leopard in Tumkur : ಬರಿಗೈನಲ್ಲಿ ಚಿರತೆ ಸೆರೆ ಹಿಡಿದ ಮೂವರು ಯುವಕರು : ಮೈ ಝುಂ ಎನ್ನಿಸುತ್ತೆ ಈ ಭಯಾನಕ ವಿಡಿಯೋ

ತುಮಕೂರು : leopard in Tumkur :ಹುಲಿ,ಚಿರತೆ, ಸಿಂಹಗಳ ಹೆಸರು ಕೇಳಿದರೆ ಸಾಕು ಮೈ ಝುಂ ಎನ್ನುತ್ತೆ. ಇವುಗಳು ನಮ್ಮ ಸಮೀಪ ಬರುವುದು ಹಾಗಿರಲಿ. ಊರಿಗೆ ಈ ವಾಘ್ರ್ಯಗಳು ಬಂದಿವೆ ಎಂಬ ಸುದ್ದಿ ಸಿಕ್ಕರೂ ನಮಗೆ ಎದೆ ಝಲ್​ ಎಂಬಂತೆ ಆಗುತ್ತದೆ. ಗ್ರಾಮಗಳಿಗೆ ಚಿರತೆಗಳು ಬಂದಿವೆ ಎಂಬ ಸುದ್ದಿ ಸಿಕ್ಕಾಕ್ಷಣವೇ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡುವ ಕೆಲಸವನ್ನು ಮಾಡಲಾಗುತ್ತದೆ. ಆದರೆ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋವೊಂದರಲ್ಲಿ ಮೂವರು ಯುವಕರು ಬರಿಗೈನಲ್ಲಿ ಚಿರತೆಯನ್ನು ಸೆರೆ ಹಿಡಿದಿದ್ದು ಈ ವಿಡಿಯೋ ನೆಟ್ಟಿಗರ ಹುಬ್ಬೇರುವಂತೆ ಮಾಡಿದೆ.


ತುಮಕೂರು ಜಿಲ್ಲೆಯ ಶಿರಾ ಭಾಗದ ಸ್ಥಳೀಯರ ಮೊಬೈಲ್​ಗಳಲ್ಲಿ ಈ ವಿಡಿಯೋ ಹರಿದಾಡುತ್ತಿದೆ. ಚಿರತೆಯನ್ನು ಅಟ್ಟಾಡಿಸಿಕೊಂಡು ಬಂದ ಮೂವರು ಯುವಕರು ಆ ಚಿರತೆಯನ್ನು ಹಿಡಿದಿದ್ದು ಮಾತ್ರವಲ್ಲದೇ ಕಿಂಚಿತ್ತೂ ಭಯವಿಲ್ಲದೆಯೇ ಅದರ ಮುಖಕ್ಕೆ ಮುತ್ತಿಟ್ಟಿದ್ದಾರೆ. ಈ ಮೂವರು ಯುವಕರ ಕಾರ್ಯಾಚರಣೆಗೆ ಒಂದು ನಾಯಿ ಕೂಡ ಸಾಥ್​ ನೀಡಿರೋದನ್ನು ನೀವು ವಿಡಿಯೋದಲ್ಲಿ ಕಾಣಬಹುದಾಗಿದೆ.


ತುಮಕೂರು ಜಿಲ್ಲೆ ಶಿರಾ ತಾಲೂಕಿನ ರಾಗಲಹಳ್ಳಿ ಎಂಬಲ್ಲಿ ಈ ರೀತಿ ಚಿರತೆಯನ್ನು ಯಾವುದೇ ಸುರಕ್ಷತಾ ಕ್ರಮಗಳನ್ನು ಬಳಕೆ ಮಾಡದೆಯೇ ಸೆರೆ ಹಿಡಿಯಲಾಗಿದೆ ಎಂಬ ಆರೋಪ ಎದುರಾಗಿದೆ. ಸೋಶಿಯಲ್​ ಮೀಡಿಯಾದಲ್ಲಿ ಯಾರೋ ಅಪರಿಚಿತರು ಈ ವಿಡಿಯೋವನ್ನು ವೈರಲ್​ ಮಾಡಿದ್ದಾರೆ. ಆದರೆ ಈ ಸಂಬಂಧ ತುಮಕೂರು ಜಿಲ್ಲಾ ಅರಣ್ಯ ಇಲಾಖೆ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಈ ರೀತಿಯ ಯಾವುದೇ ಘಟನೆ ಶಿರಾ ಭಾಗದಲ್ಲಿ ನಡೆದಿಲ್ಲ ಎಂದು ಹೇಳುತ್ತಿದ್ದಾರೆ.


ಈ ವಿಡಿಯೋ ನೋಡಿದ ಜನರು ಮಾತ್ರ ಮೂಗಿನ ಮೇಲೆ ಬೆರಳಿಟ್ಟಿದ್ದು ಈ ರೀತಿಯಾಗಿ ಚಿರತೆಯನ್ನು ಹಿಡಿದಿರೋದು ಎಲ್ಲಿ..? ಚಿರತೆಯನ್ನು ಹಿಡಿದ ಆ ಮೂವರು ಸಾಹಸಿಗರು ಯಾರು..? ಎಂದೆಲ್ಲ ಚರ್ಚೆ ಮಾಡುತ್ತಿದ್ದಾರೆ .

ಇದನ್ನು ಓದಿ : teacher poured hot water : ಸಮವಸ್ತ್ರದಲ್ಲೇ ಮಲವಿಸರ್ಜನೆ ಮಾಡಿದ್ದಕ್ಕೆ ವಿದ್ಯಾರ್ಥಿ ಮೈ ಮೇಲೆ ಬಿಸಿ ನೀರು ಸುರಿದ ಶಿಕ್ಷಕ

ಇದನ್ನೂ ಓದಿ : Virat Kohli KL Rahul : ಕೊಹ್ಲಿ ಆರಂಭಿಕನಾಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ; ಕೆ.ಎಲ್ ರಾಹುಲ್ ಹೀಗಂದಿದ್ದೇಕೆ ?

Three youths caught a leopard in Tumkur

Comments are closed.