covid care center :ಕೋವಿಡ್ ಕೇರ್ ಸೆಂಟರ್ ಹೆಸರಿನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ

ಚಾಮರಾಜನಗರ : covid care center : ವರುಷಗಳ ಹಿಂದೆ ಕೊರೊನಾ ಮಾಹಮಾರಿ ಬಂದಾಗ ಎಲ್ಲರೂ ಆತಂಕಕ್ಕೆ ಒಳಗಾಗಿದ್ದರು. ಕೋವಿಡ್ ಪಾಸಿಟಿವ್ ಬಂದ್ರೆ ಚಿಕಿತ್ಸೆ ಹೇಗೆ ಎಂಬ ಗೊಂದಲವು ಇತ್ತು. ಒಂದು ಕಡೆಯಿಂದ ಆಕ್ಸಿಜನ್ ಕೊರತೆಯಾದರೆ ಇನ್ನೊಂದು ಕಡೆಯಿಂದ ಆಸ್ಪತ್ರೆಗಳಲ್ಲಿ ಬೆಡ್ ಕೊರತೆಯು ಕಂಡು ಬಂತು. ಇದಕ್ಕಾಗಿಯೇ ಪಾಸಿಟಿವ್ ಬಂದು ಆರೋಗ್ಯದಲ್ಲಿ ಗಂಭೀರ ಸಮಸ್ಯೆ ಎದುರಿಸದ ರೋಗಿಗಳ ಆರೈಕೆಗಾಗಿ ಕೋವಿಡ್ ಕೇರ್ ಸೆಂಟರ್ ಗಳನ್ನು ಆರಂಭಿಸಲಾಗಿತ್ತು. ಆದ್ರೆ ಕೆಲವು ಕಡೆಗಳಲ್ಲಿ ಇದೇ ಕೋವಿಡ್ ಕೇರ್ ಸೆಂಟರ್ ಗಳನ್ನು ಹಣ ಮಾಡುವ ಸೆಂಟರ್ ಗಳಾಗಿ‌ ಅಧಿಕಾರಿಗಳು ಮಾಡಿಕೊಂಡಿದ್ದು ಇದೀಗ ಬೆಳಕಿಗೆ ಬಂದಿದೆ.

ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಕೋವಿಡ್ ಕೇರ್ ಸೆಂಟರ್‌‌ಗಳಲ್ಲಿ ನಡೆದಿರುವ ಬ್ರಹ್ಮಾಂಡ ಭ್ರಷ್ಟಾಚಾರ ಇದೀಗ ಬೆಳಕಿಗೆ ಬರುತ್ತಿದೆ. ಕೋವಿಡ್ ಕೇರ್ ಸೆಂಟರ್‌ ಗಳಲ್ಲಿ ಹಣ ದುರುಪಯೋಗ ಮಾಡಿರುವುದು ಗೊತ್ತಾಗಿದೆ. ಹನೂರು ತಾಲೂಕಿನ ಕೋವಿಡ್ ಕೇರ್ ಸೆಂಟರ್‌‌ಗಳಿಗಾಗಿ 2.35 ಕೋಟಿ ರೂ ಅನುದಾನ ಬಿಡುಗಡೆ ಮಾಡಲಾಗಿತ್ತು. ಆದ್ರೆ ಬಿಡುಗಡೆಯಾದ ಇಷ್ಟು ಹಣದಲ್ಲಿ
33.67 ಲಕ್ಷ ರೂ ದುರುಪಯೋಗವಾಗಿರುವುದು ಇದೀಗ ಗೊತ್ತಾಗಿದೆ.

ಕಳೆದ ವರ್ಷ ಕೋವಿಡ್ ಸಂದರ್ಭದಲ್ಲಿ ತೆರೆಯಲಾಗಿದ್ದ ಕೇರ್ ಸೆಂಟರ್ ‌ಗಳಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ದೂರುಗಳು ಬಂದಿತ್ತು. ಹೀಗಾಗಿ ಸಹಾಯಕ ಕಮೀಷನರ್ ನೇತೃತ್ವದ ತನಿಖೆಯನ್ನು ನಡೆಸಲಾಗಿತ್ತು. ಸದ್ಯ ತಂಡ ನೀಡಿರುವ ತನಿಖಾ ವರದಿಯಲ್ಲಿ ಹಣ ದುರುಪಯೋಗವಾಗಿರುವುದು ಬಹಿರಂಗವಾಗಿದೆ.

ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಹಣ ದುರುಪಯೋಗ ಮಾಡಿರುವ ಆರೋಪ ಅಧಿಕಾರಿಗಳ ಮೇಲಿದೆ. ದುರಂತ ಅಂದ್ರೆ ಕಂಪ್ಯೂಟರ್ ಸೆಂಟರ್‌ನಿಂದ ದಿನಸಿ, ಸ್ಯಾನಿಟೈಸರ್, ಸೋಪ್, ಟೂತ್ ಪೇಸ್ಟ್, ಟೂತ್ ಬ್ರಶ್, ಕಸದ ಪೊರಕೆ, ಬಕೆಟ್, ಜಗ್ಗು, ಡಸ್ಟ್‌ಬಿನ್ ಖರೀದಿ ಮಾಡಿರುವುದು ಗೊತ್ತಾಗಿದೆ. ಇದರ ಜೊತೆ ಟಿವಿ, ವಾಟರ್ ಹೀಟರ್, ವಾಟರ್ ಡಿಸ್ಪೆನ್ಸರ್, ಡಿಶ್, ಗಳು ಸಹ ಕಂಪ್ಯೂಟರ್ ಸೆಂಟರ್‌ನಿಂದಲೇ ಖರೀದಿ ಮಾಡಿರುವುದು ಭ್ರಷ್ಟಾಚಾರಕ್ಕೆ ಕೈಗನ್ನಡಿ ಹಿಡಿದಂತಿದೆ.

ಕೇರ್ ಸೆಂಟರ್ ‌ಗಳಲ್ಲಿದ್ದ ರೋಗಿಗಳ ಹಾಜರಾತಿ ಸಂಖ್ಯೆಗೂ ಆಹಾರ ಸರಬರಾಜು ಮಾಡಿರುವ ಸಂಖ್ಯೆಗೂ ಸಹ ವ್ಯತ್ಯಾಸ ಇರುವುದು ಕಂಡುಬಂದಿದೆ. ಕೇವಲ ಹೊಟೇಲ್ ಮಾಲೀಕರಲ್ಲದೇ ಬೇರೆ ಹೆಸರಿನಲ್ಲಿಯೂ ಚೆಕ್ ಮೂಲಕ ಹಣ ಪಾವತಿ ಆಗಿರುವುದು ಗೊತ್ತಾಗಿದೆ. ಕಾಟನ್ ಬೆಡ್‌ಶೀಟ್, ಉಲ್ಲನ್ ಬೆಡ್‌ಶೀಟ್, ಟವೆಲ್ ಗಳ ಖರೀದಿಯಲ್ಲೂ ನಿಯಮ ಉಲ್ಲಂಘನೆ ಮಾಡಲಾಗಿದೆ. ಮಾರುಕಟ್ಟೆ ದರಕ್ಕಿಂತ ಹೆಚ್ಚಿನ ದರ ಪಾವತಿ ಮಾಡಿರುವುದು ಬೆಳಕಿಗೆ ‌ಬಂದಿದೆ.

ಟೆಂಡರ್ ಕರೆಯದೆ ಪಾರದರ್ಶಕ ನಿಯಮ ಉಲ್ಲಂಘನೆ ಮಾಡಿರುವುದು ಗೊತ್ತಾಗಿದೆ. ಜಿಲ್ಲಾಧಿಕಾರಿ ವಿಧಿಸಿದ್ದ ಷರತ್ತುಗಳ ಉಲ್ಲಂಘನೆಯಾಗಿರುವುದು ಸಹ ತಿಳಿದುಬಂದಿದೆ.‌ ಆದ್ರೆ ಇಷ್ಟೆಲ್ಲಾ ಅಕ್ರಮ ನಡೆದಿದೆ ಎಂದು ತನಿಖಾ ತಂಡ ವರದಿ ಸಲ್ಲಿಸಿ 5 ತಿಂಗಳಾದರೂ ಜಿಲ್ಲಾಡಳಿತ ಮಾತ್ರ ಯಾವುದೇ ಕ್ರಮ ಕೈಗೊಂಡಿಲ್ಲ. ಹೀಗಾಗಿ ಕೋವಿಡ್ ಕೇರ್ ಸೆಂಟರ್ ನಲ್ಲಿ ಯಾರು ಯಾರು ಹಣ ಮಾಡಿದ್ದಾರೆ ಎಂಬ ಸಂಶಯ ಕ್ಕೆ ಕಾರಣವಾಗಿದೆ. ಹೀಗಾಗಿ ಚಾಮರಾಜನಗರ ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಿದೆ.

ಇದನ್ನು ಓದಿ : wife killed her husband :ಪತಿಯನ್ನು ಕೊಂದು ಅಪಘಾತದ ಕತೆ ಕಟ್ಟಿದ್ದ ಐನಾತಿ ಪತ್ನಿ ಅಂದರ್​​

ಇದನ್ನೂ ಓದಿ : BJP-Congress :ಬಿಜೆಪಿ – ಕಾಂಗ್ರೆಸ್​ ನಡುವೆ ಜೋರಾಯ್ತು QR ಕೋಡ್ ಯುದ್ಧ

Universe corruption in the name of covid care center

Comments are closed.