GoldMan Sachs mass lay off: ಗೋಲ್ಡ್‌ ಮನ್ ಸ್ಯಾಕ್ಸ್‌ ನಲ್ಲಿ ಉದ್ಯೋಗಿಗಳ ಕಡಿತ: 3100 ಉದ್ಯೋಗಿಗಳ ವಜಾ

ನವದೆಹಲಿ: (GoldMan Sachs mass lay off) ಗೋಲ್ಡ್‌ ಮನ್ ಸ್ಯಾಕ್ಸ್‌ ನಲ್ಲಿ ಉದ್ಯೋಗಿಗಳ ಕಡಿತ: 3100 ಉದ್ಯೋಗಿಗಳ ವಜಾ) ಈಗಾಗಲೇ ಮೆಟಾ ಸೇರಿದಂತೆ ಹಲವು ಐಟಿ ಕಂಪನಿಗಳು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ. ಇದರ ಬೆನ್ನಲ್ಲೇ ಗೋಲ್ಡ್‌ ಮನ್ ಸ್ಯಾಕ್ಸ್ ಕಂಪನಿ ಕೂಡ ತನ್ನ ಅಂಗಸಂಸ್ಥೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಉದ್ಯೋಗ ಕಡಿತ ಮಾಡಲಿದೆ ಎಂದು ಮೂಲಗಳು ತಿಳಿಸಿವೆ. ಕಂಪನಿಯು ಆರ್ಥಿಕ ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.

ಫೆಸ್‌ ಬುಕ್‌, ಟ್ವಿಟರ್‌ ಹಾಗೂ ಇನ್ನೂ ಕೆಲವು ಕಂಪನಿಗಳಿಂದ ಈಗಾಗಲೇ ಹಲವು ಉದ್ಯೋಗಿಗಳನ್ನು ವಜಾಗೊಳಿಸಲಾಗಿದೆ. ಅದರ ಬೆನ್ನಲ್ಲೇ ಇದೀಗ ಗೋಲ್ಡ್‌ ಮನ್ ಸ್ಯಾಕ್ಸ್‌ ಕಂಪನಿ ಕೂಡ ವಿವಿಧ ಅಂಗಸಂಸ್ಥೆಗಳಿಂದ ಸುಮಾರು ಮೂರು ಸಾವಿರ ಉದ್ಯೋಗಿಗಳನ್ನು ವಜಾ(GoldMan Sachs mass lay off)ಗೊಳಿಸಲಿದೆ ಎಂದು ಅಂದಾಜಿಸಲಾಗಿದೆ. ಆದರೆ ಅಧಿಕೃತವಾಗಿ ಉದ್ಯೋಗಿಗಳ ಸಂಖ್ಯೆಯನ್ನು ಉಲ್ಲೇಖಿಸಿಲ್ಲ.

ಒಟ್ಟು 49,100 ಉದ್ಯೋಗಿಗಳ ಪೈಕಿ 3100 ಮಂದಿಯನ್ನು ಮೂರನೇ ತ್ರೈಮಾಸಿಕ ಅವಧಿಯ ಒಳಗೆ ಗೋಲ್ಡ್‌ ಮನ್‌ ಸ್ಯಾಕ್ಸ್‌ ವಜಾಗೊಳಿಸಲಿದೆ ಎಂದು ಇತ್ತೀಚೆಗೆ ವರದಿಯಾಗಿತ್ತು. ಕೋವಿಡ್‌ ಸಂದರ್ಭದಲ್ಲಿ ಹೆಚ್ಚಾಗಿ ನೇಮಕಾತಿ ಮಾಡಿಕೊಂಡಿದ್ದರ ಕಾರಣದಿಂದ ಗೋಲ್ಡ್‌ ಮನ್‌ ಸ್ಯಾಕ್ಸ್‌ ಸಮೂಹದ ಹೂಡಿಗೆ ಬ್ಯಾಂಕಿಂಗ್‌ ವಿಭಾಗದಿಂದಲೇ ಹೆಚ್ಚಿನ ಉದ್ಯೋಗ ಕಡಿತವಾಗಲಿದ್ದು, ಇತರ ವಿಭಾಗಗಳಲ್ಲಿಯೂ ಉದ್ಯೋಗ ಕಡಿತ ಮಾಡುವ ಸಾಧ್ಯತೆಯಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ : Education Loan : ಉನ್ನತ ಶಿಕ್ಷಣಕ್ಕೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತವೆ ಈ ಬ್ಯಾಂಕುಗಳು

ಇದನ್ನೂ ಓದಿ : Arecanut Price Increase : ಮತ್ತೆ ಮಾರುಕಟ್ಟೆಯಲ್ಲಿ ಏರಿಕೆ ಕಂಡ ಅಡಿಕೆ ಬೆಲೆ : ಎಲ್ಲೆಲ್ಲಿ ಎಷ್ಟೆಷ್ಟು ಏರಿಕೆ ?

ಹೂಡಿಕೆ ಬ್ಯಾಂಕಿಂಗ್‌ ಶುಲ್ಕದಲ್ಲಿ ಭಾರೀ ಇಳಿಕೆಯಾಗಿರುವುದು ಕಂಪನಿಯ ಆದಾಯಕ್ಕೆ ಭಾರೀ ಹೊಡೆತ ಬಿದ್ದಿದೆ. ಈ ಕಾರಣದಿಂದ ಮೆಟಾ, ಟ್ವಿಟರ್‌, ಅಮೆಜಾನ್‌ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿರುವ ನಡುವೆಯೇ ಗೋಲ್ಡ್‌ ಮ್ಯಾನ್‌ ಸ್ಯಾಕ್ಸ್‌ ಕೂಡ ಉದ್ಯೋಗ ಕಡಿತದ ಮೊರೆ ಹೋಗಿದೆ. ಜನವರಿ ಒಂದರಿಂದ ಐದು ದಿನಗಳ ಒಳಗಾಗಿ ಟೆಕ್‌ ಕಂಪನಿಗಳು ಸುಮಾರು ಇಪ್ಪತ್ತೆಂಟು ಸಾವಿರಕ್ಕೂ ಹೆಚ್ಚು ಉದ್ಯೋಗಿಗಳು ಕೆಲಸ ಕಳೆದುಕೊಂಡಿದ್ದಾರೆ.

GoldMan Sachs mass lay off: Job cuts at Goldman Sachs: 3100 laid off

Comments are closed.