ತೆಲಂಗಾಣದ ರಾಜಣ್ಣ ಸಿರ್ಸಿಲ್ಲಾ ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಸುರಿದ ಭಾರಿ ಮಳೆಗೆ ನೆಲಕ್ಕುರುಳಿದ್ದ 70 ವರ್ಷದ ಬೃಹತ್ ಆಲದ ಮರಕ್ಕೆ (70 Year Old Banyan Tree) ಹೊಸ ಜೀವ ತುಂಬಿ ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆಲದಮರಕ್ಕೆ ಮರುಜೀವ ತುಂಬಿದ ಕಥೆ ಪರಿಸರ ಪ್ರಿಯರ ಶ್ಲಾಘನೆಗೆ ಪಾತ್ರವಾಗಿದ್ದು (Good News) ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸ್ಥಳೀಯ ಜಿಲ್ಲಾಡಳಿತದ ಸಹಕಾರದೊಂದಿಗೆ ಟಿಆರ್‌ಎಸ್‌ನ ರಾಜ್ಯಸಭಾ ಸಂಸದ ಜೆ.ಸಂತೋಷ್‌ಕುಮಾರ್ ಮಾತನಾಡಿ, ಬುಡ ಸಮೇತ ಕಿತ್ತುಹಾಕಿದ ಮರ ನೀರಿನ ಕೊರತೆಯಿಂದ ಒಣಗಲಾರಂಭಿಸಿತ್ತು. ಭಾನುವಾರ ಮರವನ್ನು ಯಶಸ್ವಿಯಾಗಿ ಸ್ಥಳಾಂತರಿಸಲಾಗಿದೆ ಎಂದು ಅವರು ಹೇಳಿದರು.
ಈಮುನ್ನ ಮಳೆಗಾಲದಲ್ಲಿ ಮುರಿದು ಬಿದ್ದಿದ್ದ ಮರವನ್ನು ಗಮನಿಸಿದ ಅದೇ ಗ್ರಾಮದ ನಿಸರ್ಗ ಪ್ರೇಮಿ ದೊಬ್ಬಾಳ ಪ್ರಕಾಶ್ ಎಂಬುವವರು ಎರಡು ತಿಂಗಳ ಕಾಲ ಮರಕ್ಕೆ ನೀರು ಹಾಕಿದರು. ಇದರಿಂದ ಒಣಗುತ್ತಿದ್ದ ಹೊಸ ಎಲೆಗಳು ಚಿಗುರತೊಡಗಿದವು. ಪರಿಸರವನ್ನು ರಕ್ಷಿಸಲು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ದೇಶದಾದ್ಯಂತ ಗ್ರೀನ್ ಇಂಡಿಯಾ ಚಾಲೆಂಜ್ ಕಾರ್ಯಕ್ರಮವನ್ನು ಪ್ರಾರಂಭಿಸಿದ ಸಂತೋಷ್ ಕುಮಾರ್ ಅವರಿಗೆ ಈ ಆಲದಮರದ ಸುದ್ದಿ ತಿಳಿಯುತ್ತಿದ್ದಂತೆ ಆಲದಮರವನ್ನು ಸ್ಥಳಾಂತರಿಸಲು ಯೋಜನೆ ರೂಪಿಸಲು ಆರಂಭಿಸಿದರು. ಆದರೆ ಮರವನ್ನು ಸುಮಾರು 6 ಕಿಮೀ ದೂರದ ಸ್ಥಳಕ್ಕೆ ಸ್ಥಳಾಂತರಿಸಬೇಕಾದಾಗ ನಿಜವಾದ ತೊಂದರೆ ಎದುರಾಯಿತು. ಮರವನ್ನು ಸುಲಭವಾಗಿ ಸಾಗಿಸಲು ವಿಶೇಷ ರಸ್ತೆಯನ್ನು ನಿರ್ಮಿಸಲಾಯಿತು.
One of the most satisfying moments in my life. A 70-year old huge banyan #Tree that had been uprooted due to heavy rains in sircilla was translocated with the help of @KTRTRS garu. When I brought this issue to his notice, he immediately instructed concerned officials.
— Santosh Kumar J (@MPsantoshtrs) February 14, 2022
1/2 pic.twitter.com/fmpfh4NZiO
One of the most satisfying moments in my life. A 70-year old huge banyan #Tree that had been uprooted due to heavy rains in sircilla was translocated with the help of @KTRTRS garu. When I brought this issue to his notice, he immediately instructed concerned officials.
— Santosh Kumar J (@MPsantoshtrs) February 14, 2022
1/2 pic.twitter.com/fmpfh4NZiO
70 ಟನ್ ಸಾಮರ್ಥ್ಯದ ಎರಡು ಕ್ರೇನ್‌ಗಳನ್ನು ಬಳಸಿ ಮರವನ್ನು ಸ್ಥಳಾಂತರಿಸಲಾಯಿತು. ತಾಯಿ ಮರದಿಂದ ಅಂದರೆ ಮೂಲ ಮರದಿಂದ ಎರಡು ದೊಡ್ಡ ಕೊಂಬೆಗಳನ್ನು ತಂಗನ್ನಪಲ್ಲಿ ಮಂಡಲದ ಜಿಲ್ಲೆಲ್ಲಾ ಅರಣ್ಯ ಪ್ರದೇಶದಲ್ಲಿ ನೆಡಲಾಗಿದೆ ಎಂದು ಕುಮಾರ್ ಮಾಹಿತಿ ನೀಡಿದರು.
ಇದನ್ನೂ ಓದಿ: China: ಚೀನಾ ಹೆದರುವುದು ಈ ಎರಡು ವಿಷಯಕ್ಕೆ ಮಾತ್ರ!
ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 1
ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 2
ಇದನ್ನೂ ಓದಿ: Term Life Insurance Plans: ಟರ್ಮ್ ಇನ್ಶೂರೆನ್ಸ್ ಯೋಜನೆ ಪ್ರಾರಂಭಿಸಲು ನೀವು ತಿಳಿದಿರಬೇಕಾದ ಅತ್ಯಗತ್ಯ ಮಾಹಿತಿಗಳು: ಭಾಗ 3
(70 year old Banyan tree uprooted due to heavy rains replanted in Telangana)