KL Rahul Athiya Shetty Love Story : ಕೆ.ಎಲ್.ರಾಹುಲ್‌ – ಆತಿಯಾ ಶೆಟ್ಟಿ ಲವ್ ಸ್ಟೋರಿ; ಹೊಸ ಮನೆಗೆ ಗೃಹಪ್ರವೇಶ ಮಾಡಿದ ಪ್ರೇಮಪಕ್ಷಿಗಳು

ಮುಂಬೈ: (KL Rahul Athiya Shetty Love) ಭಾರತ ಕ್ರಿಕೆಟ್ ತಂಡದ ಉಪನಾಯಕ ಕೆ.ಎಲ್ ರಾಹುಲ್ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಸುನೀಲ್ ಶೆಟ್ಟಿಯವರ ಪುತ್ರಿ ಆತಿಯಾ ಶೆಟ್ಟಿ ಪ್ರೀತಿಸುತ್ತಿರುವುದು, ಮುಂದಿನ ವರ್ಷ ಇವರಿಬ್ಬರ ಮದುವೆ ನಡೆಯಲಿರುವುದು ಎಲ್ಲಾ ಹಳೇ ಸುದ್ದಿ.

ರಾಹುಲ್-ಆತಿಯಾ ಲವ್ ಸ್ಟೋರಿಯಲ್ಲಿ ಹೊಸ ಸುದ್ದಿ ಏನಂದ್ರೆ ಪ್ರೇಮಪಕ್ಷಿಗಳ ಹೊಸ ಮನೆ ಗೃಹಪ್ರವೇಶ. ಹೌದು, ರಾಹುಲ್ ಹಾಗೂ ಆತಿಯಾ ಶೆಟ್ಟಿಗೆ ಸುನೀಲ್ ಶೆಟ್ಟಿ ಮುಂಬೈನ ಬಾಂದ್ರಾದ ಕಾರ್ಟರ್ ರಸ್ತೆಯಲ್ಲಿ ಹೊಸ ಮನೆಯೊಂದನ್ನು ಉಡುಗೊರೆಯಾಗಿ ನೀಡಿದ್ದು, ಈಗಾಗಲೇ ಇಬ್ಬರೂ ಅಲ್ಲಿಗೆ ಶಿಫ್ಟ್ ಆಗಿದ್ದಾರೆ. ಆತಿಯಾ ಶೆಟ್ಟಿಯ ತಂದೆಯ ತಾಯಿ (ಸುನೀಲ್ ಶೆಟ್ಟಿ ಮತ್ತು ಮನಾ ಶೆಟ್ಟಿ) ಕಳೆದ ತಿಂಗಳು ಮಗಳ ಹೊಸ ಮನೆಗೆ ಪೂಜೆ ನೆರವೇರಿಸಿದ್ದಾರೆ. ಕೆ.ಎಲ್ ರಾಹುಲ್ ಜಿಂಬಾಬ್ವೆ ಪ್ರವಾಸಕ್ಕೆ ತೆರಳುವ ಮೊದಲೇ ಪ್ರೇಯಸಿ ಆತಿಯಾ ಶೆಟ್ಟಿ ಜೊತೆ ಹೊಸ ಮನೆಗೆ ಕಾಲಿಟ್ಟಿದ್ದಾರೆ.

ರಾಹುಲ್ ಮತ್ತು ಆತಿಯಾ ಕಳೆದ 3 ವರ್ಷಗಳಿಂದ ಪ್ರೀತಿಸುತ್ತಿದ್ದು, ಮುಂದಿನ ವರ್ಷದ ಜನವರಿಯಲ್ಲಿ ಮದುವೆಯಾಗಲಿದ್ದಾರೆ. ಇಬ್ಬರ ಮದುವೆಗೆ ಸುನೀಲ್ ಶೆಟ್ಟಿ ಈಗಾಗ್ಲೇ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಜಿಂಬಾಬ್ವೆ ಪ್ರವಾಸದಲ್ಲಿ ಭಾರತ ತಂಡದ (India Tour of Zimbabwe) ನಾಯಕತ್ವ ವಹಿಸಿದ್ದ ಕೆ.ಎಲ್ ರಾಹುಲ್ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿದ್ದಾರೆ. ಇದು ಟೀಮ್ ಇಂಡಿಯಾ ನಾಯಕನಾಗಿ ರಾಹುಲ್ ಅವರ ಮೊದಲ ಸರಣಿ ಗೆಲುವು. ಜಿಂಬಾಬ್ವೆಯ ಹರಾರೆಯಿಂದ ರಾಹುಲ್ ನೇರವಾಗಿ ದುಬೈಗೆ ಪ್ರಯಾಣ ಬೆಳೆಸಿದ್ದು, ಏಷ್ಯಾ ಕಪ್’ನಲ್ಲಿ (Asia Cup 2022) ಆಡಲಿರುವ ಭಾರತ ತಂಡವನ್ನು ಸೇರಿಕೊಳ್ಳಲಿದ್ದಾರೆ.

ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ರಾಹುಲ್ ಭಾರತ ತಂಡದ ಉಪನಾಯಕನ ಜವಾಬ್ದಾರಿ ಹೊತ್ತಿದ್ದಾರೆ. ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಸಹಿತ ಏಷ್ಯಾ ಕಪ್’ನಲ್ಲಿ ಆಡಲಿರುವ ಭಾರತ ತಂಡದ ಆಟಗಾರರು ಸೋಮವಾರ ಮಧ್ಯರಾತ್ರಿ ದುಬೈಗೆ ಪ್ರಯಾಣ ಬೆಳೆಸಿದ್ದಾರೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 27ರಂದು ಆರಂಭ ವಾಗಲಿದ್ದು, ಆಗಸ್ಟ್ 28ರಂದು ದುಬೈನಲ್ಲಿ ನಡೆಯಲಿರುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Rishabh Pant Sister Sakshi Pant : ಕ್ರಿಕೆಟರ್ ನಿತೀಶ್ ರಾಣಾ ಜೊತೆ ಲಂಡನ್‌ನಲ್ಲಿ ಕಾಣಿಸಿಕೊಂಡ ರಿಷಭ್ ಪಂತ್ ತಂಗಿ

ಇದನ್ನೂ ಓದಿ : Rohit Sharma Batting : 7 ಇನ್ನಿಂಗ್ಸ್, 2 ಡಕ್ 4 ಸಿಂಗಲ್ ಡಿಜಿಟ್ ; ಪಾಕ್ ವಿರುದ್ಧ ಮುಗ್ಗರಿಸೋದ್ಯಾಕೆ ಹಿಟ್‌ಮ್ಯಾನ್ ?

KL Rahul Athiya Shetty Love Story Lovebirds who entered their new home

Comments are closed.