KS Eshwarappa :‘ಆರ್​ಎಸ್​ಎಸ್​​ಗೆ ಬುದ್ಧಿ ಕಲಿಸಲು ಯಾರಪ್ಪನಿಂದಲೂ ಸಾಧ್ಯವಿಲ್ಲ’ : ಕೆ.ಎಸ್​ ಈಶ್ವರಪ್ಪ ಗುಡುಗು

ಶಿವಮೊಗ್ಗ : KS Eshwarappa RSS: ದೇಶದಲ್ಲಿ ಮುಂದಿನ ಐದು ವರ್ಷಗಳ ಕಾಲ ಪಿಎಫ್​ಐ ಸಂಘಟನೆಯನ್ನು ಬ್ಯಾನ್​​ ಮಾಡಿರುವ ವಿಚಾರವಾಗಿ ಇಂದು ಶಿವಮೊಗ್ಗದಲ್ಲಿ ಮಾಜಿ ಸಚಿವ ಕೆ.ಎಸ್​ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಕೇಂದ್ರ ಸರ್ಕಾರ ದೇಶದ್ರೋಹಿ ಆಗಿರುವ ಪಿಎಫ್​ಐ ಸಂಘಟನೆಯನ್ನು ನಿಷೇಧ ಮಾಡಿದೆ. ಇದಕ್ಕೆ ಕಾಂಗ್ರೆಸ್​ ಹಾಗೂ ದೇಶ ಭಕ್ತ ಮುಸ್ಲಿಂ ನಾಯಕರು ಬೆಂಬಲ ನೀಡಬೇಕು. ಪಿಎಫ್​ಐ ಕಾರ್ಯಕರ್ತರಿಗೆ ಬುದ್ಧಿ ಹೇಳುವ ಕಾರ್ಯ ಮಾಡಬೇಕು. ಪಿಎಫ್​ಐ ಮರುಜನ್ಮ, ಮತ್ತೆ ಬರುತ್ತೇವೆ ಎಂಬ ಗೋಡೆ ಬರಹಗಳನ್ನು ಬರೆಯುತ್ತಿದ್ದಾರೆ. ಮುಂದೆ ಬಂದು ಈ ರೀತಿ ಮಾಡಿದರೆ ಸರ್ಕಾರ ಸರಿಯಾಗಿ ಸರ್ಕಾರ ಬುದ್ಧಿ ಕಲಿಸುತ್ತದೆ ಎಂದು ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಚಡ್ಡಿಗಳಿಗೆ ಬುದ್ಧಿ ಕಲಿಸುವ ಕುರಿತು ಕಾಂಗ್ರೆಸ್​​ ನಾಯಕರು ನೀಡಿರುವ ಹೇಳಿಕೆ ಆಕ್ರೋಶ ಹೊರ ಹಾಕಿದ ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ, ಆರ್​ಎಸ್​ಎಸ್​ನವರನ್ನು ಯಾರಿಂದಲೂ ಏನೂ ಮಾಡಲು ಸಾಧ್ಯವಿಲ್ಲ. ಅವರ ಅಪ್ಪನಿಂದಲೂ ಬುದ್ಧಿ ಕಲಿಸಲು ಸಾಧ್ಯವಿಲ್ಲ. ಈ ರೀತಿ ಸಂಘಟನೆಗಳು ಮತ್ತೆ ಹುಟ್ಟಿಕೊಂಡರೆ ಅಂತವರ ಸೊಂಟ ಬೆನ್ನು ಮುರಿಯುವ ಶಕ್ತಿ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಪರೇಶ್​ ಮೆಸ್ತಾ ಪ್ರಕರಣದ ವಿಚಾರವಾಗಿಯೂ ಇದೇ ವೇಳೆ ಮಾತನಾಡಿದ ಅವರು, ಈ ಪ್ರಕರಣವನ್ನು ಮರು ತನಿಖೆಗೆ ಒಳಪಡಿಸಬೇಕು. ಸರ್ಕಾರದ ನಿಟ್ಟಿನಲ್ಲಿ ಸರ್ಕಾರ ಗಮನ ಹರಿಸಬೇಕಿದೆ. ನಾನು ಕೂಡ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ. ಆ ಸಂದರ್ಭದಲ್ಲಿ ಸರಿಯಾದ ತನಿಖೆ ಆಗಿಲ್ಲ ಎನ್ನುವುದು ಕುಟುಂಬಸ್ಥರು ಹಾಗೂ ಹಿಂದೂ ಯುವಕರ ಒತ್ತಾಯವಾಗಿದೆ, ಈ ಹಿನ್ನೆಲೆಯಲ್ಲಿ ಮರು ತನಿಖೆ ನಡೆಸಬೇಕು. ಅದಾದ ನಂತರ ಯಾವುದೇ ವರದಿ ಬಂದರೂ ನಾವು ಅದನ್ನು ಒಪ್ಪಿಕೊಳ್ಳಬೇಕು ಎಂದು ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಇದನ್ನು ಓದಿ : Mallikarjun Kharge:ಎಐಸಿಸಿ ಚುನಾವಣೆಗೆ ಯಾರೂ ಬೇಕಾದರೂ ಸ್ಪರ್ಧಿಸಬಹುದು: ಮಲ್ಲಿಕಾರ್ಜುನ್​ ಖರ್ಗೆ ಸ್ಪಷ್ಟನೆ

ಇದನ್ನೂ ಓದಿ : Kodi mutt sree:ರಾಜ್ಯಕ್ಕೆ ಕಾದಿದೆ ದೊಡ್ಡ ಅವಘಡ,ಕುಡಿಯೋಕೆ ನೀರು ಸಿಗದ ಪರಿಸ್ಥಿತಿ ಬರುತ್ತೆ : ಕೋಡಿಮಠದ ಸ್ವಾಮೀಜಿ ಭವಿಷ್ಯ

ಇದನ್ನೂ ಓದಿ : Uttarakhand avalanche: ಉತ್ತರಾಖಂಡ ಹಿಮಪಾತದಲ್ಲಿ ಸಿಲುಕಿದ ಕನ್ನಡಿಗರು

‘No one can teach RSS’: KS Eshwarappa

Comments are closed.