Spooky College teaser:ಮೈಸೂರು ಯುವ ದಸರಾ; ಸ್ಪೂಕಿ ಕಾಲೇಜ್‌ ಟೀಸರ್‌ ಬಿಡುಗಡೆ

ಮೈಸೂರು:(Spooky College teaser) ಕಳೆದ ಮೂರು ತಿಂಗಳ ಹಿಂದೆಯಷ್ಟೇ ಸ್ಪೂಕಿ ಕಾಲೇಜ್ ಟೀಸರ್‌ ಬಿಡುಗಡೆಯಾಗಿತ್ತು. ಸಿನಿಮಾಗಾಗಿ ಸಾಕಷ್ಟು ಪ್ರಮೋಷನ್‌ ಕಾರ್ಯಗಳು ಸಹ ನಡೆದಿದ್ದವು. ಆದ್ರೀಗ ಸ್ಪೊಕಿ ಟೀಸರ್‌ ಸದ್ದು ಮಾಡುತ್ತಿದೆ. ಹೌದು, ಮೈಸೂರು ಯುವ ದಸರಾ ಸಂಭ್ರಮ ಕಾರ್ಯಕ್ರಮದಲ್ಲಿ ಸ್ಪೂಕಿ ಕಾಲೇಜ್‌ ಟೀಸರ್‌ ಪ್ರದರ್ಶನ ಮಾಡಲಾಗಿದೆ. ಈ ಕುರಿತ ವಿಡಿಯೋವನ್ನು ಖುಷಿರವಿ ತಮ್ಮ ಇನ್ಟಾಗ್ರಾಂ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾರೆ.

ಸ್ಪೂಕಿ ಕಾಲೇಜ್ ಟೀಸರ್‌ ಪ್ರದರ್ಶಿಸಿದ ನಂತರ ಈ ಸಿನಿಮಾದ ನಾಯಕ ವಿವೇಕ್‌ ಸಿಂಹ ಅವರು ಅಪ್ಪು ಅವರ ಹಾಡಿನೊಂದಿಗೆ ತಮ್ಮ ಮಾತನ್ನು ಆರಂಭಿಸಿದ್ರು. ಸಿನಿಮಾ ನಿರ್ಮಾಣ ಕಾರಣರಾದ ಪ್ರತಿಯೊಬ್ಬ ಸದಸ್ಯರ ಮಾಹಿತಿ ನೀಡಿದರು. ಒಮ್ಮೆ ಟೀಸರ್‌ ನೋಡಿದ್ರೆ ಮತ್ತೊಮ್ಮೆ ನೋಡಬೇಕೆಂಬ ಆಸೆ ಹುಟ್ಟಿಸುತ್ತೆ ಎಡಿಟಿಂಗ್‌ ಅಷ್ಟು ಸುಂದರವಾಗಿ ಮೂಡಿ ಬಂದಿದೆ ಎಂದು ಖುಷಿ ರವಿ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದಷ್ಟು ಬೇಗ ಈ ಸಿನಿಮಾ ನಿಮ್ಮ ಮುಂದೆ ಬಿಡುಗಡೆ ಮಾಡಲಾಗುತ್ತದೆ. ಸ್ಪೂಕಿ ಕಾಲೇಜ್‌ ಗೆ ಅಡ್ಮಿಷನ್‌ ಆಗ್ತೀರಾ ಅಲ್ವಾ ಎಂದಿದ್ದಾರೆ.

ಸ್ಪೂಕಿ ಸೈಕಲಾಜಿಕಲ್‌ ಹಾರರ್‌ ಸಿನಿಮಾ ಆಗಿದ್ದು, ಇದಕ್ಕೆ ಸ್ವಲ್ಪ ಕಾಮಿಡಿಯ ಟಚ್‌ ಕೊಡಲಾಗಿದೆ. ರಂಗಿತರಂಗ ಮತ್ತು ಅವನೇ ಶೀಮನ್ನಾರಾಯಣದಂತಹ ಕನ್ನಡದ ಎರಡು ಅದ್ಭುತ ಸಿನಿಮಾವನ್ನು ಕೊಟ್ಟ ಎಚ್‌ ಕೆ ಪ್ರಕಾಶ್‌ ಅವರ ಶ್ರೀದೇವಿ ಎಂಟರ್‌ ಟೈನರ್ಸ್ ಬ್ಯಾನರ್‌ ನ ಅಡಿಯಲ್ಲಿ ಈ ಸಿನಿಮಾ ಮೂಡಿ ಬರುತ್ತಿದೆ. ರಾ ರಾ ರಕ್ಕಮ್ಮ ಹಾಡನ್ನು ಕೊಟ್ಟಿರುವ ಬಿ.ಅಜನೀಶ್‌ ಲೋಕನಾಥ್‌ ಸಂಗೀತ ಸಂಯೋಜನೆ ಮಾಡಿದ್ದಾರೆ. ಒಂದು ಸಿನಿಮಾ ಸುಂದರವಾಗಿ ಮೂಡಿ ಬರುವುದಕ್ಕೆ ಕ್ಯಾಮೆರಾದಲ್ಲಿ ಸೆರೆಯಾಗುವ ಪ್ರತಿಯೊಂದು ಶಾಟ್ ಗಳು ಮುಖ್ಯವಾಗುತ್ತದೆ. ಮನೋಹರ್‌ ಜೋಶಿಯವರು ಛಾಯಗ್ರಹಣದ ಕೆಲಸವನ್ನು ಮಾಡಿದ್ದಾರೆ. ಇನ್ನು ಈ ಸಿನಿಮಾದ ಎಡಿಟಿಂಗ್‌ ಕೆಲಸವನ್ನು ಶ್ರೀಕಾಂತ ಮಾಡಿದ್ದಾರೆ.

ಇದನ್ನೂ ಓದಿ:SP Balasubrahmanyam : ಸಂಗೀತ ಮಾಂತ್ರಿಕ ಎಸ್​​.ಪಿ ಬಾಲಸುಬ್ರಹ್ಮಣ್ಯಂ ಮದುವೆಯ ಹಿಂದಿದೆ ರೋಚಕ ಕಹಾನಿ

ಇದನ್ನೂ ಓದಿ:EK Love Yaa Rana:”ಏಕ್‌ ಲವ್‌ ಯಾ” ಸಿನಿಮಾ ನಂತರ ನಟಿ ರಕ್ಷಿತಾ ಸಹೋದರ ರಾಣಾರವರ ಮುಂದಿನ ಸಿನಿಮಾದ ಅಪ್ಡೇಟ್

ಇದನ್ನೂ ಓದಿ:Face pack:ಮುಖದಕಾಂತಿ ಕಾಂತಿ ಹೆಚ್ಚಿಸಲು ಮನೆಯಲ್ಲೇ ಮಾಡಿ ಫೇಸ್‌ಪ್ಯಾಕ್‌

ಸ್ಪೂಕಿ ಕಾಲೇಜ್‌ ಸಿನಿಮಾ ಕಾಲೇಜು ಕ್ಯಾಂಪಸ್ ನಲ್ಲಿ ನಡೆಯುವ ಘಟನೆಯಾಧಾರಿತ ಕಥೆಯಾಗಿದೆ. ವಿಭಿನ್ನವಾದ ಕಥೆ ಇರುವುದನ್ನು ಜನರು ಒಪ್ಪಿಕೊಳ್ಳುತ್ತಾರೆ. ಈ ಹಿಂದೆ ಇದರ ಪೋಸ್ಟರ್‌ ಬಿಡುಗಡೆ ಮಾಡಿದಾಗ ಸಾಕಷ್ಟು ಜನರ ಪ್ರಶಂಸೆ ದೊರಕಿತ್ತು. ಮತ್ತು ಹಲವಾರು ಸಿನಿಮಾ ನಟರು ಕೂಡ ಅವರ ಸ್ಟೆಟಸ್ ನಲ್ಲಿ ಪೋಸ್ಟರ್‌ ಹಾಕುವ ಮೂಲಕ ಪ್ರೋತ್ಸಾಹವನ್ನು ನೀಡಿದ್ದರು ಇದೀಗ ಈ ಸಿನಿಮಾ ಬಿಡುಗಡೆಯಾದಾಗ ಜನರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಕಾದು ನೋಡಬೇಕಿದೆ.

Spooky College teaser released in Mysuru yuva sambrama

Comments are closed.