್ಟಿ ಥಳಿಸಿದ ಸ್ಟೂಡೆಂಟ್ಸ್

Pramod Muthalik condemns ADGP Alok Kumar’s statement

Comments are closed.