NIA Raid across India: ಮಂಗಳೂರು ಸೇರಿದಂತೆ ದೇಶಾದ್ಯಂಥ NIA ಮೆಗಾ ರೇಡ್

ದೆಹಲಿ : NIA Raid across India ಉಗ್ರ ಸಂಘಟನೆಗಳಿಗೆ ಪಂಢಿಂಗ್ ಹಾಗೂ ಉಗ್ರವಾದಕ್ಕೆ ಬೆಂಬಲ ನೀಡುವ ತರಬೇತಿ ಶಿಬಿರಗಳನ್ನ ಆಯೋಜಿಸ್ತಿರೋ ಆರೋಪದ ಮೇಲೆ, ಕರ್ನಾಟಕದ ಮಂಗಳೂರು ಸೇರಿದಂತೆ ದೇಶಾದ್ಯಂಥ ಹಲವು ರಾಜ್ಯಗಳಲ್ಲಿ ಪಿಎಫ್ ಐ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾದ ಕಚೇರಿ ಮತ್ತು ಪಿಎಫ್ಐ ಮುಖ್ಯಸ್ಥರ ಮನೆ ಮೇಲೆ ಎನ್ಐಎ ರಾಷ್ರೀಯ ತನಿಖಾ ಸಂಸ್ಥೆ ಏಕ ಕಾಲಕ್ಕೆ ದಾಳಿ ನಡೆಸಿದೆ.

ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ, ಕೇರಳ, ತಮಿಳುನಾಡು, ಉತ್ತರ ಪ್ರದೇಶ ಸೇರಿದಂತೆ ಹಲವು ಕಡೆ ದಾಳಿ ನಡೆದಿದ್ದು ಎನ್ಐಎ ನಡೆಸಿರುವ ಅತಿ ದೊಡ್ಡ ದಾಳಿ ಇದಾಗಿದೆ. 200ಕ್ಕೂ ಹೆಚ್ಚು ಅಧಿಕಾರಿಗಳು ಈ ಮೆಗಾ ಆಪರೇಷನ್ ನಲ್ಲಿ ಭಾಗಿಯಾಗಿದ್ದು, ಎಲ್ಲೆಡೆ ಭಾರಿ ಶೋಧ ಕಾರ್ಯಾಚರಣೆ ನಡೆಸಲಾಗ್ತಿದೆ. ಎನ್ಐಎ ಜೊತೆ ಕೆಲವೆಡೆ ಇಡಿ ಸಹ ದಾಳಿ ನಡೆಸಿದೆ ಅಂತಾ ಮೂಲಗಳು ತಿಳಿಸಿವೆ.

ಮಲಪ್ಪುರಂ ಜಿಲ್ಲೆಯ ಮಂಜೇರಿಯಲ್ಲಿರುವ ಪಿಎಫ್‌ಐ ಅಧ್ಯಕ್ಷ ಒಎಂಎ ಸಲಾಂ ಅವರ ಮನೆ ಸೇರಿದಂತೆ, ಪಿಎಫ್‌ಐ ಮುಖಂಡರ ಮನೆ ಮತ್ತು ಪಿಎಫ್‌ಐ ಕಚೇರಿಗಳಲ್ಲಿ ಮಧ್ಯರಾತ್ರಿಯಿಂದ ಎನ್‌ಐಎ ಮತ್ತು ಜಾರಿ ನಿರ್ದೇಶನಾಲಯ ದಾಳಿ ನಡೆಸುತ್ತಿದೆ. ದಾಳಿ ಬೆನ್ನಲ್ಲೆ ಮಲಪ್ಪುರಂನಲ್ಲಿರುವ ಒಎಂಎ ಸಲಾಂ ಅವರ ಮನೆಯ ಹೊರಗೆ ಪಿಎಫ್‌ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಮಂಗಳೂರಿನಲ್ಲೂ NIA ರೇಡ್ : ಮಂಗಳೂರಿನಲ್ಲೂ ಎನ್ಐಎ ರೇಡ್ ಮಾಡಿದೆ. ನಗರದಲ್ಲಿನ ಪಿಎಫ್ಐ, ಎಸ್​ಡಿಪಿಐ ಜಿಲ್ಲಾ ಕಚೇರಿಗಳ ಮೇಲೆ ದಾಳಿ ನಡೆಸಿದೆ. ಇಂದು ಮುಂಜಾನೆ 3.30 ರ ಸುಮಾರಿಗೆ ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ಮಂಗಳೂರಿನ ನೆಲ್ಲಿಕಾಯಿ ರಸ್ತೆಯಲ್ಲಿ ಇರುವ ಕಚೇರಿಗಳು ಸೇರಿದಂತೆ ನಗರದ 8 ಕಡೆ ಈ ಸಂಘಟನೆಗಳ ಮುಖಂಡರ ಮನೆಗಳಲ್ಲಿ ಶೋಧ ನಡೆಯುತ್ತಿದೆ.ಪಿಎಫ್ಐ, ಎಸ್​ಡಿಪಿಐ ಕಚೇರಿ ಇರುವ ನೆಲ್ಲಿಕಾಯಿ ರಸ್ತೆಯ ಎರಡು ಬದಿಗಳಲ್ಲೂ ಸಿಆರ್​ಪಿಎಫ್ ಅಧಿಕಾರಿಗಳ ಬಂದೋಬಸ್ತ್​ ಇದೆ. ಎನ್​ಐಎ ಅಧಿಕಾರಿಗಳು ಕಚೇರಿಯೊಳಗೆ ಪರಿಶೀಲನೆ ಮುಂದುವರೆಸಿದ್ದಾರೆ.

ಕಳೆದ ಕೆಲವು ದಿನಗಳಲ್ಲಿ, ಪಿಎಫ್‌ಐ ಲಿಂಕ್‌ಗಳಿಗೆ ಸಂಬಂಧಿಸಿದಂತೆ ಎನ್‌ಐಎ ಹತ್ತಕ್ಕೂ ಹೆಚ್ಚು ಪ್ರಕರಣಗಳನ್ನು ದಾಖಲಿಸಿದೆ. NIA ಮೂಲಗಳ ಪ್ರಕಾರ, ಇತ್ತೀಚಿನ ದಿನಗಳಲ್ಲಿ, ದೇಶದಲ್ಲಿ PFI ಲಿಂಕ್‌ಗಳಿಗೆ ಸಂಬಂಧಿಸಿದಂತೆ ಸಂಸ್ಥೆ 100 ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ. ಸೆಪ್ಟೆಂಬರ್ 18 ರಂದು, NIA ಆಂಧ್ರಪ್ರದೇಶದ ವಿವಿಧ ಜಿಲ್ಲೆಗಳಾದ್ಯಂತ ಅನೇಕ ಸ್ಥಳಗಳಲ್ಲಿ ದಾಳಿ ನಡೆಸಿತು ಮತ್ತು ಹಿಂಸಾಚಾರ ಮತ್ತು ಕಾನೂನುಬಾಹಿರ ಚಟುವಟಿಕೆಗಳನ್ನು ಪ್ರಚೋದಿಸುವ ಸಂಬಂಧದಲ್ಲಿ PFI ಸದಸ್ಯರನ್ನು ವಿಚಾರಣೆಗಾಗಿ ವಶಕ್ಕೆ ಪಡೆದುಕೊಂಡು ಹೋಗಿದ್ರು. ತೆಲಂಗಾಣದ ನಿಜಾಮಾಬಾದ್ ಜಿಲ್ಲೆಯ ಮನೆಯೊಂದರ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಹೈದರಾಬಾದ್‌ನಲ್ಲಿರುವ ಎನ್‌ಐಎ ಕಚೇರಿಗೆ ಭೇಟಿ ನೀಡುವಂತೆ ವ್ಯಕ್ತಿಯೊಬ್ಬರಿಗೆ ನೋಟಿಸ್ ನೀಡಿದ್ದಾರೆ. ಎನ್‌ಐಎ ಅಧಿಕಾರಿಗಳ 23 ತಂಡಗಳು ನಿಜಾಮಾಬಾದ್, ಕರ್ನೂಲ್, ಗುಂಟೂರು ಮತ್ತು ನೆಲ್ಲೂರು ಜಿಲ್ಲೆಗಳಲ್ಲಿ ಏಕಕಾಲದಲ್ಲಿ ಶೋಧ ನಡೆಸಿವೆ.

ಇದನ್ನೂ ಓದಿ wife killed her husband :ಪತಿಯನ್ನು ಕೊಂದು ಅಪಘಾತದ ಕತೆ ಕಟ್ಟಿದ್ದ ಐನಾತಿ ಪತ್ನಿ ಅಂದರ್​​

NIA Raid across India Massive NIA crackdown on PFI for terrorism radicalization raids underway across India

Comments are closed.