Wikipedia QR Code: ಪ್ರವಾಸಿ ತಾಣಗಳ ಮಾಹಿತಿಗೆ ಇನ್ಮುಂದೆ ಕ್ಯೂ. ಆರ್.ಕೋಡ್‌: ಉಡುಪಿ ಡಿಸಿ ಕೂರ್ಮರಾವ್‌ ಎಂ

ಉಡುಪಿ: (Wikipedia QR Code) ಉಡುಪಿ ಜಿಲ್ಲೆ ಅನೇಕ ಪ್ರವಾಸಿ ತಾಣಗಳಿಗೆ ಹೆಸರುವಾಸಿಯಾಗಿದ್ದು, ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ಕ್ಯೂ ಅರ್‌ ಕೋಡ್‌ ಅಳವಡಿಸಲು ಸೂಚನೆ ನೀಡಲಾಗಿದೆ. ಈ ಪ್ರವಾಸಿ ತಾಣಗಳ ಬಗೆಗಿನ ಮಾಹಿತಿಯನ್ನು ಇನ್ನು ಮುಂದೆ ಕ್ಯೂ ಆರ್‌ ಕೋಡ್‌ (Wikipedia QR. Code) ಮೂಲಕ ಸ್ಕ್ಯಾನ್‌ ಮಾಡಿ ಪಡೆಯಬಹುದಾಗಿದೆ ಎಂದು ಜಿಲ್ಲಾಧಿಕಾರಿ ಕೂರ್ಮರಾವ್‌ ಎಂ ಹೇಳಿದರು.

ಭಾನುವಾರ ಅಜ್ಜರಕಾಡು ಭುಜಂಗ ಪಾರ್ಕ್‌ ನಲ್ಲಿ ಡಾ.ಜಿ ಶಂಕರ್‌ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಇವರ ಸಹಯೋಗದೊಂದಿಗೆ ನಡೆದ ಜಿಲ್ಲೆಯ ಪ್ರೇಕ್ಷಣೀಯ ಸ್ಥಳಗಳಿಗೆ ಇಲಾಖೆಯ ಕ್ಯೂ ಆರ್‌ ಕೋಡ್‌ (Wikipedia QR. Code) ಬೋರ್ಡ್‌ ಅಳವಡಿಸುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿಗಳು, “ಉಡುಪಿ ಹಲವು ಪ್ರೇಕ್ಷಣೀಯ ಸ್ಥಳಗಳನ್ನು ಹೊಂದಿದ್ದು, ಈ ಸ್ಥಳಗಳ ವೀಕ್ಷಣೆಗೆ ಹಲವಾರು ಪ್ರವಾಸಿಗರು ಆಗಮಿಸುತ್ತಾರೆ.

ಹಲವಾರು ಪ್ರವಾಸಿಗರು ಪ್ರೇಕ್ಷಣೀಯ ಸ್ಥಳಗಳಿಗೆ ತೆರಳಿದರೂ ಕೂಡ ಅಲ್ಲಿನ ವೈಶಿಷ್ಟ್ಯತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಅವರಿಗೆ ದೊರೆಯುತ್ತಿಲ್ಲ. ಪ್ರೇಕ್ಷಣೀಯ ಸ್ಥಳಗಳಿಗೆ ಬೇಟಿ ನೀಡಿದರು ಕೂಡ ಅದರ ಬಗ್ಗೆ ಮಾಹಿತಿ ಸಿಗಲಿಲ್ಲ ಎಂಬ ಕೊರಗು ಪ್ರವಾಸಿಗರಿಗೆ ಕಾಡುತ್ತದೆ. ಹೀಗಾಗಿ ಜಿಲ್ಲೆಯ ಪ್ರಸ್ತುತ ಮೂವತ್ತು ಪ್ರೇಕ್ಷಣೀಯ ಸ್ಥಳಗಳಿಗೆ ಕ್ಯೂ ಆರ್‌ ಕೋಡ್‌ (Wikipedia QR. Code) ಮೂಲಕ ಅಲ್ಲಿನ ಪ್ರದೇಶದ ಇತಿಹಾಸ ಸೇರಿದಂತೆ ಸಂಪೂರ್ಣ ವಿವರಗಳನ್ನು ಕನ್ನಡ ಸೇರಿದಂತೆ ಇತರೆ ಭಾಷೆಗಳಲ್ಲಿ ವೀಕ್ಷಿಸಲು ಸಾಧ್ಯವಾಗಲಿದ್ದು, ಇದರಿಂದ ಜಿಲ್ಲೆಯ ಪ್ರವಾಸೋದ್ಯಮ ಬೆಳವಣಿಗೆಗೆ ಇನ್ನಷ್ಟು ಸಹಕಾರಿಯಾಗಲಿದೆ” ಎಂದರು.

ಇದನ್ನೂ ಓದಿ : Lokayukta Justice BS Patil: ಧರ್ಮಸ್ಥಳ ಭೇಟಿ ನೀಡಿದ ಲೋಕಾಯಕ್ತ ನ್ಯಾಯಮೂರ್ತಿ: ದೇವರ ದರ್ಶನ ಬಳಿಕ ಧರ್ಮಾಧಿಕಾರಿ ಭೇಟಿ

ಇದನ್ನೂ ಓದಿ : Congress New formula : 2 ಬಂಟ, 2 ಬಿಲ್ಲವ, 2 ಮುಸ್ಲೀಂ,1 ಕ್ರಿಶ್ಚಿಯನ್ : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾಂಗ್ರೆಸ್ ಹೊಸ ಸೂತ್ರ

ಇದನ್ನೂ ಓದಿ : tipper Theft : ಸಾಸ್ತಾನ ಟೋಲ್ ಗೇಟ್, ನಿಲ್ಲಿಸಿದ್ದ ಟಿಪ್ಪರ್ ಕಳವು

ಜಿಲ್ಲೆಯಲ್ಲಿರುವ ಎಲ್ಲಾ ಪ್ರವಾಸಿತಾಣಗಳ ಕುರಿತಂತೆ ಸಂಪೂರ್ಣ ವಿವರಗಳನ್ನು ಸಂಗ್ರಹಿಸಿ ಇದೇ ರೀತಿಯಲ್ಲಿ ಕ್ಯೂ ಆರ್‌ ಕೋಡ್‌ (Wikipedia QR. Code) ಗಳನ್ನು ಆ ಪ್ರದೇಶದಲ್ಲಿ ಅಳವಡಿಸುವಂತೆ ಪ್ರವಾಸೋದ್ಯಮ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಜಿಲ್ಲಾಧಿಕಾರಿಗಳು, ಪ್ರವಾಸಿ ತಾಣಗಳ ಇತಿಹಾಸ ಮತ್ತು ಮಾಹಿತಿಗಳನ್ನು ಅಳವಡಿಸುವಾಗ, ನಿಖರ ಮತ್ತು ಅಧಿಕೃತ ಮಾಹಿತಿಗಳನ್ನು ಸಂಗ್ರಹಿಸಿ ಪರಿಶೀಲಿಸುವಂತೆ ತಿಳಿಸಿದರು.

English News click Here

Wikipedia QR Code planning: Q for information on tourist spots. R. Code: Udupi DC Kurma rao M

Comments are closed.