Shivamogga riot case: ಶಿವಮೊಗ್ಗದಲ್ಲಿ ಸಾವರ್ಕರ್​ ಫೋಟೋ ವಿವಾದ : ರಾಜ್ಯ ಸರ್ಕಾರಕ್ಕೆ ನನ್ನ ಧಿಕ್ಕಾರ ಎಂದ ಪ್ರಮೋದ್​ ಮುತಾಲಿಕ್​​

ಧಾರವಾಡ : Shivamogga riot case: ವೀರ ಸಾವರ್ಕರ್​ ಫ್ಲೆಕ್ಸ್​ ವಿಚಾರವಾಗಿ ಶಿವಮೊಗ್ಗ ರಣಾರಂಗವಾಗಿ ಬದಲಾಗಿದೆ. ಕಳೆದ ಮೂರು ದಿನಗಳಿಂದ ಸಾರ್ವಕರ್​​​ ಫೋಟೋ ವಿಚಾರವಾಗಿ ಬೂದಿ ಮುಚ್ಚಿದ ಕೆಂಡದಂತಿದ್ದ ಶಿವಮೊಗ್ಗದಲ್ಲಿ ಇಂದು ಇಬ್ಬರು ಯುವಕರ ಮೇಲೆ ಚಾಕು ಇರಿತವಾಗಿದೆ. ವೀರ ಸಾರ್ವಕರ್​ ಫ್ಲೆಕ್ಸ್​ಗಳನ್ನು ತೆರವುಗೊಳಿಸಿ ಟಿಪ್ಪು ಸುಲ್ತಾನನ ಫೋಟೋವನ್ನು ಅಳವಡಿಸಲು ಮುಂದಾದ ಮುಸ್ಲಿಂ ಯುವಕರು ಹಾಗೂ ಹಿಂದೂ ಕಾರ್ಯಕರ್ತರ ನಡುವೆ ಉಂಟಾದ ವಿವಾದವು ಇಂದು ವಿಕೋಪಕ್ಕೆ ತಿರುಗಿದ್ದು ಪರಿಸ್ಥಿತಿ ನಿಯಂತ್ರಣಕ್ಕೆ ಪೊಲೀಸರು ಲಾಠಿ ಚಾರ್ಜ್ ಮಾಡುವಂತಾಗಿದೆ.


ಶಿವಮೊಗ್ಗದಲ್ಲಿ ನಡೆದ ಹಿಂಸಾಚಾರದ ಬಗ್ಗೆ ಧಾರವಾಡದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್​ ಮುತಾಲಿಕ್​, ಶಿವಮೊಗ್ಗದಲ್ಲಿ ಟಿಪ್ಪು ಸುಲ್ತಾನನ ಫೋಟೋವನ್ನು ಮುಂದಿಟ್ಟುಕೊಂಡು ಬೇಕಂತಲೇ ಶಾಂತಿ ಕದಡುವ ಯತ್ನವನ್ನು ಮಾಡಲಾಗಿದೆ. ಟಿಪ್ಪು ಸುಲ್ತಾನ ಓರ್ವ ಮತಾಂಧ. ಆತ ಸಾವಿರಾರು ಮಂದಿರಗಳನ್ನು ಧ್ವಂಸ ಮಾಡಿದ್ದಾನೆ. ಲಕ್ಷಾಂತರ ಹಿಂದೂಗಳ ಹತ್ಯೆಯನ್ನು ಮಾಡಿದ್ದಾನೆ. ಆತ ಕನ್ನಡ ವಿರೋಧಿಯಾಗಿದ್ದ. ಇಂತಹ ವ್ಯಕ್ತಿಯ ಫೋಟೋವನ್ನು ಸ್ವಾತಂತ್ರ್ಯದ ಅಮೃತ ಮಹೋತ್ಸವದಲ್ಲಿ ಬಳಕೆ ಮಾಡುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದ್ದಾರೆ.


ಇವರೆಲ್ಲ ಮೊನ್ನೆಯೇ ಸಾರ್ವಕರ್​ ಫೋಟೋ ವಿಚಾರವಾಗಿ ಶಿವಮೊಗ್ಗದಲ್ಲಿ ತಗಾದೆ ತೆಗೆದಿದ್ದರು. ಸಾವರ್ಕರ್​ ಅಪ್ಪಟ ದೇಶ ಭಕ್ತ. ಆದರೆ ಅಂತಹ ವ್ಯಕ್ತಿಯ ಫೋಟೋವನ್ನು ಸ್ವಾತಂತ್ರ್ಯ ಹೋರಾಟಗಾರರ ಸಾಲಿನಿಂದ ತೆಗೆದು ಹಾಕುವಂತಹ ನೀಚ ಕೃತ್ಯವನ್ನು ಮಾಡಿದ್ದರು. ಇವರನ್ನು ಅಂದೇ ಒದ್ದು ಒಳಗೆ ಹಾಕಬೇಕಿತ್ತು. ಆದರೆ ಏನೂ ಮಾಡಲಿಲ್ಲ. ಹೀಗಾಗಿ ಸರ್ಕಾರಕ್ಕೆ ನನ್ನ ಧಿಕ್ಕಾರವಿದೆ. ಅಂದು ಸಾವರ್ಕರ್​ ಫೋಟೋವನ್ನು ತೆಗೆದಾಗಲೇ ಕ್ರಮ ಕೈಗೊಂಡಿದ್ದರೆ ಇಷ್ಟೊಂದು ಅಶಾಂತಿಯ ವಾತಾವರಣ ನಿರ್ಮಾಣವಾಗುತ್ತಿರಲಿಲ್ಲ. ಇನ್ನಾದರೂ ಕಾನೂನಿನ ಮೂಲಕ ಇಂತವರನ್ನು ಹದ್ದುಬಸ್ತಿನಲ್ಲಿ ಇಡಬೇಕು. ಇಲ್ಲದೇ ಹೋದಲ್ಲಿ ಹಿಂದೂ ಸಂಘಟನೆಗಳು ಬೀದಿಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನು ಓದಿ : Two youths stabbed in Shimoga : ಸಾವರ್ಕರ್​​​ ಫೋಟೋ ವಿವಾದ : ಶಿವಮೊಗ್ಗದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ

ಇದನ್ನೂ ಓದಿ : araga jnanendra jeep accident : ಗೃಹ ಸಚಿವ ಆರಗ ಜ್ಞಾನೇಂದ್ರ ಬೆಂಗಾವಲು ವಾಹನ ಅಪಘಾತ

Shivamogga riot case: Pramod Muthalik’s outrage against the state government

Comments are closed.